ಮಕ್ಕಳ ಮನ ಗೆದ್ದ ಶಿಕ್ಷಕ ಪಾಂಡಪ್ಪ ಮಾದರ ನಿವೃತ್ತಿ – ಸ್ಮರಣೀಯ ಸೇವೆಗೆ ಅಭಿನಂದನೆ.

ತೊದಲಬಾಗಿ ಸೆ.06

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೂರಗೊಂಡ ವಸ್ತಿಯಲ್ಲಿ 19 ವರ್ಷಗಳ ಕಾಲ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪಾಂಡಪ್ಪ ಮಾದರ ಅವರಿಗೆ ಶಾಲಾ ಆವರಣದಲ್ಲಿ ಆತ್ಮೀಯ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಕ್ರಿಯಾಶೀಲ ಸಮೂಹ ಸಂಪನ್ಮೂಲ ವ್ಯಕ್ತಿ ಹಾಗೂ ಸಿ.ಆರ್‌.ಸಿ ಮತ್ತು ಬಿ.ಆರ್‌.ಸಿ ಅಧ್ಯಕ್ಷ ವಿನೋದ್ ಮಾಸರೆಡ್ಡಿ ಮಾತನಾಡಿ, ಪಾಂಡಪ್ಪ ಮಾದರ ಅವರು ಸೌಮ್ಯ ಸ್ವಭಾವದ, ಸರಳ ಹಾಗೂ ಕರ್ತವ್ಯ ನಿಷ್ಠೆ ಶಿಕ್ಷಕರಾಗಿದ್ದರು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು, ಅವರ ಮನೋಭಾವವನ್ನು ಅರ್ಥ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರು. ತಮ್ಮ ಸೇವಾವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.

ಶಿಕ್ಷಕ ವೃತ್ತಿಯನ್ನು ಸೇವೆಯಾಗಿ ಸ್ವೀಕರಿಸಿದ್ದ ಮಾದರ ಅವರು ವಿದ್ಯಾರ್ಥಿಗಳಲ್ಲಿ ಶಿಸ್ತು, ಉತ್ತಮ ಮೌಲ್ಯಗಳು ಹಾಗೂ ಜ್ಞಾನ ಬೆಳೆಸುವಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಅವರ ಸೇವೆ ಶಾಲೆ ಹಾಗೂ ವಿದ್ಯಾರ್ಥಿಗಳ ಪಾಲಿಗೆ ಸದಾ ಸ್ಮರಣೀಯವಾಗಿರಲಿದೆ. ನಿವೃತ್ತಿ ಜೀವನ ಆರೋಗ್ಯ, ಸಂತೋಷ ಹಾಗೂ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು.

ಶಾಲೆಯ ಮುಖ್ಯ ಗುರುಗಳು ವೈ.ಬಿ ಕಾಂಬಳೆ ಅತಿಥಿಗಳು ಹಾಗೂ ಗಣ್ಯರನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದರು. ಪಾಂಡಪ್ಪ ಮಾದರ ಅವರ ಸುದೀರ್ಘ ಸೇವೆ ಹಾಗೂ ಶಾಲೆಯ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿ, ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಬಿ. ಅಜ್ಜನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ವೈ.ಬಿ. ಕಾಂಬಳೆ, ಟೀಚರ್ಸ್ ಸೊಸೈಟಿ ಉಪಾಧ್ಯಕ್ಷ ಹನುಮಂತ ಭಜಂತ್ರಿ, ಪ್ರಾಥಮಿಕ ಶಾಲಾ ಸಂಘದ ಉಪಾಧ್ಯಕ್ಷರಾದ ವಿಜಯ ಯಳಮಲ್ಲೆ, ಮಾಂತೇಶ ಬಸರಗಿ, ಸಿದ್ದರಾಮ್ ಮಾದರ, ಶಾಂತಪ್ಪ ಶಿದರಡ್ಡಿ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರಾದ ಅನಿತಾ ಜೋಶಿ, ಮುಕ್ತಾ ನಾವಿ ಊರಿನ ಮುಖಂಡರಾದ ಬಸಪ್ಪ ಸೂರಗೊಂಡ, ಅಪ್ಪಾಸಿ ಕೊಕಟನೂರ, ಬಸಪ್ಪ ಹೆಗ್ಗೊಂಡ, ಬಾಬು ಸೂರಗೊಂಡ, ಸಿದ್ದು ಚೌರಿ, ನಿಂಗಪ್ಪ ದುಬಾಸೆ ಮುಂತಾದವರು, ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button