‘ಟಿವಿ ಠೀವಿ’ ಪತ್ರಿಕೆ – ಪುನರಾರಂಭ.
ಬೆಂಗಳೂರ ಸೆ.23

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ (ರಿ) ನ ಆಂತರಿಕ ಪ್ರಸಾರದ ದ್ವೈಮಾಸಿಕ ಪತ್ರಿಕೆ ‘ಟಿವಿ ಠೀವಿ’ ಅಂತರಾಳದ ಮಹಾ ಧ್ವನಿಯನ್ನು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕರಾದ ಎನ್.ಆರ್ ರಮೇಶ್ ರವರು ಪುನರಾರಂಭ ಗೊಳಿಸಿದರು.
ಪತ್ರಿಕೆಯ ಸಂಪಾದಕರಾದ ಹಿರಿಯೂರು ರಾಘವೇಂದ್ರ, ಕೆಟಿವಿಎ ಅಧ್ಯಕ್ಷ ಗಣೇಶ್‌ರಾವ್ ಕೇಸರ್ಕರ್, ಚಲನ ಚಿತ್ರ ಕಲಾವಿದ ಶ್ರೀನಗರ ಕಿಟ್ಟಿ, ಗೌರವಾಧ್ಯಕ್ಷರಾದ ಪದ್ಮಾ ವಾಸಂತಿ, ಕಾರ್ಯದರ್ಶಿ ಬೆಳ್ಳಿಚುಕ್ಕಿ ವೀರೇಂದ್ರ, ರೇಣು ಶಿಕಾರಿ ಎನ್ ಟಿ ರಾಮಸ್ವಾಮಿ, ಡಾ, ಎ.ಆರ್ ಗೋವಿಂದಸ್ವಾಮಿ ಅವರುಗಳು ಉಪಸ್ಥಿತರಿದ್ದರು.

ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಎನ್ ಆರ್ ರಮೇಶ್ “ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ, ಟೆಲಿವಿಷನ್ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಕ್ಲಬ್ (ರಿ), ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ (ರಿ) ಎರಡೂ ಸಂಸ್ಥೆಗಳು ಒಂದಾಗಿ ಕೆಲಸ ಮಾಡಿದರೆ ಏನು ಬೇಕಾದರೂ ಸಾಧಿಸಬಹುದು” ಎಂದು ಹಿತವಚನ ನುಡಿದರು.
ಪತ್ರಿಕೆ ಪುನರಾರಂಭವಾಗಿದ್ದಕ್ಕೆ ಕೆಟಿಎದ ಎಲ್ಲ ಪದಾಧಿಕಾರಿಗಳಿಗೂ, ಚಲನ ಚಿತ್ರ ನಿರ್ದೇಶಕರು, ಕಲಾವಿದರು, ಸಾಹಿತಿಗಳು ಪತ್ರಿಕೆ ಸಂಪಾದಕರಾದ ರಾಘವೇಂದ್ರ ಹಿರಿಯೂರು ಅವರ ನೇತೃತ್ವದಲ್ಲಿ ಪತ್ರಿಕೆ ಯಶಸ್ಸು ಕಾಣಲೆಂದು ಕಲಾಪೋಷಕರ ಮಠ ಸಿದ್ದನಕೊಳ್ಳದ ಡಾ, ಶಿವಕುಮಾರ ಮಹಾ ಸ್ವಾಮಿಗಳು, ಚಲನ ಚಿತ್ರ ಹಿರಿಯ ಪತ್ರಕರ್ತರಾದ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ನಿರ್ದೇಶಕ ನಿರ್ಮಾಪಕರಾದ ಲೋಕೇಶ ವಿದ್ಯಾಧರ, ಅರವಿಂದ ಮುಳಗುಂದ, ರೇಣುಕುಮಾರ ಸಂಸ್ಥಾನಮಠ, ಪತ್ರಿಕಾ ಸಂಪಾದಕರುಗಳಾದ ಗಣಪತಿ ಗಂಗೊಳ್ಳಿ, ಲಕ್ಷ್ಮಣ ಬಾರಕೇರ, ಅಶೋಕ ತೋಟದ, ಕಲಾವಿದರಾದ ವೀರೇಶ ಪುರವಂತರ, ಸಂಗನಗೌಡ ಕುರುಡಗಿ, ರವೀಂದ್ರ ರಾಮದುರ್ಗಕರ, ವೀರಣ್ಣ ವಿಠಲಾಪೂರ, ಛಾಯಾಗ್ರಾಹಕ ಶರಣು ಸುಗ್ನಳ್ಳಿ, ಅಭಿ ಕ್ರಿಯೇಷನ್ಸ್ ನ ನಿರ್ಮಾಪಕರಾದ ಶ್ರೀಮತಿ ವಿದ್ಯಾ ಗಂಜಿಹಾಳ, ಶ್ರೀಮತಿ ಸಂಗೀತಾ ಚಂದ್ರಶೇಖರ ಆಡಿನ, ಶ್ರೀಮತಿ ರೇಖಾ ಸಿದ್ದುಕೃಷ್ಣ ಢೇಕಣಿ ಮೊದಲಾದವರು ಶುಭಕೋರಿದ್ದಾರೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ
