ಪತ್ರಕರ್ತ ನಾಗರಾಜ್ ತಡಕಲ್‌ ಅವರ ಮೇಲೆ ಅನುಚಿತ ವರ್ತನೆ ಖಂಡನೀಯ – ಅಶೋಕ ನೀಲಗಲ್.

ಮಾನ್ವಿ ಸೆ.22

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೆಪ್ಟೆಂಬರ್ 16 ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎನ್.ಎಸ್ ಬೋಸರಾಜು ಅವರು ದಲಿತ ಪತ್ರಕರ್ತ ನಾಗರಾಜ್ ತಡಕಲ್ ಅವರೊಂದಿಗೆ ಕೋಪದಿಂದ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕೆಆರ್‌ಎಸ್ ಜಿಲ್ಲಾಧ್ಯಕ್ಷ ಅಶೋಕ ನೀಲಗಲ್ ಖಂಡನೆ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ರೈತರು ಜೋಳ ಖರೀದಿ ಹಣ ಪಾವತಿಯಲ್ಲಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ನಡೆಸಿದ ಹೋರಾಟದ ಕುರಿತು ಪತ್ರಕರ್ತ ನಾಗರಾಜ್ ತಡಕಲ್ ಅವರು ವಸ್ತು ನಿಷ್ಠುರವಾಗಿ ವರದಿ ಮಾಡಿದ್ದರು. ಈ ವರದಿಯ ಹಿನ್ನೆಲೆಯಲ್ಲಿ ಸುದ್ದಿ ಗೋಷ್ಠಿಯಲ್ಲೇ ಮಾಜಿ ಸಚಿವರು ಪತ್ರಕರ್ತರ ಮೇಲೆ ಕೋಪಗೊಂಡು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಅಶೋಕ ನೀಲಗಲ್ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿರುವ ಹಿರಿಯ ರಾಜಕೀಯ ನಾಯಕರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಾಳ್ಮೆ ಹಾಗೂ ಸಾರ್ವಜನಿಕ ಘನತೆಯನ್ನು ಕಾಪಾ ಡಿಕೊಳ್ಳಬೇಕು. ಜನ ಪ್ರತಿನಿಧಿಗಳ ನಡೆ ನುಡಿ ಸಮಾಜಕ್ಕೆ ಮಾದರಿಯಾಗ ಬೇಕು. ಇಂತಹ ಘಟನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗುವುದರ ಜೊತೆಗೆ ನಾಯಕರ ಮೇಲಿನ ಗೌರವದ ಮೇಲೂ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಸಿರವಾರ ಪಟ್ಟಣದಲ್ಲಿಯೂ ತಮ್ಮ ಸಂಘಟನೆಯ ಮುಖಂಡರೊಬ್ಬರೊಂದಿಗೆ ಇದೇ ರೀತಿಯ ಅನುಚಿತ ವರ್ತನೆ ನಡೆದಿತ್ತು ಎಂದು ಅಶೋಕ ನೀಲಗಲ್ ಆರೋಪಿಸಿದ್ದಾರೆ.

ಇತ್ತೀಚಿನ ಘಟನೆ ಹಿನ್ನೆಲೆಯಲ್ಲಿ ದಲಿತ ಸಮುದಾಯದ ಪತ್ರಕರ್ತರನ್ನು ಗುರಿಯಾಗಿಸಿ ಕೊಂಡು ಇಂತಹ ವರ್ತನೆ ನಡೆಯುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಅವರು ಹೇಳಿದ್ದಾರೆ.

ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಮಾಜಿ ಸಚಿವರು ಎಚ್ಚರಿಕೆ ವಹಿಸ ಬೇಕು. ಇಲ್ಲವಾದಲ್ಲಿ ತಮ್ಮ ಸಂಘಟನೆಯ ವತಿಯಿಂದ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಕೆಆರ್‌ಎಸ್ ಜಿಲ್ಲಾಧ್ಯಕ್ಷ ಅಶೋಕ ನೀಲಗಲ್ ಎಚ್ಚರಿಸಿದ್ದಾರೆ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button