ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನಿಂದ ಕಾಟವ್ವನಹಳ್ಳಿ ಮಕ್ಕಳಿಗೆ – ಕುಡಿಯುವ ನೀರಿನ ಬಾಟಲಿ ವಿತರಣೆ.
ಚಳ್ಳಕೆರೆ ಸೆ.02


ತಾಲೂಕಿನ ನೇರಲಗುಂಟೆ ಸಮೀಪದ ಕಾಟವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 46 ವಿದ್ಯಾರ್ಥಿಗಳಿಗೆ ನಗರದ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ ಕುಡಿಯುವ ನೀರಿನ ಬಾಟಲಿಗಳನ್ನು ಮತ್ತು ಬಿಸ್ಕೆಟ್ ವಿತರಿಸಿ ಸೇವೆಯ ಸಾರ್ಥಕತೆಯನ್ನು ಮೆರೆದರು.
ಮಕ್ಕಳಿಗೆ ಕುಡಿಯುವ ನೀರಿನ ಬಾಟಲಿ ವಿತರಿಸಿ ಮಾತನಾಡಿದ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನ ಅಧ್ಯಕ್ಷೆ ಅಪರ್ಣ ದೇವೇಂದ್ರಪ್ಪ ಅವರು ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇಟ್ಟುಕೊಂಡು ಸತತ ಪ್ರಯತ್ನ ಮಾಡುತ್ತ ಸಾಧನೆ ಮಾಡಬೇಕು.
ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನ ವತಿಯಿಂದ ಇಂದು ನಿಮಗೆಲ್ಲ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಲಾಗಿದ್ದು ಅವುಗಳನ್ನು ಸಮರ್ಥವಾಗಿ ಸದುಪಯೋಗ ಪಡಿಸಿ ಕೊಳ್ಳಬೇಕು. ಮುಂದಿನ ದಿನಗಳಲ್ಲಿಯೂ ಈ ಶಾಲೆಗೆ ಕ್ಲಬ್ ನಿಂದ ಅಗತ್ಯವಾದ ನೆರವು ನೀಡಲಾಗುವುದು ಎಂದು ತಿಳಿಸಿದರು.

ಇನ್ನರ್ ವಿಲ್ ಕ್ಲಬ್ ನ ಕಾರ್ಯದರ್ಶಿ ಡಾ, ವಿದ್ಯಾ ಐತಾಳ್ ಮಾತನಾಡಿ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು.ಆದ್ದರಿಂದ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗುರುವಿಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಗುರುವನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.
ಖಜಾಂಚಿ ಮತ್ತು ನಿವೃತ್ತ ಪ್ರಾಧ್ಯಾಪಕಿ ಡಾ, ಕವಿತಾ ನಾಗೇಶ್ ಮಾತನಾಡಿ ಸ್ವಾಮಿ ವಿವೇಕಾನಂದರು ಹೇಳಿದಂತೆ “ನಿಮ್ಮ ಭವಿಷ್ಯಕ್ಕೆ ನೀವೇ ಹೊಣೆ, ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂಬುದನ್ನು ವಿದ್ಯಾರ್ಥಿಗಳು ಮನಗಾಣ ಬೇಕು ಎಂದು ಕಥೆಯ ತಿಳಿಸಿ ಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕಿ ಸಿ.ಎಸ್ ಭಾರತಿ ಚಂದ್ರಶೇಖರ್, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ನೀನಾ ವಿನಯಕುಮಾರ್, ಬಿ.ಸಿ ಮಂಜುಳಾ, ಸುಮಾ, ಐಶ್ವರ್ಯ, ಪ್ರವೀಣ್, ಚೈತನ್ಯ, ಬೋರಮ್ಮ, ಸುಚಿತ್ರಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
