ಪೌರ ಕಾರ್ಮಿಕರಿಗೆ ವಸತಿ ಸೌಕರ್ಯ ಒದಗಿಸ ಬೇಕು – ಉಪ ವಿಭಾಗಾಧಿಕಾರಿ ಎನ್.ವಿ ನಟೇಶ್.
ತರೀಕೆರೆ ಆ.27


ಪೌರ ಕಾರ್ಮಿಕರು ಮನೆ ನಿವೇಶನವಿಲ್ಲದೆ ಇದ್ದಾರೆ ಇವರಿಗೆ ಪುರಸಭೆ ಗೃಹ ಭಾಗ್ಯ ಯೋಜನೆಯಡಿ ಹಾಗೂ ಕೊಳಚೆ ಅಭಿವೃದ್ದಿ ಮಂಡಳಿಯಿಂದ ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಸಮಿತಿ ಸದಸ್ಯರಾದ ತರೀಕೆರೆ ಎನ್ ವೆಂಕಟೇಶ್ ಇಂದು ಉಪ ವಿಭಾಗ ಅಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಉಪ ವಿಭಾಗ ಮಟ್ಟದ ಸಪಾಯಿ ಕರ್ಮಚಾರಿ ಮತ್ತು ಅದರ ಪುನರ್ ವಸತಿ ಕಾಯ್ದೆಯ ವೆಜಿಲೆನ್ಸಿ ಸಮಿತಿ ಸಭೆಯಲ್ಲಿ ಒತ್ತಾಯಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ಎನ್ ವಿ ನಟೇಶ್ ರವರು ಪೌರಕಾರ್ಮಿಕರಿಗೆ ವಸತಿ ಸೌಲಭ್ಯಗಳನ್ನು ಒದಗಿಸಬೇಕು ಈ ಕುರಿತು ಪುರಸಭಾ ಮುಖ್ಯ ಅಧಿಕಾರಿ ಹಾಗೂ ಕೊಳಚೆ ಅಭಿವೃದ್ಧಿ ಮಂಡಳಿಯ ಅಭ್ಯಂತರರಾದ ಯಶ್ವಂತ್ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅಜ್ಜಂಪುರ ಪಟ್ಟಣ ಪಂಚಾಯಿತಿ ಹಾಗೂ ಎನ್ ಆರ್ ಪುರ ಪಟ್ಟಣ ಪಂಚಾಯಿತಿ ಕಡೂರು, ಬೀರೂರು ಪುರ ಸಭೆಯ ಮುಖ್ಯ ಅಧಿಕಾರಿಗಳು ಪೌರಕಾರ್ಮಿಕರಿಗೆ ವಸತಿ ಸೌಕರ್ಯ ಕಲ್ಪಿಸಲು ಮನವಿ ಮಾಡಿದರು. ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕು ಮತ್ತು ಪೌರ ಕಾರ್ಮಿಕರ ಕಾಲೋನಿಗಳಲ್ಲಿ ಶುದ್ಧ ಗಂಗಾ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕು, ಅಂಬೇಡ್ಕರ್ ನಗರದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಉಪ ವಿಭಾಗ ಅಧಿಕಾರಿ ಮಾತನಾಡಿ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯವರ ಸಹಕಾರ ಪಡೆಯಿರಿ ಎಂದು ಸೂಚಿಸಿದರು.

ಪಟ್ಟಣದ ಹಳೆ ಸಂತೆ ಮೈದಾನದಲ್ಲಿ ಸುಮಾರು 15 ವರ್ಷಗಳಿಂದ ಉಪಯೋಗಕ್ಕಿಲ್ಲದ ಪುರಸಭಾ ಕಟ್ಟಡವನ್ನು ಆಯುಷ್ಮಾನ್ ಆರೋಗ್ಯ ಮಂದಿರ ತೆರೆಯಲು ಪುರಸಭೆಯವರು ಆರೋಗ್ಯ ಇಲಾಖೆಗೆ ವಹಿಸಿ ಕೊಡಬೇಕು ಎಂದು ಹೇಳಿದರು.
ಸಮಿತಿ ಸದಸ್ಯರಾದ ಜಿ ಟಿ ರಮೇಶ್ ಮಾತನಾಡಿ ನಗರಗಳಲ್ಲಿರುವಂತೆ ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತಾ ಕಾರ್ಮಿಕರನ್ನು ನೇಮಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳಿಸಬೇಕು ಎಂದು ಹೇಳಿದರು.
ಇನ್ನೋರ್ವ ಸಮಿತಿ ಸದಸ್ಯರಾದ ಕಡೂರಿನ ಸಚಿನ್ ಮಾತನಾಡಿ ಕಡೂರು ಅಂಬೇಡ್ಕರ್ ನಗರದಲ್ಲಿ ವಾಸವಾಗಿರುವ ಪೌರಕಾರ್ಮಿಕರಿಗೆ ನಿವೇಶನ ಮನೆ ಇರುವುದಿಲ್ಲ ಅವರಿಗೆ ಕೆ ಹೊಸಳ್ಳಿ ಗ್ರಾಮದ ಸರ್ವೆ ನಂಬರ್ 271ರಲ್ಲಿ ನಿವೇಶನ ಮನೆಗಳನ್ನು ಮಂಜೂರಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ತರೀಕೆರೆ ತಹಶೀಲ್ದಾರ್ ಹೆಚ್ ಜೆ ರಶ್ಮಿ, ಎನ್ಆರ್ ಪುರ ತಹಶೀಲ್ದಾರ್ ನೂರುಲ್ ಉದಾ ಹಾಗೂ ಪುರಸಭೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಮತ್ತು ತರೀಕೆರೆ ಸಮಾಜ ಕಲ್ಯಾಣ ಅಧಿಕಾರಿ ಮಂಜುನಾಥ್ ಕಡೂರು ಸಮಾಜ ಕಲ್ಯಾಣ ಅಧಿಕಾರಿ ನಟರಾಜ್ ಎನ್ಆರ್ ಪುರ ಸಮಾಜ ಕಲ್ಯಾಣ ಅಧಿಕಾರಿ ಪಾಟೀಲ್ ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

