ನಾಳೆ 2026-27 ನೇ. ಸಾಲಿನ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ – ಕ್ರೀಡಾಕೂಟ ಜರುಗುವುದು.
ಢವಳಗಿ ಸೆ.11

ಗ್ರಾಮದ ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಪ್ಟೆಂಬರ್ 12 ಶನಿವಾರ ದಂದು ಢವಳಗಿ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಪೂಜ್ಯರಾದ ಶ್ರೀ ಘನಮಠೇಶ್ವರ ಸ್ವಾಮೀಜಿ ಗದ್ದುಗೆಮಠ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಧಿಕಾರಿಗಳು ಮುದ್ದೇಬಿಹಾಳ, ದೈಹಿಕ ಪರಿವೀಕ್ಷಕರು ಮುದ್ದೇಬಿಹಾಳ, ಶಿಕ್ಷಣ ಸಂಯೋಜಕರು ಢವಳಗಿ ವಲಯ, ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಬಸವ ಸಮಿತಿ ಢವಳಗಿ.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಢವಳಗಿ ವಲಯದ ಮುಖ್ಯ ಗುರುಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಗ್ರಾಮಸ್ಥರು ಪಾಲ್ಗೊಳ್ಳುವರು ಎಂದು ಶಾಲೆಯ ಮುಖ್ಯ ಶಿಕ್ಷಕರಾದ ರಮೇಶ ಮೂಲಿಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದರು.
ವರದಿ:ಜಿ.ಎನ್ ಬೀರಗೊಂಡ (ಮುತ್ತು) ಮುದ್ದೇಬಿಹಾಳ
