ಗ್ರಾಮದಲ್ಲಿ ಸಂಭ್ರಮದಿಂದ ಕೆರೆ ಕಟ್ಟುವ – ಹಬ್ಬ ಆಚರಣೆ.

ತಾರಾಪುರ ಆ.19

ಆಲಮೇಲ ತಾಲೂಕಿನ ತಾರಾಪುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಹನುಮಾನ್ ದೇವರ ಅವರಣದಲ್ಲಿ ಸಮಸ್ತ ತಾರಾಪುರ ಗ್ರಾಮದ ಮಹಿಳೆಯರು ಮಕ್ಕಳು ಯಾವುದೇ ಜಾತಿ ಭೇದವಿಲ್ಲದೆ ಕರೆ ಕಟ್ಟುವ ಪದ್ಧತಿ ಹಿಂದಿನಿಂದ ಬಂದ ಸಂಪ್ರದಾಯವನ್ನು ಇನ್ನೂ ನಮ್ಮ ಹಳ್ಳಿಗಳಲ್ಲಿ ಮಹಿಳೆಯರು ಹಬ್ಬವನ್ನು ಮಾಡುತ್ತಾ. ಹಿಂದಿನ ಪದ್ಧತಿಯನ್ನು ಇನ್ನೂ ಉಳಿಸಿ ಕೊಂಡು ಬಂದಿದ್ದಾರೆ.

ನಮ್ಮ ಉತ್ತರ ಕರ್ನಾಟಕದ ಸಿಹಿ ಸಿಹಿ ಊಟವಾದ ಜಜ್ಜಿ ರೊಟ್ಟಿ ಪುಂಡಿ ಪಲ್ಯ ಬದನೆಕಾಯಿ ಪಲ್ಯ ಶೇಂಗಾ ಚಟ್ನಿ ಶೇಂಗಾದ ಹೋಳಿಗೆ ಹಾಗೂ ನಾನಾ ತರಹದ ಸಿಹಿ ತಿನಿಸುಗಳನ್ನು ಸವಿದ ನಂತರ. ಜನಪದ ವೈಭವ ಮತ್ತು ಸಂಸ್ಕೃತಿ ಕಳೆ ಕಟ್ಟಿತ್ತು.

ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ನಾಗರ ಪಂಚಮಿ ಅತ್ಯಂತ ಸಡಗರದಿಂದ ಜರುಗುತ್ತದೆ ವಿಶೇಷವಾಗಿ ಹೆಣ್ಣು ಮಕ್ಕಳು ಒಗ್ಗೂಡಿ ಮರಗಳಿಗೆ ಜೋಕಾಲಿ ಕಟ್ಟಿ ಜಾನ ಪದಗಳನ್ನು ಹಾಡುತ್ತಾ ಮಹಿಳೆಯರು ಸರಬಿ ಆಟ ಆಡಿ ಸಂಭ್ರಮಿಸಿದರು.

ನಂತರ ಐದು ಜನ ಮುತ್ತೈದೆಯರು ಐದು ಕಳಸಗಳನ್ನು ಭೀಮಾ ನದಿಯಲ್ಲಿ ನೀರು ತುಂಬಿ ಕೊಂಡು ಬಂದ ನಂತರ ಸಂಪ್ರದಾಯ ಪ್ರಕಾರ ಪೂಜೆ ಸಲ್ಲಿಸಿ ಎಲ್ಲಾ ಮಹಿಳೆಯರು ಕೂಡಿಕೊಂಡು ಕೆರೆ ಕಟ್ಟೆ ಹೊಡೆದು ರೈತನಿಗೆ ಮಳೆ ಬೆಳೆ ಶಾಂತಿ ಸಮೃದ್ಧಿ ಮತ್ತು ಸುಖ ಶಾಂತಿಯನ್ನು ಕರುಣಿಸಲಿ ಎಂದು ಮಹಿಳೆಯರು ದೇವರಲ್ಲಿ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದಲ್ಲಿ ಮಹಿಳೆಯರು ಮಕ್ಕಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button