ಅಲೆಮಾರಿ ನಿಗಮ ಅಧ್ಯಕ್ಷ ಸ್ಥಾನಕ್ಕೆ ಸಣ್ಣಮಾರೆಪ್ಪಗೆ ಅವಕಾಶ ನೀಡಿ – ಸಚಿವರಿಗೆ ಮನವಿ.
ವಿಜಯನಗರ ಸೆ.19

ದಿನಾಂಕ:17.09.2026 ರಂದು ಹೊಸಪೇಟೆ ನಗರದ ತಾಲೂಕ ಕ್ರೀಡಾಂಗಣ ಇಂದಿರಾಗಾಂಧಿ ಕಟ್ಟೆ ಹತ್ತಿರ, ಕಲ್ಯಾಣ ಕರ್ನಾಟಕ ವಿಮೋಚನೆ ದಿನಾಚರಣೆ ಅಂಗವಾಗಿ ಶ್ರೀ ಕೆ.ಎಸ್.ಬಸವಂತಪ್ಪ ರವರು, ಮಾನ್ಯ ಬಂದರು ಮತ್ತು ಮೀನುಗಾರಿಕೆ ಮತ್ತು ಮುಜರಾಯಿ ಇಲಾಖೆ ಸಚಿವರು ಹಾಗೂ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರು. ಇವರು ಆಗಮಿಸಿದ್ದು, ಇವರ ಜೊತೆಗೆ ಮಾನ್ಯ ಹೆಚ್.ಆರ್ ಗವಿಯಪ್ಪ, ಶಾಸಕರು ಇವರ ಸಮ್ಮುಖದಲ್ಲಿ ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟುಗಳ ಒಕ್ಕೂದಿಂದ ಮತ್ತು ಎಲ್ಲಾ ಅಲೆಮಾರಿ ಸಂಘನೆಗಳ ಮುಖಂಡರುಗಳಿಂದ ಮನವಿ ಸಲ್ಲಿಸಲಾಯಿತು.
ಕಳೆದ 4 ದಶಕಗಳಿಂದ ಅಲೆಮಾರಿಗಳ ಹಕ್ಕುಗಳಿಗಾಗಿ ಹೋರಾಡಿ, ನಿಗಮ ಸ್ಥಾಪನೆಗೆ ಕಾರಣಕರ್ತರಾದ ಹಿರಿಯ ಕಾಂಗ್ರೆಸ್ ಮುಖಂಡ ಶ್ರೀ ಸಣ್ಣ ಮಾರೇಪ್ಪ (ಬುಡುಗ ಜಂಗಮ) ಅವರನ್ನು ‘ಕರ್ನಾಟಕ ರಾಜ್ಯ SC/ST ಅಲೆಮಾರಿ ಅಭಿವೃದ್ಧಿ ನಿಗಮ’ ದ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಕುರಿತು ಶಿಫಾರಸ್ಸು ಮತ್ತು ಸವಿನಯ ಮನವಿ.ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ ಶ್ರೀ ಸಣ್ಣ ಮಾರೇಪ್ಪ (ಬುಡುಗ ಜಂಗಮ) ಅವರು ಕಳೆದ 40 ವರ್ಷಗಳಿಂದ ಸಾಮಾಜಿಕ ನ್ಯಾಯದ ಹರಿಕಾರರಾಗಿ ಹಾಗೂ 1992 ರಿಂದ ಕಳೆದ 34 ವರ್ಷಗಳಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೈನಿಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಾತ್ರವಲ್ಲದೆ ಹಿಂದುಳಿದ ವರ್ಗಗಳ (OBC) ವ್ಯಾಪ್ತಿಯಲ್ಲಿ ಬರುವ ಸಮಸ್ತ ಅಲೆಮಾರಿ, ಅರೆ-ಅಲೆಮಾರಿ ಹಾಗೂ ಸಮುದಾಯಗಳ ಹಕ್ಕುಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅಪರೂಪದ ಹಿರಿಯ ಹೋರಾಟಗಾರರಾಗಿದ್ದಾರೆ.ಶ್ರೀ ಸಣ್ಣ ಮಾರೇಪ್ಪ ಅವರ 4 ದಶಕಗಳ ಐತಿಹಾಸಿಕ ಹೋರಾಟ ಮತ್ತು ಸಮಾಜ ಮುಖಿ ಸೇವೆ ಸಲ್ಲಿಸಿರುತ್ತಾರೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ.
“ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು” ಹಾಗೂ “ಶ್ರೀ ಡಿ.ಕೆ ಶಿವಕುಮಾರ್” ಅವರ ನೇತೃತ್ವದ ಐತಿಹಾಸಿಕ ‘ಬೆಂಗಳೂರು ಟು ಬಳ್ಳಾರಿ ಪಾದಯಾತ್ರೆ’ಯಲ್ಲಿ ಸಕ್ರಿಯ ಪಾತ್ರ.ಮಾಜಿ ಸಚಿವರಾದ “ಶ್ರೀಮತಿ ಉಮಾಶ್ರೀ” ಅವರ ನೇತೃತ್ವದ ‘ಬಳ್ಳಾರಿ ಯಿಂದ ತುಂಗಭದ್ರಾ ಡ್ಯಾಂ ಪಾದಯಾತ್ರೆ’ರಲ್ಲಿ ಸಕ್ರಿಯ ಪಾತ್ರ “ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ” ಅವರ ‘ಭಾರತ್ ಜೋಡೋ ಯಾತ್ರೆ’ (ಬಳ್ಳಾರಿಯಿಂದ ರಾಯಚೂರಿನ ವರೆಗೆ) ಸಾವಿರಾರು ಅಲೆಮಾರಿ ಜನರನ್ನು ಸಂಘಟಿಸಿ ಯಶಸ್ವಿ ಗೊಳಿಸಿದ ಹೆಗ್ಗಳಿಕೆ.
ಚುನಾವಣೆಗಳಲ್ಲಿ ಸಂಘಟನಾ ಶಕ್ತಿ:-

2013, 2023 ರ ವಿಧಾನ ಸಭಾ ಚುನಾವಣೆ ಹಾಗೂ 2014, 2024 ರ ಲೋಕಸಭಾ ಚುನಾವಣೆಗಳಲ್ಲಿ ಕಲ್ಯಾಣ ಕರ್ನಾಟಕ ಸೇರಿದಂತೆ ಇಡೀ ರಾಜ್ಯಾದ್ಯಂತ ಸಂಚರಿಸಿ, ಬುಡುಗ ಜಂಗಮ ಹಾಗೂ ಸಮಸ್ತ ಅಲೆಮಾರಿ ಸಮುದಾಯಗಳ ಮತಗಳನ್ನು ಕಾಂಗ್ರೆಸ್ ಪಕ್ಷದ ಪರವಾಗಿ ಒಗ್ಗೂಡಿಸಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ.
ಪ್ರಸ್ತುತ ನಿರ್ವಹಿಸುತ್ತಿರುವ ಪ್ರಮುಖ ಜವಾಬ್ದಾರಿಗಳು:-
1) ಅಧ್ಯಕ್ಷರು:-
ಕರ್ನಾಟಕ ರಾಜ್ಯ ಬುಡುಗ ಜಂಗಮ ಕ್ಷೇಮಾಭಿವೃದ್ಧಿ ಸಂಘ (ರಿ.) ಬೆಂಗಳೂರು.
2) ರಾಜ್ಯ ಉಪಾಧ್ಯಕ್ಷರು:-
ಕೆ.ಪಿ.ಸಿ.ಸಿ ಸಾಮಾಜಿಕ ನ್ಯಾಯ ವಿಭಾಗ, ಕರ್ನಾಟಕ
3) ಸಂಘಟನಾ ಕಾರ್ಯದರ್ಶಿ:-
ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ.
