ಗ್ರಾಮದಲ್ಲಿ ನಾಗೇಶಗೆ ಹಾಲು – ಯರಿದ ಮಹಿಳೆಯರು.

ತಾರಾಪುರ ಆ.19

ಆಲಮೇಲ ಸಮೀಪದ ತಾರಾಪುರ ಗ್ರಾಮದಲ್ಲಿ ನಾಗರ ಪಂಚಮಿ ನಿಮಿತ್ಯವಾಗಿ. ಶ್ರಾವಣ ಮಾಸದ ಆಗಮನ ದೊಂದಿಗೆ ನಾಡ ನಾಡಿನಾದ್ಯಂತ ಹಬ್ಬಗಳ ಸುಗ್ಗಿ ಆರಂಭವಾಗಿದ್ದು ಈ ಮಾಸದ ಮೊದಲ ಪ್ರಮುಖ ಹಬ್ಬವಾದ ನಾಗರ ಪಂಚಮಿಗೆ ರಾಜ್ಯದೆಲ್ಲೆಡೆ ಸಂಭ್ರಮದಿಂದ ಆಚರಿಸುತ್ತಾರೆ.

ಶ್ರಾವಣ ಶುಕ್ಲ ಪಕ್ಷದ ಪಂಚಮಿ ಎಂದು ಆಚರಿಸಲಾಗುವುದು ಈ ಪವಿತ್ರ ಪರ್ವವು ಮನಸ್ಸು ಮತ್ತು ಪ್ರಕೃತಿ ಹಾಗೂ ಜೀವ ರಾಶಿಗಳ ನಡುವಿನ ಆವಿನಾಭಾವ ಸಂಬಂಧವನ್ನು ಸಾರುತ್ತದೆ.

ಸಂಪ್ರದಾಯ ಮತ್ತು ಧಾರ್ಮಿಕ ಹಿನ್ನೆಲೆ ಕೃಷಿ ಸಂಸ್ಕೃತಿಯಲ್ಲಿ ರೈತನ ಮಿತ್ರ ಎಂದೇ ಪರಿಗಣಿತವಾಗಿರುವ ನಾಗ ದೇವರಿಗೆ ಪೂಜೆ ಸಲ್ಲಿಸುವುದು ಈ ಹಬ್ಬದ ಮುಖ್ಯ ವಿಶೇಷ ಏನೆಂದರೆ ದೇವಸ್ಥಾನಗಳಲ್ಲಿನ ನಾಗರಕಲ್ಲು ಹಾಗೂ ಹುತ್ತಗಳಿಗೆ ಹಾಲು. ಆರಿಶಿನ. ಕುಂಕುಮ. ಹೂವು. ಮತ್ತು ಗೆಜ್ಜೆಯ ವಸ್ತ್ರವನ್ನು ಅರ್ಪಿಸಿ ನಾಗದೋಷ ಶಮನ ಹಾಗೂ ಕುಟುಂಬದ ಕ್ಷೇಮ ಅಭಿವೃದ್ದಿಗಾಗಿ ಮಹಿಳೆಯರು ಭಕ್ತಿಯಿಂದ ಬೇಡಿ ಕೊಂಡರು.

ಸಹೋದರತ್ವದ ಹಬ್ಬ:-

ನಾಗರ ಪಂಚಮಿಯು ಅಣ್ಣ. ತಂಗಿಯರ ಬಾಂಧವ್ಯವನ್ನು ಗಟ್ಟಿ ಗೊಳಿಸುವ ಪರ್ವ ದಿನವೂ ಹೌದು. ಹೆಣ್ಣು ಮಕ್ಕಳು ತಮ್ಮ ಸೋದರರ ದೀರ್ಘ ಕಾಲ ಆಯುಷ್ಯ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ನಾಗ ದೇವರಿಗೆ ಹಾಲು ಯೆರೆದು ಪ್ರಾರ್ಥಿಸುವುದು ಪುರಾತನ ಕಾಲದಿಂದಲೂ ಬೆಳೆದು ಬಂದ ಸಂಪ್ರದಾಯ.

ತಂಬಿಟ್ಟು ಮತ್ತು ಎಳ್ಳಿನ ಉಂಡಿ. ಎಳ್ಳು ಬೆಲ್ಲ ಹಾಗೂ ಅಕ್ಕಿ ಹಿಟ್ಟಿನ ತಯಾರಿಸಿದ ತಂಬುಟ್ಟು ಹಬ್ಬದ ಮುಖ್ಯ ನೈವೇದ್ಯ ಎಂದು ಹಿಂದಿನ ಹಿರಿಯರು ಹೇಳುತ್ತಾರೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button