12 ನೇ. ಶತಮಾನದ ಶಿವಶರಣ ನೂಲಿ ಚಂದಯ್ಯನವರ – ಜಯಂತೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

ಆಲಮೇಲ ಆ.28

ಪಟ್ಟಣದ ಭಜಂತ್ರಿ ನಗರದಲ್ಲಿ 12 ನೇ. ಶತಮಾನದ ನುಲಿ ಚಂದಯ್ಯ ನವರ ಜಯಂತೋತ್ಸವ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅರ್ಜುನಗಿ ಮಠದ ಶ್ರೀ ಸಂಗನಬಸವ ಶಿವಾಚಾರ್ಯರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ತಾಲೂಕಿನ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಗೌಡ್ ಕೊಳಾರಿ ಮಾತನಾಡಿ 12 ಶತಮಾನದ ಶಿವಶರಣ ಬಸವಣ್ಣನವರ ಅನುಯಾಯಿಗಳಾದ ನೂಲಿ ಚಂದಯ್ಯ ನವರು ಮಾನ್ ಶಿವಶರಣರು ಎಂದು ಅವರ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.

ನಂತರ ನೂತನವಾಗಿ ಆಯ್ಕೆಯಾದ ಆಲಮೇಲ ತಾಲೂಕು ಕಾಂಗ್ರೆಸ್ ಬ್ಲಾಕ್ ಕಮಿಟಿ ಅಧ್ಯಕ್ಷ ಪ್ರಭು ವಾಲಿಕಾರ 12 ಶತಮಾನದಲ್ಲಿ ಬಸವಣ್ಣರ ಕಾಲದಲ್ಲಿ ಅನೇಕ ಶರಣರು ತಮ್ಮದೇ ಆದ ವಚನ ಸಾಹಿತ್ಯ ಮತ್ತು ಜ್ಞಾನದ ಭಂಡಾರವನ್ನು ಬಿತ್ತಿ, ಜಗತ್ತಿಗೆ ಒಳ್ಳೆಯದನ್ನು ಸಾರಿರುವರು ಎಂದು ಹೇಳಿದರು.

ವೇದಿಕೆಯ ಆಲಮೇಲ ನೂತನವಾಗಿ ಆಯ್ಕೆಯಾದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಮರ್ ಬೀಳವಾರ್ ಡಾಕ್ಟರ್ ಸಂಜು ಯಂಟಮನ,ನೂತನ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಚಂದು ಹಳಿಮನಿ, ಪಟ್ಟಣ ಪಂಚಾಯಿತಿ ಸದಸ್ಯರು ಶ್ರೀಶೈಲ್ ದಾದಾ ರಜಪೂತ, ದಯಾನಂದ್ ನಾರಾಯಣಕರ್, ಭಾಗ್ಯವಂತ್ ಅಲ್ಮೆಲ್ಕರ್ ಪಿ.ಕೆ.ಪಿ.ಎಸ್ ಸದಸ್ಯ ಶಶಿಧರ್ ನಾಯ್ಕೋಡಿ, ಪಿ.ಕೆ.ಪಿ.ಎಸ್ ಉಪಾಧ್ಯಕ್ಷ ಮುದುಕಪ್ಪ ಜಮಾದಾರ್ ಹಾಗೂ ಭಜಂತ್ರಿ ಸಮಾಜದ ಅಧ್ಯಕ್ಷ ಪ್ರಕಾಶ್ ಭಜಂತ್ರಿ ಹಾಗೂ ಪದಾಧಿಕಾರಿಗಳು ಊರಿನ ಗಣ್ಯರು ಸಮಾಜದ ಎಲ್ಲಾ ಹಿರಿಯರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button