ಶ್ರೀ ಮಹಿಬೂಬ ಸುಬಹಾನಿ ಜಾತ್ರಾ ಮಹೋತ್ಸವವು – ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿ ಆಚರಣೆ.

ಗುಂಡಕರ್ಜಗಿ ಸೆ.19

ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದಲ್ಲಿ 22 ರಿಂದ 24 ರ ವರೆಗೆ ಭಕ್ತಿ ಭಾವದಿಂದ ಅದ್ದೂರಿಯಾಗಿ ಜರಗುತ್ತದೆ, ಈ ಜಾತ್ರೆಯಲ್ಲಿ ಅನುಷ್ಠಾನ ಮೂರ್ತಿ, ಪವಾಡ ಪುರುಷರಾದ ಪೂಜ್ಯ ಶಂಕರಲಿಂಗ ಶ್ರೀಗಳವರ ಆಶೀರ್ವಾದದಲ್ಲಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಆಯೋಜಿಸಲಾಗಿದೆ ಎಂದು ಜಾತ್ರಾ ಸಮಿತಿ ಪ್ರಕಟಿಸಿದೆ.

ಕಾರ್ಯಕ್ರಮದ ವಿವರಗಳು 22-09-2026 (ಮಂಗಳವಾರ) ರಾತ್ರಿ 10:00 ಗಂಟೆಗೆ ಶ್ರೀ ಮಹಿಬೂಬ ಸುಬಹಾನಿ ದೇವರಿಗೆ ಕುದುರೆಯ ಮೆರವಣಿಗೆಯೊಂದಿಗೆ ಹಾಗೂ ಹರಿಂದ್ರಾಳ ಗ್ರಾಮದ ಹಲಿಗೆ ಮಜಲಿನೊಂದಿಗೆ ಗಂಧ ಒಯ್ಯುವದು ನಂತರ ಗ್ರಾಮದ ಸಮಸ್ತ ದೈವ ಮಂಡಳಿಯಿಂದ ಗಂಧ ಏರುವುದು ಮತ್ತು ಮದ್ದು ಸುಡುವುದು.ಅಂದೇ ರಾತ್ರಿ 10 :00 ಗಂಟೆಗೆ ಸುತ್ತಮುತ್ತಲಿನ ಗ್ರಾಮಸ್ಥರಿಂದ ಶಿವ ಭಜನೆಗಳು.

23-9-2026 (ಬುಧವಾರ) ಬೆಳಿಗ್ಗೆ 6 :00 ಗಂಟೆಗೆ ಶ್ರೀ ಕಾಶಿಲಿಂಗೇಶ್ವರ ಅಭಿಷೇಕ.ನಂತರ ಮಹಿಬುಬ ಸುಬಹಾನಿ ಉರುಸು,

ಮುಂಜಾನೆ 10:00 ಗಂಟೆಗೆ ರಾಜ್ಯಮಟ್ಟದ ತೇರಬಂಡಿ ಸ್ಪರ್ಧೆ

ಸೂಚನೆ:-

(ಡಾಂಬರ ರಸ್ತೆಯಲ್ಲಿ) ಸಂಜೆ 6:00 ಗಂಟೆಗೆ ಬಂದ್ ಮಾಡಲಾಗುತ್ತದೆ.

ತೇರಬಂಡಿ ಸ್ಪರ್ಧೆಗೆ ದಿ!! 22-9-2026 ರಾತ್ರಿ 8:00 ಗಂಟೆಗೆ ಲಾಟ್ ಮಾಡಲಾಗುವುದು ಫೋನ್ ಪೇ ನ0, 9113242806, 9380006172

1 ನೇ. ಬಹುಮಾನ: 40,001 ರೂ,

2 ನೇ. ಬಹುಮಾನ: 30,001 ರೂ,

3 ನೇ. ಬಹುಮಾನ 20,001 ರೂ,

4 ನೇ. ಬಹುಮಾನ 15,001 ರೂ,

5 ನೇ. ಬಹುಮಾನ 10,001 ರೂ,

6 ನೇ. ಬಹುಮಾನ 8,001 ರೂ,

7 ನೇ. ಬಹುಮಾನ 7,001 ರೂ,

8 ನೇ. ಬಹುಮಾನ 5,001 ರೂ,

9 ನೇ. ಬಹುಮಾನ 3,001 ರೂ,

10 ನೇ. ಬಹುಮಾನ 2,501 ರೂ,

ಈ ತರ ಬಹುಮಾನಗಳು ಇರುತ್ತವೆ.

