ಭಾವಭಕ್ತಿಯಿಂದ ನೀಡುವ ನೈವೇದ್ಯವನ್ನು ಭಗವಂತ ಸ್ವೀಕರಿಸುತ್ತಾನೆ – ಯತೀಶ್ ಎಂ ಸಿದ್ದಾಪುರ.
ಚಳ್ಳಕೆರೆ ಆ.28


ಭಾವಭಕ್ತಿಯಿಂದ ನೀಡುವ ನೈವೇದ್ಯವನ್ನು ಶ್ರೀರಾಮಕೃಷ್ಣರು ಸಾಕ್ಷಾತ್ ಆಗಿ ಸ್ವೀಕರಿಸುತ್ತಿದ್ದರು ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯ ಹಾಗೂ ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.

ನಗರದ ವಾಲ್ಮೀಕಿ ನಗರದ ಸದ್ಭಕ್ತರಾದ ಶ್ರೀಮತಿ ದಾಕ್ಷಾಯಣಿ ಗಿರೀಶ್ ಅವರ ನಿವಾಸದಲ್ಲಿ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನೆ ನಡೆಸಿ ಕೊಟ್ಟ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಶ್ರೀಮಾತೆ-ಶ್ರೀರಾಮಕೃಷ್ಣ ರೂಪವೆರಡು ಶಕ್ತಿಯೊಂದು” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.
ಸತ್ಸಂಗ ಸಭೆಯಲ್ಲಿ ದಾಕ್ಷಾಯಣಿ ಗಿರೀಶ್, ದಿವ್ಯ ದರ್ಶನ್, ದರಣೇಶ್, ಹೆಚ್ ಲಕ್ಷ್ಮೀದೇವಮ್ಮ, ರಂಗಮ್ಮ, ಗೀತಾ ನಾಗರಾಜ್, ವನಜಾಕ್ಷಿ ಪಂಚಾಕ್ಷರಿ, ಮಂಜುಳಾ ಬಸವರಾಜ್, ಮಂಗಳಾ, ಸುಭದ್ರ,ಜಾನಕಿ, ಲಾವಣ್ಯ, ಸವಿತಾ ತಿಪ್ಪೇರುದ್ರಪ್ಪ, ಜಯಮ್ಮ, ಸರಸ್ವತಿ ನಾಗರಾಜ್, ಸರಸ್ವತಿ ರಾಜು, ಸೌಮ್ಯ ಪ್ರಸಾದ್, ಲತಾ, ಗಾಯತ್ರಿ, ಗಿರಿಜಾ ಜಗದೀಶ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
