ಎಚ್.ಪಿ.ವಿ ಲಸಿಕೆ ಸುರಕ್ಷಿತ ಭಯ, ಮೂಡ ನಂಬಿಕೆ ಬೇಡ – ಸಾರ್ವಜನಿಕವಾಗಿ ಕರೆ ನೀಡಿದ ಎಸ್. ಎಸ್ ಅಂಗಡಿ.
ಅಮೀನಗಡ ಆ.19

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ತಾಲೂಕಾ ಆರೋಗ್ಯ ಅಧಿಕಾರಿಗಳು ಹುನಗಂದ ಸಹಯೋಗದಲ್ಲಿ, ಅಮೀನಗಡ ಪಟ್ಟಣದ ಎಕ್ಸಲೆಂಟ್ ಇಂಗ್ಲೀಷ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಗೆ ಎಚ್ ಪಿ ವಿ ಹ್ಯೂಮನ್ ಪ್ಯಾಪಿಲೋಮ ವೈರಸ್ ಲಸಿಕಾ ಜಾಗೃತಿ ಶಿಕ್ಷಣ ಆಯೋಜಿಸಲಾಗಿತ್ತು. ಶಾಲಾ ಮುಖ್ಯ ಶಿಕ್ಷಕರಾದ ಸಂತೋಷ ಮಠಪತಿ, ಅಧ್ಯಕ್ಷತೆ ವಹಿಸಿದ್ದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ ಅತಿಥಿಯಾಗಿ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸಿ.ಎಸ್ ಕೊಲ್ಕಾರ. ಶಾಲಾ ಗುರು ಮಾತೆ ವಾಣಿಶ್ರೀ ಅರಳೆಲೆಮಠ ಎಚ್ ಪಿ ವಿ ಲಸಿಕಾ ಮಾಹಿತಿ ಪತ್ರ ಅನಾವರಣ ಮುಖಾಂತರ ಎಚ್ ಪಿ ವಿ ಲಸಿಕಾ ಜಾಗೃತಿ ಶಿಕ್ಷಣಕ್ಕೆ ಚಾಲನೆ ನೀಡಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ ಗರ್ಭಕಂಠ ಕ್ಯಾನ್ಸರ್ ತಡೆಗೆ ಎಚ್ ಪಿ ವಿ ಲಸಿಕೆ ಪರಿಣಾಮಕಾರಿ ಯಾಗಿದೆ. ಸೋಂಕು ಹರಡುವುದನ್ನು ಲಸಿಕೆ ತಡೆಯುತ್ತದೆ.
ಲಸಿಕೆ ವೈಜ್ಞಾನಿಕವಾಗಿ ಪ್ರಾಯೋಗಿಕವಾಗಿ ಗರ್ಭಕಂಠ ಕ್ಯಾನ್ಸರ್ ತಡೆಯುವಲ್ಲಿ ಯಶಸ್ವಿ ಯಾಗಿದೆ. 14 ವರ್ಷ ಪೂರ್ಣ ಗೊಂಡ 15 ವರ್ಷ ದೊಳಗಿನ ವಿದ್ಯಾರ್ಥಿಗಳಿಗೆ ಎಚ್ ಪಿ ವಿ ಲಸಿಕೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಲಾಗುವುದು ಲಸಿಕೆ ಸುರಕ್ಷಿತವಾಗಿದೆ ಮೂಢ ನಂಬಿಕೆ ಬೇಡ ಭಯ ಬಿಟ್ಟು ಲಸಿಕೆ ಹಾಕಿಸಿ ಕೊಳ್ಳಬೇಕು ಎಂದರು.
ಸಿ.ಎಸ್ ಕೊಲ್ಕಾರ ರವರು ಸಮತೋಲನ ಆಹಾರ ಸೇವನೆ ಕುರಿತು ಮಾಹಿತಿ. ನೀಡಿ ಪೋಷಕಾಂಶಯುಕ್ತ ಸಮತೋಲನ ಸೇವನೆ ಕುರಿತು ಮಾಹಿತಿ ನೀಡಿದರು. ಮುಖ್ರ ಶಿಕ್ಷಕರಾದ ಸಂತೋಷ ಮಠಪತಿಯವರು ಆರೋಗ್ಯ ಇಲಾಖೆಯ ಎಚಿ ಪಿ ವಿ ಲಸಿಕೆ ಪಡೆದು ಗರ್ಭಕಂಠ ಕ್ಯಾನ್ಸರ್ ತಡೆಯೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎಚ್ ಪಿ ವಿ ಲಸಿಕಾ ಜಾಗೃತಿ ಶಿಕ್ಷಣ ಕಾರ್ಯಕ್ರಮದಲ್ಲಿ ಆರೋಗ್ಯ ಅಧಿಕಾರಿಗಳು ಶಾಲಾ ಗುರು ವೃಂದವರು, ಆಶಾ ಕಾರ್ಯಕರ್ತೆಯರು. ಶಾಲಾ ವಿದ್ಯಾರ್ಥಿನಿಯರು ಉತ್ಸಾಹದಿಂದ ಭಾಗವಹಿಸಿ “ಎಚ್ ಪಿ ವಿ ಜಾಗೃತಿ ಶಿಕ್ಷಣ” ಕಾರ್ಯಕ್ರಮ ಯಶಸ್ವಿ ಗೊಳಿಸಿದರು ಎಂದು ವರದಿಯಾಗಿದೆ.
