ಸ್ವಚ್ಛತೆ ಮತ್ತು ಪರಿಸರ ದಿಂದ ಆರೋಗ್ಯ – ಪಿ.ಡಿ.ಓ ನಾಗರಾಜ್.

ತರೀಕೆರೆ ಸೆ.18

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಹಸಿ ಕಸ, ಒಣ ಕಸ ವಿಂಗಡಿಸಿ ಸ್ವಚ್ಛತಾ ವಾಹನಗಳಿಗೆ ಕೊಡಿ ಎಂದು ನಂದಿಬೆಟ್ಟಲು ಕಾಲೋನಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ನಾಗರಾಜ್ ಎನ್.ಎಸ್ ಹೇಳಿದರು.

ಅವರು ಇಂದು ನಂದಿ ಬಟ್ಟಲು ಕಾಲೋನಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ಸ್ವಚ್ಛತಾ ಈ ಸೇವಾ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಹಸಿ ಕಸದಿಂದ ಗೊಬ್ಬರ ತಯಾರಿಸಬಹುದು, ಒಣ ಕಸ ಪ್ಲಾಸ್ಟಿಕ್ ಗಾಜಿನ ಕಸ ಮರುಬಳಕೆ ಮಾಡಬಹುದಾಗಿದೆ ಸ್ವಚ್ಛತೆ ಮತ್ತು ಪರಿಸರದಿಂದ ಆರೋಗ್ಯ ಎಂದು ಹೇಳಿದರು.

ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರು ಹಾಗೂ ಶಾಲಾ ಪಿ.ಟಿ.ಐ ಸದಸ್ಯರಾದ ತರೀಕೆರೆ ಎನ್ ವೆಂಕಟೇಶ್ ಮಾತನಾಡಿ ಎಲ್ಲರೂ ಮನೆಗೊಂದು ಗಿಡ ಮರ ಬೆಳೆಸಿ, ಮರ ನೆರಳು ನೀಡುತ್ತದೆ ಹಣ್ಣು ಹೂವು ನೀಡುತ್ತದೆ.

ಮನುಷ್ಯನ ಜೀವಕ್ಕೆ ಅಮೂಲ್ಯವಾದ ಆಮ್ಲಜನಕವನ್ನು ನೀಡುತ್ತದೆ ಇದರಿಂದ ಪರಿಸರ ಸಮತೋಲನವನ್ನು ಕಾಪಾಡಬಹುದು ಹಾಗೂ ಎಲ್ಲರೂ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ಸ್ವಚ್ಛತಾ ಕರ್ಮಚಾರಿಗಳು ಪೌರಕಾರ್ಮಿಕರಿಗೆ ಸಹಕರಿಸಿ ಎಂದು ಹೇಳಿದರು.

ಶಾಲಾ ಪ್ರಾಂಶುಪಾಲರಾದ ಬಸವರಾಜ್ ತೆಗ್ಗಿ ರವರು ಅಧ್ಯಕ್ಷತೆ ವಹಿಸಿದ್ದು ಎಲ್ಲರೂ ಸ್ವಚ್ಛತೆ ಕಡೆ ಗಮನ ಹರಿಸಬೇಕು ಪರಿಸರ ಉಳಿಸಬೇಕು ನೀರು ಮತ್ತು ಮಣ್ಣನ್ನು ಉಳಿಸಬೇಕು ಇವು ತುಂಬಾ ಅಮೂಲ್ಯವಾದದ್ದು ಎಲ್ಲಾ ವಿದ್ಯಾರ್ಥಿಗಳು ಪ್ರತಿದಿನ ತಾವು ಸ್ವಚ್ಛತೆಯಿಂದ ಇರುವುದರ ಜೊತೆಗೆ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡ ಬೇಕಾಗಿದೆ ದೇಶದಲ್ಲಿ ಕಸ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ ಆದ್ದರಿಂದ ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ ತುಂಬಾ ಅಗತ್ಯವಿದೆ ಎಂದು ಹೇಳಿದರು.

ಗ್ರಂಥಪಾಲಕರಾದ ರುದ್ರೇಶ್ ರವರು ಮಾತನಾಡಿ ಕಸ ವಿಲೇವಾರಿ ಮತ್ತು ಸ್ವಚ್ಛತೆ ಕುರಿತು ವಿವರವಾಗಿ ಉಪನ್ಯಾಸ ನೀಡಿದರು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗ ಮತ್ತು ಮಕ್ಕಳು ಹಾಗೂ ಗ್ರಾಮ ಪಂಚಾಯಿತಿಯ ಸ್ವಚ್ಛತಾ ಕಾರ್ಮಿಕರು ಉಪಸ್ಥಿತರಿದ್ದು ಶಿಕ್ಷಕರಾದ ಮಲ್ಲಿಕಾರ್ಜುನ ರವರು ಸ್ವಾಗತಿಸಿ ವಂದಿಸಿದರು.

ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್ ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button