1991–92 ನೇ. ಸಾಲಿನ ವಿದ್ಯಾರ್ಥಿಗಳಿಂದ ಶ್ರದ್ಧಾಂಜಲಿ – ಐದು ನಿಮಿಷ ಮೌನಾಚರಣೆ.

ಆಲಮೇಲ ಸೆ.22

ಎ.ಕೆ ನಂದಿ ಹೈಸ್ಕೂಲ್‌ನ ನಿವೃತ್ತ ಪ್ರಾಚಾರ್ಯರಾದ ಶ್ರೀ ಮುರೇಗೆಪ್ಪ ಗೂಗವಾಡ ಅವರು ಸೆ.22ರಂದು ನಿಧನರಾದ ಹಿನ್ನೆಲೆಯಲ್ಲಿ, 1991–92ನೇ ಸಾಲಿನ ಅವರ ವಿದ್ಯಾರ್ಥಿಗಳು ತೀವ್ರ ಸಂತಾಪ ವ್ಯಕ್ತಪಡಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಐದು ನಿಮಿಷ ಮೌನಾಚರಣೆ ನಡೆಸಿ ಅಗಲಿದ ಗುರುಗಳಿಗೆ ಗೌರವ ನಮನ ಸಲ್ಲಿಸಲಾಯಿತು.

ಶ್ರೀ ಮುರೇಗೆಪ್ಪ ಗೂಗವಾಡ ಅವರು ಕೇವಲ ಪಾಠ ಬೋಧಿಸಿದ ಶಿಕ್ಷಕರಾಗಿರಲಿಲ್ಲ. ವಿದ್ಯಾರ್ಥಿಗಳಿಗೆ ವಿಷಯದ ಜ್ಞಾನ ನೀಡುವುದರ ಜೊತೆಗೆ, ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು, ಹಿರಿಯರನ್ನು ಗೌರವಿಸಬೇಕು, ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಬದುಕಬೇಕು, ಕಷ್ಟಗಳನ್ನು ಎದುರಿಸಿ ಮುಂದೆ ಸಾಗಬೇಕು ಎಂಬಂತಹ ಜೀವನದ ಮೌಲ್ಯಗಳನ್ನು ತಿಳಿಸಿಕೊಟ್ಟ ಗುರುಗಳಾಗಿದ್ದರು ಎಂದು ಅವರ ಹಳೆಯ ವಿದ್ಯಾರ್ಥಿಗಳು ಸ್ಮರಿಸಿದರು.

1991–92 ನೇ. ಸಾಲಿನಲ್ಲಿ ಅವರಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಮಾತನಾಡಿ, “ಗುರುಗಳು ನಮಗೆ ಅಕ್ಷರ ಜ್ಞಾನ ನೀಡಿದಷ್ಟೇ ಅಲ್ಲದೆ, ಉತ್ತಮ ವ್ಯಕ್ತಿಗಳಾಗಿ ರೂಪು ಗೊಳ್ಳಲು ಮಾರ್ಗದರ್ಶನ ನೀಡಿದ್ದರು. ಅವರ ಮಾತುಗಳು, ಬೋಧಿಸಿದ ಮೌಲ್ಯಗಳು ಹಾಗೂ ವಿದ್ಯಾರ್ಥಿಗಳ ಮೇಲಿನ ಕಾಳಜಿ ಇಂದಿಗೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಇಂದು ಅವರು ನಮ್ಮೊಂದಿಗಿಲ್ಲ ಎಂಬ ನೋವು ನಮ್ಮನ್ನು ಕಾಡುತ್ತಿದೆ. ಆದರೆ ಅವರು ಕಲಿಸಿದ ಪಾಠಗಳು ನಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನಮ್ಮೊಂದಿಗೆ ಇರುತ್ತವೆ” ಎಂದು ಭಾವುಕರಾಗಿ ಹೇಳಿದರು.

“ಗುರು ದೇಹದಿಂದ ನಮ್ಮನ್ನು ಅಗಲಬಹುದು, ಆದರೆ ಅವರು ನೀಡಿದ ಜ್ಞಾನ, ಸಂಸ್ಕಾರ ಮತ್ತು ಜೀವನದ ಮಾರ್ಗದರ್ಶನ ಎಂದಿಗೂ ನಮ್ಮನ್ನು ಅಗಲುವುದಿಲ್ಲ. ನಮ್ಮ ಬದುಕಿನಲ್ಲಿ ನಾವು ಸಾಧಿಸುವ ಪ್ರತಿಯೊಂದು ಒಳ್ಳೆಯ ಕಾರ್ಯದಲ್ಲೂ ಅವರ ಬೋಧನೆಯ ಛಾಪು ಇರುತ್ತದೆ. ಅವರು ನಮ್ಮ ಪಾಲಿಗೆ ಸದಾ ಆದರ್ಶ ಗುರುಗಳಾಗಿಯೇ ಉಳಿಯುತ್ತಾರೆ” ಎಂದು ವಿದ್ಯಾರ್ಥಿಗಳು ನುಡಿದರು.

ಅಗಲಿದ ಗುರುಗಳ ಆತ್ಮಕ್ಕೆ ಶಾಂತಿ ಸಿಗಲೆಂದು ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ, ಐದು ನಿಮಿಷ ಮೌನಾಚರಣೆ ನಡೆಸಿದರು.

ಅಂತ್ಯ ಸಂಸ್ಕಾರವು ಸೆ. 23 ರಂದು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ:-

ಈ ಸಂದರ್ಭದಲ್ಲಿ 1991–92 ನೇ. ಸಾಲಿನ ವಿದ್ಯಾರ್ಥಿಗಳು ಸೇರಿದಂತೆ ಅವರ ಹಳೆಯ ವಿದ್ಯಾರ್ಥಿಗಳು, ಅಭಿಮಾನಿಗಳು ಹಾಗೂ ಹಿತೈಷಿಗಳು ಅಗಲಿದ ಗುರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button