ಅಂದೇ ರಾತ್ರಿ 08:00 ಗಂಟೆಗೆ ಶ್ರೀ ಶಂಕರಲಿಂಗ ಶ್ರೀಗಳಿಂದ ವಿಶೇಷ ಸನ್ಮಾನ:-

ಶ್ರೀ ರಾಮನಗೌಡ, ಎಂ, ಸಂಕನಾಳ PSI ನಿಂದ CPI ವೃತ್ತಿಗೆ ಬಡ್ತಿ ಹೊಂದಿದ್ದಾರೆ (CPI, ಸಾಹೇಬ್ರು ಧಾರವಾಡ ಇವರಿಗೆ) ಮತ್ತು ಶಿವನಗೌಡ,ದ್ಯಾ, ಪಾಟೀಲ್ (ನಿವೃತ್ತ ಶಿಕ್ಷಕರು)ಇವರಿಗೆ ನಂತರ ದಾನಿಗಳಿಗೆ ಸನ್ಮಾನ ಸಮಾರಂಭ.

ರಾತ್ರಿ 9:30 ಗಂಟೆಗೆ ಶ್ರೀ ಬಸವೇಶ್ವರ ನಾಟ್ಯ ಸಂಘ ಬಂಡಿಗಣಿ ತಾ!! ರಬಕವಿ ಇವರಿಂದ ಗುಡ್ಡಾಪುರ ಶ್ರೀ ದಾನಮ್ಮ ದೇವಿ ಮಹಾತ್ಮೆ “ಅರ್ಥಾತ್” (ಕಲಿಯುಗದ ಕಾಮಧೇನು) ಎಂಬ ಪೌರಾಣಿಕ ನಾಟಕ ಜರುಗುತ್ತದೆ.

24-9-2026 (ಗುರುವಾರ) ಬೆಳಿಗ್ಗೆ 8-00 ಗಂಟೆಗೆ ಸಾಧು ಮಹಾರಾಜರಿಗೆ ಬಟ್ಟೆ ವಿತರಣೆ,

ಸೇವೆ:-

ಶ್ರೀ ಶಿವಸಿದ್ದಪ್ಪಗೌಡ,ಗು, ಬಿರಾದಾರ ಸಾ!! ಗುಂಡಕರ್ಜಗಿ ಇವರಿಂದ,

ಮುಂಜಾನೆ 10 :00 ಗಂಟೆಗೆ ಒಂದು ಎತ್ತು, ಒಂದು ಕುದುರೆ, ಗಾಡಿ ರೇಸ್ ( ಡಾಂಬರ್ ರಸ್ತೆಯಲ್ಲಿ ) “ಅವಧಿ ಎರಡು ನಿಮಿಷ”

1 ನೇ. ಬಹುಮಾನ 15,001 ರೂ,

2 ನೇ. ಬಹುಮಾನ 10,001 ರೂ,

3 ನೇ. ಬಹುಮಾನ 7,001 ರೂ,

4 ನೇ. ಬಹುಮಾನ 5,001 ರೂ,

5 ನೇ. ಬಹುಮಾನ 3,001 ರೂ,

6 ನೇ. ಬಹುಮಾನ 2,001 ರೂ,

ಇತರೆ ಬಹುಮಾನಗಳು ಇರುತ್ತವೆ. ಜಾತ್ರೆಯ ಅಂಗವಾಗಿ ಪ್ರತಿದಿನ “ಅನ್ನಸಂತರ್ಪಣೆ” ಇರುತ್ತದೆ.

ಯಾವತ್ತು ಸದ್ಭಕ್ತರು ಆಗಮಿಸಿ ಶ್ರೀ ಮಹಿಬೂಬ ಸುಬಹಾನಿ ಕೃಪೆಗೆ ಪಾತ್ರರಾಗಿ ಎಂದು ಜಾತ್ರಾ ಕಮಿಟಿಯು ಪ್ರಕಟಣೆಯಲ್ಲಿ ತಿಳಿಸಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು:- 7760606871-9632970304 ಕೋರಿದ್ದಾರೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button