ನೇತಾಜಿ ಸ್ನೇಹ ಬಳಗದಿಂದ ಸುಭಾಷ್ ಚಂದ್ರ ಬೋಸ್ ರ – 82 ನೇ. ಪುಣ್ಯ ಸ್ಮರಣೆ.
ಚಳ್ಳಕೆರೆ ಆ.20

ನಗರದ ನೇತಾಜಿ ಸ್ನೇಹ ಬಳಗದಿಂದ ನ್ಯಾಷನಲ್ ಮತ್ತು ಭಾನು ಸ್ಟುಡಿಯೋದ ಕಛೇರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 82 ನೇ. ವರ್ಷದ ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸುಭಾಷ್ ಚಂದ್ರ ಬೋಸರ ಬಗ್ಗೆ ಸಾಮಾಜಿಕ ಹೋರಾಟಗಾರ ಹೆಚ್.ಎಸ್ ಸೈಯದ್, ಐಟಿಐ ಕಾಲೇಜಿನ ಪ್ರಾಂಶುಪಾಲರಾದ ರಮೇಶ್, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ಮಾತನಾಡಿದರು.

“ಎಲ್ಲರ ಗಮನ ಸೆಳೆದ ನೇತಾಜಿ ಕೈ ಬರಹದ ಪತ್ರ”:-
ಚಿತ್ರದುರ್ಗದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕಲಾವಿದ ಮಹಮದ್ ಜಾಫರ್ ಅವರಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ರು ಬರೆದ ಕೈ ಬರಹದ ಪತ್ರವನ್ನು ನೇತಾಜಿ ಸ್ನೇಹ ಬಳಗದ ಅಧ್ಯಕ್ಷ ನೇತಾಜಿ ಪ್ರಸನ್ನ ಪ್ರದರ್ಶಿಸಿ ಅದರ ಬಗ್ಗೆ ಮಾಹಿತಿ ನೀಡಿದರು.

ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಂಡಿ ಮಂಜಣ್ಣ, ಭಾನು ಸ್ಟುಡಿಯೋದ ಮಾಲೀಕರಾದ ಅಶೋಕ್ ಭಾನು, ಮೃತ್ಯುಂಜಯ, ಬೆಂಗಳೂರು ಮಂಜು, ಕೌಶಿಕ್, ಸಂಜಯ್, ಡಾಕ್ಯಾನಾಯ್ಕ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

