ಕಬ್ಬಿಗೆ ₹5,500 ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ – ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇಂದ ಹುಬ್ಬಳಿ ಚಲೋ, ರೈತರಲ್ಲಿ ಮನವಿ.

ಆಲಮೇಲ ಸೆ.26

ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನಿಗದಿ ಮಾಡಬೇಕು, ಎಂಎಸ್‌ಪಿ ಜಾರಿಗೆ ತರಬೇಕು ಹಾಗೂ ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಆಲಮೇಲ ವತಿಯಿಂದ ಸೆಪ್ಟೆಂಬರ್ 29ರಂದು ಹುಬ್ಬಳಿ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಕರ್ನಾಟಕದಿಂದ ಎಥೆನಾಲ್ ಖರೀದಿಯನ್ನು ಪ್ರಸ್ತುತ ಶೇಕಡ 30 ರಷ್ಟಿದ್ದು, ಅದನ್ನು ಶೇಕಡ 100 ಕ್ಕೆ ಹೆಚ್ಚಿಸಬೇಕು ಎಂಬುದು ರೈತರ ಮತ್ತೊಂದು ಪ್ರಮುಖ ಬೇಡಿಕೆ ಯಾಗಿದೆ.

ಈ ಕುರಿತು ಆಲಮೇಲ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ತಾಲೂಕು ಗೌರವಾಧ್ಯಕ್ಷ ಶಶಿಧರ್ ನಾಯ್ಕೋಡಿ ಹಾಗೂ ಅಧ್ಯಕ್ಷ ಮಾಹಾಂತೇಶ್ ಕತ್ತಿ, ತಾಲೂಕಿನ ಸಮಸ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಶಶಿಕಾಂತ್ ಗುರೂಜಿ ಗೌರವಾಧ್ಯಕ್ಷರು, ಚೆನ್ನಪ್ಪ ಪೂಜಾರಿ ರಾಜ್ಯಾಧ್ಯಕ್ಷರು ಹಾಗೂ ಸಂಗಮೇಶ್ ಸಗರ್ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಮಹೇಶ ಹುನ್ನಳ್ಳಿ, ಕಾರ್ಯದರ್ಶಿ ಇಮ್ರಾನ್ ಖಾನ್ ಎಲಗಾರ್, ಖಜಾಂಚಿ ರಾಜು ಮೇತ್ರಿ ಸೇರಿದಂತೆ ಬಾಳು ಕುಂಬಾರ್, ಸದಸ್ಯರಾದ ರಾಮು ಲಾವಟೆ, ಶಿವಯೋಗಿ ಕತ್ತಿ, ಈರಪ್ಪ ಮೇಟಿ ಮತ್ತು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕ ಜಿಲ್ಲಾಧ್ಯಕ್ಷ ಕೇದಾರ ಕ್ಷತ್ರಿ ಹಾಗೂ ತಾಲೂಕಿನ ಅನೇಕ ರೈತರು ಉಪಸ್ಥಿತರಿದ್ದರು.

ಈ ಸುದ್ದಿ ಗೋಷ್ಠಿ ಮುಖಾಂತರ ಆಲಮೇಲ ತಾಲೂಕಿನ ರೈತ ದೇವರಿಗೆ ಮನವಿ ಮಾಡಿ ಕೊಳ್ಳುವುದೇನೆಂದರೆ 28 ಸೆಪ್ಟೆಂಬರ್ 2026 ರಂದು ರಾತ್ರಿ 10 ಗಂಟೆಗೆ ಆಲಮೇಲ ಅಂಬೇಡ್ಕರ್ ವೃತ್ತದ ಬಳಿ ಸೇರಬೇಕಾಗಿ ವಿನಂತಿ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button