50–55 ದಿನ ಸಿಲಿಂಡರ್‌ಗಾಗಿ ಕಾಯುವ ಸ್ಥಿತಿ – ಪ್ರತ್ಯೇಕ ಎಲ್‌.ಪಿ.ಜಿ ಏಜೆನ್ಸಿಗೆ ನಾಗರಿಕರ ಆಗ್ರಹ.

ತಾಳಿಕೋಟಿ ಆ.28

ಜನಸಂಖ್ಯೆ ಹಾಗೂ ವಾಣಿಜ್ಯ ಚಟುವಟಿಕೆಗಳು ವೇಗವಾಗಿ ವಿಸ್ತರಿಸುತ್ತಿದ್ದರೂ ಅಡುಗೆ ಅನಿಲ ಪೂರೈಕೆಗೆ ಸಮರ್ಪಕ ವ್ಯವಸ್ಥೆ ಇಲ್ಲದ ಪರಿಣಾಮ ತಾಳಿಕೋಟೆ ಪಟ್ಟಣದ ಜನರು ಪರದಾಡುವಂತಾಗಿದೆ.

ಕೆಲವೊಮ್ಮೆ ಎಲ್‌ಪಿಜಿ ಸಿಲಿಂಡರ್‌ಗಾಗಿ 50 ರಿಂದ 55 ದಿನಗಳ ವರೆಗೆ ಕಾಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು. ಪಟ್ಟಣಕ್ಕೆ ಪ್ರತ್ಯೇಕ ಎಲ್‌ಪಿಜಿ ವಿತರಣಾ ಏಜೆನ್ಸಿ ಮಂಜೂರು ಮಾಡಬೇಕೆಂದು ಆಗ್ರಹಿಸಿ ನಾಗರಿಕರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ತಾಳಿಕೋಟೆ ಪಟ್ಟಣದಲ್ಲಿ 50 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು, ಸಾವಿರಾರು ಕುಟುಂಬಗಳು, ಹೋಟೆಲ್‌ಗಳು ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳು ಅಡುಗೆ ಅನಿಲವನ್ನೇ ಅವಲಂಬಿಸಿವೆ.

ಆದರೆ ಹೊರ ಭಾಗದಿಂದ ಸಿಲಿಂಡರ್‌ಗಳನ್ನು ಪೂರೈಸುತ್ತಿರುವುದರಿಂದ ಬೇಡಿಕೆಗೆ ತಕ್ಕಂತೆ ಸರಬರಾಜು ಸಾಧ್ಯವಾಗುತ್ತಿಲ್ಲ. ಪರಿಣಾಮ, ಸಮಯಕ್ಕೆ ಸರಿಯಾಗಿ ಸಿಲಿಂಡರ್ ದೊರೆಯದೆ ಗೃಹ ಬಳಕೆದಾರರು ಹಾಗೂ ವ್ಯಾಪಾರಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅಡುಗೆ ಅನಿಲವು ಜನರ ದಿನ ನಿತ್ಯದ ಅನಿವಾರ್ಯ ಅಗತ್ಯವಾಗಿರುವಾಗ, ವಾರ ಗಟ್ಟಲೆ ಸಿಲಿಂಡರ್‌ಗಾಗಿ ಕಾಯುವ ಪರಿಸ್ಥಿತಿ ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಹೋಟೆಲ್‌ಗಳು ಸೇರಿದಂತೆ ಅನೇಕ ವಾಣಿಜ್ಯ ಚಟುವಟಿಕೆಗಳ ಮೇಲೂ ಇದರ ನೇರ ಪರಿಣಾಮ ಬೀರುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಬಳಕೆಯ ಪ್ರಮಾಣಕ್ಕೆ ಅನುಗುಣವಾಗಿ ಎಲ್‌ಪಿಜಿ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ನಾಗರಿಕರು ಒತ್ತಾಯಿಸಿದರು.

ಹೀಗಾಗಿ ತಾಳಿಕೋಟೆಗೆ ತಕ್ಷಣವೇ ಪ್ರತ್ಯೇಕ ಎಲ್‌ಪಿಜಿ ಏಜೆನ್ಸಿ ಮಂಜೂರು ಮಾಡಿ, ನಿಯಮಿತ ಹಾಗೂ ತ್ವರಿತವಾಗಿ ಸಿಲಿಂಡರ್ ಪೂರೈಕೆ ಯಾಗುವಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ದೈನಂದಿನ ಬದುಕಿಗೆ ಸಂಬಂಧಿಸಿದ ಈ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ನ್ಯಾಯವಾದಿ ಗಂಗಾಧರ ಕಸ್ತೂರಿ, ಮಂಜುನಾಥ ಶೆಟ್ಟಿ, ಪರಶುರಾಮ ತಂಗಡಗಿ, ಶಿರಸ್ ಕುಮಾರ ಹಜೇರಿ, ಚನ್ನಬಸ್ಸು ಸರಶೆಟ್ಟಿ, ತಿಪ್ಪಣ್ಣ ಸಜ್ಜನ, ರಘುಸಿಂಗ್ ಹಜೇರಿ, ರಾಮು ಜಗತಾಪ, ಮಲ್ಲು ಮೇಟಿ, ಮಮಾದಾಪುರ ಸೇರಿದಂತೆ ಅನೇಕ ನಾಗರಿಕರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Check Also
Close
Back to top button