4) ಮಾಜಿ ಉಪಾಧ್ಯಕ್ಷರು:-
ಅಸಂಘಟಿತ ಕಾರ್ಮಿಕರ ವಿಭಾಗ,
ಬಳ್ಳಾರಿ ಜಿಲ್ಲೆ ನಮ್ಮ ಕಳಕಳಿಯ
ಶಿಫಾರಸ್ಸು:-
ಅಲೆಮಾರಿ ಕೋಶ ಮತ್ತು ನಿಗಮದ ಸೃಷ್ಟಿಗೆ ಅಡಿಪಾಯ ಹಾಕಿ, 40 ವರ್ಷಗಳಿಂದ ಸಮುದಾಯದ ಕಣ್ಣೀರೊರೆಸಿದ ಇಂತಹ ಮಹಾನ್ ಹೋರಾಟಗಾರರಿಗೆ ನಿಗಮದ ಅಧ್ಯಕ್ಷ ಸ್ಥಾನ ನೀಡುವುದು ಕೇವಲ ಒಬ್ಬ ವ್ಯಕ್ತಿಗೆ ನೀಡುವ ಗೌರವವಲ್ಲ, ಬದಲಾಗಿ ಇಡೀ ಅಲೆಮಾರಿ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ನೀಡುವ ಅತ್ಯುನ್ನತ ಗೌರವ ಮತ್ತು ನ್ಯಾಯವಾಗಿದೆ.

ಆದ್ದರಿಂದ, ಶ್ರೀ ಸಣ್ಣ ಮಾರೇಪ್ಪ ಅವರ ದೀರ್ಘಕಾಲದ ನಿಸ್ವಾರ್ಥ ಸೇವೆ. ನಿಗಮ ಸ್ಥಾಪನೆಯಲ್ಲಿನ ಕೊಡುಗೆ ಮತ್ತು ಪಕ್ಷ ನಿಷ್ಠೆಯನ್ನು ಪರಿಗಣಿಸಿ, ಅವರನ್ನು “ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ” ನೇಮಕ ಮಾಡ ಬೇಕಾಗಿ ಕೈಮುಗಿದು ಸವಿನಯವಾಗಿ ಕೋರುತ್ತೇನೆ.ತಮ್ಮ ಸಾಮಾಜಿಕ ನ್ಯಾಯದ ನಾಯಕತ್ವದಿಂದ ಈ ಮನವಿಗೆ ತಕ್ಷಣದ ಸಕಾರಾತ್ಮಕ ಆದೇಶ ದೊರೆಯಲಿದೆ ಎಂಬ ದೃಢ ವಿಶ್ವಾಸವಿದೆ. ಎಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ
1) ಕಲಾವಿದರ ಸಂಘದ ಅಧ್ಯಕ್ಷರು, ಕಿನ್ನೂರು ಶೇಖಪ್ಪ,
2) ಹಂಡಿಜೋಗಿ ಸಮಾಜದ ಜಿಲ್ಲಾಧ್ಯಕ್ಷರು ಜೆ.ರಮೇಶ,
3) ಸುಡುಗಾಡು ಸಿದ್ದರ ಜಿಲ್ಲಾಧ್ಯಕ್ಷರು ಎಸ್.ಕೆ.ಚೌಡಪ್ಪ,
4)ಸಿಂದೋಳ ಸಮಾಜದ ಅಧ್ಯಕ್ಷರು ಹಂಪಯ್ಯ,
5) ಕರ್ನಾಟಕ ನೈಜ ಆಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ಗೌರವಾಧ್ಯಕ್ಷರು ಸಣ್ಣ ಮಾರೆಣ್ಣ,
6) ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟುಗಳ ಒಕ್ಕೂದ ಉಪಾಧ್ಯಕ್ಷರು ಯಲ್ಲಪ್ಪ.
ಇತರೆ ಅಲೆಮಾರಿ ಸಮಾಜದ ಮುಖಂಡರು ಜಂಬಣ್ಣ, ಮಾರೆಪ್ಪ ಎಡವಲ್ಲಿ, ಭದ್ರ, ಮಹೇಶ, ಮಂಜಪ್ಪ, ಗಿರೀಶ, ಶಾಮೇಶ ಇನ್ನು ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಿನ್ನೂರು ಶೇಖಪ್ಪ, ಜೆ.ರಮೇಶ, ಎಸ್.ಕೆ ಚೌಡಪ್ಪ, ಹಂಪಯ್ಯ, ಯಲ್ಲಪ್ಪ, ಜಂಬಣ್ಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ ಶೆಟ್ಲರ್ ವಿಜಯನಗರ
