🚨ಬ್ರೇಕಿಂಗ್ ನ್ಯೂಸ್… ಬ್ರೇಕಿಂಗ್ ನ್ಯೂಸ್… ಬ್ರೇಕಿಂಗ್ ನ್ಯೂಸ್🚨. 💥ಕರಾಳ ಕೃತ್ಯ, ‘ಪ್ರಭಾಕರ್ ಟೈಲ್ಸ್’ ಕಾರ್ಖಾನೆಯ ಮೈ ಮರೆತ ಲೂಟಿ… ಹೊಳೆಯನ್ನೇ ನುಂಗುತ್ತಿರೋ ಭೂತದ ಕಥೆ..!💥

ಕುಂದಾಪುರ ಸೆ.19

ಸ್ನೇಹಿತರೆ, ಕೇಳಿ… ಕರಾವಳಿಯ ಸೊಬಗಿನ ಕುಂದಾಪುರ ಭಾಗದಲ್ಲಿ ಇಂದು ನಡೀತಿರೋದು ಅಭಿವೃದ್ಧಿಯಲ್ಲ, ಬದಲಿಗೆ ಪ್ರಕೃತಿಯ ಮೇಲಿನ ಹಸಿ ಬಿಸಿ ಕ್ರೌರ್ಯ..!ಇಲ್ಲಿ ಯಾರಿಗೂ ಕಾನೂನಿನ ಭಯವಿಲ್ಲ, ಆಡಳಿತದ ಅಂಜಿಕೆಯಂತೂ ಇಲ್ಲವೇ ಇಲ್ಲ. ‘ಪ್ರಭಾಕರ್ ಟೈಲ್ಸ್’ ಕಾರ್ಖಾನೆಯ ಕರಾಳ ದಂಧೆ ಈಗ ಹದ್ದು ಮೀರಿ ನಿಂತಿದೆ. ಹೊಳೆಯೆಂಬ ಜೀವ ನದಿಯನ್ನೇ ಕಸದ ತೊಟ್ಟಿಯನ್ನಾಗಿಸಿ ಒತ್ತುವರಿ ಮಾಡುತ್ತಿರುವ ಈ ಅಕ್ರಮ ಕೃತ್ಯಕ್ಕೆ ಮಿತಿಯೇ ಇಲ್ಲದಂತಾಗಿದೆ..!

🛑 ಹೊಳೆಯನ್ನೇ ಮುಚ್ಚಿ ತಿನ್ನುತ್ತಿರುವ ರಾಕ್ಷಸ ಬುದ್ಧಿ:-

ಕಾರ್ಖಾನೆಯ ಕಸ-ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ತಂದು ಸುರಿಯುವ ಮೂಲಕ, ಜೀವಂತ ಹೊಳೆಯನ್ನೇ ಮುಚ್ಚಿ ಹಾಕಿ ಭೂಮಿ ಮಾಡಿ ಕೊಳ್ಳುವ ಪಕ್ಕಾ ಸಂಚು ಇಲ್ಲಿ ರಾಜಾರೋಷವಾಗಿ ನಡೀತಾ ಇದೆ.

🛣️ ಧೂಳಿನ ನರಕ, ಸವಾರರ ಗೋಳು:-

ಕಾರ್ಖಾನೆಯ ಕಸವನ್ನು ರಸ್ತೆಗೆ ಎಸೆದು, ವಾಹನ ಸವಾರರ ಮೂಗಿಗೆ ಮಣ್ಣು ಎರಚಲಾಗುತ್ತಿದೆ. ಧೂಳಿನ ದಟ್ಟಣೆಯಿಂದ ಜನ ಸಾಮಾನ್ಯರು ಉಸಿರಾಡಲೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

🌊 CRZ ನಿಯಮಗಳ ಕಾಲು ಕೀಳುವಿಕೆ:-

ಕಾನೂನು ರಕ್ಷಿಸ ಬೇಕಾದ ಸಿ.ಆರ್.ಜೆಡ್ (CRZ) ವಲಯದಲ್ಲೇ ಈ ಅಕ್ರಮ ತಮಟೆ ಬಾರಿಸುತ್ತಿದೆ. ಹೊಳೆಯನ್ನು ಮುಚ್ಚಿ ಅಲ್ಲಿ ಬೇಜೆ ಮಣ್ಣು ತುಂಬಿ ಸಾಮ್ರಾಜ್ಯ ಕಟ್ಟಿ ಕೊಳ್ಳುವ ದುಸ್ಸಾಹಸ ಎಗ್ಗಿಲ್ಲದೆ ಸಾಗಿದೆ.

