ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸಿದ್ದ ರಾಜ್ಯದ ಕರಾಟೆ ಶಿಕ್ಷಕರಿಗೆ ಪ್ರಶಸ್ತಿ – ಪ್ರಧಾನ ಸಮಾರಂಭ ಜರುಗಿತು.

ವಿಜಯಪುರ ಸೆ.02

ದಿನಾಂಕ 30-08-2026 ರಂದು 3 ನೇ. ರಾಷ್ಟ್ರೀಯ ಮುಕ್ತ ಕರಾಟೆ ಕ್ರೀಡಾಕೂಟವು ಶ್ರೀ ಸ್ವಾಮಿ ಸಮರ್ಥ ಸೌoಸ್ಕೃತಿಕ ಭವನ ಸೊಲ್ಲಾಪುರದಲ್ಲಿ ಜರುಗಿತು. ವಿವಿಧ ಜಿಲ್ಲೆಯ ಹಾಗೂ ರಾಜ್ಯದ ಕರಾಟೆ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಿತು.

ಈ ಸಂದರ್ಭದಲ್ಲಿ ವಿಜಯಪುರ ತಾಲೂಕಿನ ಉತ್ನಾಳ ಗ್ರಾಮದ ಶ್ರೀಯುತರಾದ ಶ್ರೀ ಬಸವರಾಜ ನಂ ಬಾಗೇವಾಡಿ, ರವರು ವಿವಿಧ ಕ್ರೀಡೆಗಳ ತರಬೇತುದಾರರು ಮತ್ತು ನಿರ್ಣಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದದನ್ನು ಗುರುತಿಸಿ ಈ ವರ್ಷ ಕೊಡ ಮಾಡುವ ರಾಷ್ಟ್ರೀಯ ಉತ್ತಮ ತರಬೇತಿದಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಆಯೋಜಕರಾದ ಶ್ರೀ ಈಶ್ವರ ಎಸ್, ರವರು ಹಾಗೂ ವಿವಿಧ ಜಿಲ್ಲೆಯ ರಾಜ್ಯದ ತರಬೇತುದಾರರು ಮತ್ತು ನಿರ್ಣಾಯಕರು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button