ವಾಸವಿ ಕಾಲೋನಿಯ ಗಣೇಶ ಸನ್ನಿಧಿಯಲ್ಲಿ ಶ್ರೀಶಾರದಾಶ್ರಮದ – ಭಕ್ತರಿಂದ ವಿಶೇಷ ಭಜನೆ.
ಚಳ್ಳಕೆರೆ ಸೆ.19

ನಗರದ ವಾಸವಿ ಕಾಲೋನಿಯ ಎರಡನೇ ಕ್ರಾಸ್ ನಲ್ಲಿ ಶ್ರೀಮಹಾ ಗಣಪತಿ ಸೇವಾ ಸಮಿತಿಯವರು ಕೂರಿಸಿರುವ ಗಣೇಶನ ಸನ್ನಿಧಿಯಲ್ಲಿ ಶ್ರೀಶಾರದಾಶ್ರಮದ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಭಕ್ತರಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.

ಭಜನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ವಹಿಸಿದ್ದರೆ ಭಕ್ತರಾದ ವನಜಾಕ್ಷಿ ಮೋಹನ್, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಎಂ ಗೀತಾ ನಾಗರಾಜ್, ವಿಜಯಲಕ್ಷ್ಮೀ, ಜಿ.ಯಶೋಧಾ ಪ್ರಕಾಶ್, ಬಿ ಸುಮನಾ, ಅಂಬುಜಾ, ಕವಿತಾ, ಪಂಕಜಾ, ನಾಗರತ್ನಮ್ಮ, ಶೈಲಜಾ, ರಶ್ಮಿ, ಸಂಗೀತ, ಸಂಧ್ಯಾ, ಆದರ್ಶ, ಪ್ರೇಮಲೀಲಾ, ಲಕ್ಷ್ಮೀ, ಸರಸ್ವತಿ, ಭ್ರಮರಂಬಾ, ಅಂಬಿಕಾ ಪರಮೇಶ್ವರ್, ಸೇರಿದಂತೆ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
