ಇಂದು ಎಲ್ಲಮ್ಮ ದೇವಿ ದೇವಸ್ಥಾನದಲ್ಲಿ 34 ನೇ. ವರ್ಷದ – ಮೌನ ಅನುಷ್ಠಾನ ಮುಕ್ತಾಯ.

ರಕ್ಕಸಗಿ ಸೆ.11

ಮುದ್ದೇಬಿಹಾಳ ತಾಲೂಕಿನ ರಕ್ಕಸಗಿ ಗ್ರಾಮದ ಶ್ರೀ ಎಲ್ಲಮ್ಮದೇವಿ ದೇವಸ್ಥಾನದ ಆರಾಧಕರಾದ ಶ್ರೀಮತಿ ವೀರಮ್ಮ ತಾಯಿ ಅವರು ಕಳೆದ 34 ವರ್ಷಗಳಿಂದಲೂ ಶ್ರಾವಣ ಮಾಸದಲ್ಲಿ ಲೋಕ ಕಲ್ಯಾಣಕ್ಕಾಗಿ ಒಂದು ತಿಂಗಳು ಗಳ ಕಾಲ ಮೌನ ಅನುಷ್ಠಾನವನ್ನು ಮಾಡುತ್ತಾ ಬಂದಿದ್ದಾರೆ. ಸಪ್ಟೆಂಬರ್ 12 ಶನಿವಾರದಂದು ಶ್ರಾವಣ ಮಾಸದ ಪ್ರಯುಕ್ತವಾಗಿ 31 ನೇ. ದಿನದ ಅನುಷ್ಠಾನ ಮುಕ್ತಾಯ ಕಾರ್ಯಕ್ರಮ ಇರುವುದು.

ಮುಕ್ತಾಯ ಕಾರ್ಯಕ್ರಮಕ್ಕೆ ಅಂಕಲಿಮಠದ ಶ್ರೀ ಬ್ರಹ್ಮಶ್ರೀ ವೀರಭದ್ರ ಮಹಾಸ್ವಾಮಿಗಳು ಮತ್ತು ಯರಝರಿ ಗ್ರಾಮದ ಶ್ರೀ ಮಲ್ಲಾಲಿಂಗೇಶ್ವರ ಸ್ವಾಮಿಗಳು ಆಗಮಿಸುವರು. ಮಠದ ಸಹಾಯಕರಾದ ರಾಚಯ್ಯ ಬೂದಿಹಾಳಮಠ , ಪ್ರಕಾಶ ಕಣವಿ, ಮುತ್ತಪ್ಪ ಪೂಜಾರಿ, ಈರಪ್ಪ ಬೀಗೆರಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸುವರು.ಅನುಷ್ಠಾನ ಮುಕ್ತಾಯ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ದೇವಸ್ಥಾನದ ಸಹಾಯಕರಾದ ರಾಚಯ್ಯ ಬೂದಿಹಾಳಮಠ ಅವರು ಪ್ರಕಟಣೆಯಲ್ಲಿ ತಿಳಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button