ಮಕ್ಕಳಿಗೆ ಲೇಖನ ಸಾಮಗ್ರಿಗಳ – ವಿತರಿಸಿದ ಸುಧಾಮಣಿ.
ಕಾಟವ್ವನಹಳ್ಳಿ ಆ.18


ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 46 ಮಕ್ಕಳಿಗೆ 80 ನೇ. ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಉದಾರ ದಾನಿಗಳಾದ ಚಳ್ಳಕೆರೆಯ ಶ್ರೀಮತಿ ಸುಧಾಮಣಿ ಅಮರನಾಥಗುಪ್ತ ಅವರ ಆರ್ಥಿಕ ನೆರವಿನಿಂದ ಪ್ಲೈವುಡ್, ಪೆನ್ಸಿಲ್ ಸೇರಿದಂತೆ ಲೇಖನ ಸಾಮಗ್ರಿಗಳನ್ನು ಕೊಡುಗೆಯಾಗಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ, ಸಹ ಶಿಕ್ಷಕಿ ಸಿ.ಎಸ್ ಭಾರತಿ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