👁️ ಕಣ್ಣಿದ್ದು ಕುರುಡಾದ ಅಧಿಕಾರಿ ವರ್ಗ:-

ಇಷ್ಟೆಲ್ಲಾ ಬ್ರಹ್ಮಾಂಡ ಭ್ರಷ್ಟಾಚಾರ ಕಣ್ಣು ಮುಂದೆ ನಡೀತಿದ್ರೂ, ಸ್ಥಳೀಯ ಅಧಿಕಾರಿಗಳು ಮಾತ್ರ ಕಣ್ಣಿಗೆ ಮಣ್ಣೆರಚಿ ಕೊಂಡು ಕುಳಿತಿದ್ದಾರೆ. ಅಕ್ರಮಕೋರರ ಬೆನ್ನಿಗೆ ಖಾಕಿ ಹಾಗೂ ಖಾದಿ ಕೈಗಳು ನಿಂತಿವೆ ಎಂಬ ಗಂಭೀರ ಆರೋಪ ಜನರ ಗಂಟಲಿನಿಂದ ಹೊರ ಬೀಳುತ್ತಿದೆ.

🧱 ರಸ್ತೆ ಬದಿಯಲ್ಲೇ ಅಸ್ತವ್ಯಸ್ತ ಹಂಚಿನ ಸಾಮ್ರಾಜ್ಯ:-

ಕಾರ್ಖಾನೆಯ ಜಂಜಾಟವನ್ನೆಲ್ಲ ತಂದು ರಸ್ತೆ ಬದಿ ರಾಶಿ ಹಾಕಲಾಗಿದೆ. ದಾರಿಯಲ್ಲಿ ಹೋಗುವವರ ಜೀವದ ಜೊತೆ ಚೆಲ್ಲಾಟ ಆಡಲಾಗುತ್ತಿದೆ.

🌧️ ನಾಳೆಯ ಮೃತ್ಯು ಘಂಟೆ – ಪ್ರಕೃತಿ ವಿಕೋಪದ ಮುನ್ಸೂಚನೆ:-

“ಈಗಲೇ ಇವರ ಆಟಕ್ಕೆ ಕಡಿವಾಣ ಹಾಕದಿದ್ದರೆ, ಮುಂದೊಂದು ದಿನ ಕುಂದಾಪುರಕ್ಕೆ ಭೀಕರ ಪ್ರಕೃತಿ ವಿಕೋಪದ ಅಪ್ಪಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ” ಎಂದು ಸ್ಥಳೀಯರು ಕಣ್ಣೀರಿಡುತ್ತಾ ಎಚ್ಚರಿಸುತ್ತಿದ್ದಾರೆ.

⚠️ ಅಗ್ನಿ ಎಚ್ಚರಿಕೆ:-

ಪ್ರಭಾಕರ್ ಟೈಲ್ಸ್‌ನ ಈ ವಿನಾಶಕಾರಿ ಅಕ್ರಮ ಚಟುವಟಿಕೆಗಳು ಕೇವಲ ಪ್ರಕೃತಿಯ ಹತ್ಯೆಯಷ್ಟೇ ಅಲ್ಲ, ಮನುಕುಲದ ಮೇಲಿನ ನೇರ ದಾಳಿ. ಆಡಳಿತ ಯಂತ್ರ ಇನ್ನೂ ಮುಂದೆಯೂ ಕುಂಭಕರ್ಣ ನಿದ್ರೆಯಲ್ಲಿದ್ದರೆ, ಜನ ಪ್ರತಿಭಟನೆಗಳ ಬಿಸಿ ತಟ್ಟುವುದರಲ್ಲಿ ಅನುಮಾನವಿಲ್ಲ. ಇವತ್ತೇ, ಈಗಲೇ ಇದಕ್ಕೆ ತಡೆಹಾಕ ಬೇಕಿದೆ..!

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button