ಸೆ. 24 ರಂದು ಬಡೇಸಾಹೇಬ್ ದರ್ಗಾ – ಉರ್ಸ್ ಶರೀಫ್ ಆಚರಣೆ.
ಮಾನ್ವಿ ಸೆ.22

ಪಟ್ಟಣದ ಜುಮ್ಮಲದೊಡ್ಡಿಯ ಹಜರತ್ ಸೈಯದ್ ಷಾ ಮುರ್ತುಜಾ ಖಾದ್ರಿ ರವರ ಬಡೇಸಾಹೇಬ್ ದರ್ಗಾದ ಉರ್ಸೆ ಶರೀಫ್ ಅಂಗವಾಗಿ ಸುದ್ದಿಗೋಷ್ಠಿ ನಡೆಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮ ಗುರುಗಳಾದ “ಸೈಯದ್ ಸಜ್ಜಾದ್ ಹುಸೇನಿ ಮತವಾಲೆ ಸಾಹೇಬ್” ಮಾತನಾಡಿ, ಸೆ.24 ರಂದು ಗುರುವಾರ ರಾತ್ರಿ 8:30 ಕ್ಕೆ ಪಟ್ಟಣದ ಬಡೇಸಾಹೇಬ್ ದರ್ಗಾದಿಂದ ಜಾಮೀಯ ಮಸೀದಿ ವರೆಗೆ ಸಂಧಲ್ (ಗಂಧ) ಮೆರವಣಿಗೆ ನಡೆಯಲಿದೆ. ನಂತರ ಮರಳಿ ದರ್ಗಾಕ್ಕೆ ಸಂಧಲ್ ತರಲಾಗುವುದು. ಹಜರತ್ ಗೌಸೇ ಪಾಕ್ ರವರ ಗ್ಯಾರವಿ ಶರೀಫ್ ಅಂಗವಾಗಿ ಜಂಡಾ ಏರಿಸಲಾಗುವುದು. ಉರುಸ್‌ಗೆ ಆಗಮಿಸುವ ಸರ್ವ ಧರ್ಮದ ಭಕ್ತರಿಗೆ ಲಂಗಾರ್ ಮೂಲಕ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ.
ಸೆ.25 ರಂದು ಶುಕ್ರವಾರ ಮಧ್ಯಾಹ್ನ 2.30 ಕ್ಕೆ ಉರುಸ್ ಕಾರ್ಯಕ್ರಮ ಹಾಗೂ ಸೆ.26 ರಂದು ಶನಿವಾರ ಸಂಜೆ 5 ಗಂಟೆಗೆ ಜಿಯಾರತ್ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಈ ಉರ್ಸೆ ಶರೀಫ್‌ಗೆ ಚಿಕ್ಕಮಗಳೂರಿನ ದಾದಾ ಹಯಾತ್ ಖಲಂದರ್ ದರ್ಗಾದ ಸೈಯದ್ ಗೌಸ್ ಮೈನುದ್ದೀನ್ ಖಾದ್ರಿ, ಆದೋನಿಯ ಸೈಯದ್ ತಲಾಹ್ ಖಾದ್ರಿ, ರಾಯಚೂರಿನ ಹೊಸೂರು ದರ್ಗಾದ ಸಜ್ಜಾದ್ ಸೈಯದ್ ಕರಿಮುಲ್ಲಾ ಖಾದ್ರಿ, ಸೈಯದ್ ನಬಿ ಮೊಹಿದ್ದೀನ್ ಖಾದ್ರಿ, ಕೌತಾಳಂ, ಜಂತಕಲ್, ಕಂಪ್ಲಿ, ಗಂಗಾವತಿ, ಸಿಂಧನೂರು, ಮಾನ್ವಿ, ರಾಯಚೂರು ಸೇರಿದಂತೆ ವಿವಿಧ ದರ್ಗಾಗಳ ಗುರುಗಳು, ಉಲೇಮಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು ಆಗಮಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ದರ್ಗಾ ಆವರಣದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು:-
ಸುದ್ದಿಗೋಷ್ಠಿಯಲ್ಲಿ ಹಜರತ್ ಸೈಯದ್ ಷಾ ಇರ್ಫಾನ್ ಖಾದ್ರಿ ದರ್ಗಾದ ಸಜ್ಜಾದ್ ನಶೀನ್, ಸೈಯದ್ ಅಬೀದ್ ಖಾದ್ರಿ ಮುತವಲ್ಲಿ, ಸೈಯದ್ ರಿಯಾಜುದ್ದೀನ್ ಖಾದ್ರಿ, ಸೈಯದ್ ಇಮ್ರಾನ್ ಖಾದ್ರಿ, ಸೈಯದ್ ನುಸರತ್ ಖಾದ್ರಿ, ಜನಾಬ್ ನಾಸೀರ್ ಖಾಜಿ, ಸೈಯದ್ ನಜೀರುದ್ದೀನ್ ಖಾದ್ರಿ, ಇಬ್ರಾಹಿಂ ಕುರೇಶಿ. ಹಫೀಸ್ ಆದಿಲ್ ರಶೀದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

