ನೇತಾಜಿ ಸ್ನೇಹ ಬಳಗ ದಿಂದ ಗಾಂಧೀಜಿ ಮತ್ತು ಶಾಸ್ತ್ರೀಜಿ – ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಚಳ್ಳಕೆರೆ ಅ.03

ನಗರದ ಪಾವಗಡ ರಸ್ತೆಯ ನ್ಯಾಷನಲ್ ಮತ್ತು ಭಾನು ಸ್ಟುಡಿಯೋದ ಕಛೇರಿಯಲ್ಲಿ ನೇತಾಜಿ ಸ್ನೇಹ ಬಳಗದಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಸರಳವಾಗಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ಮತ್ತು ಹೋರಾಟ, ವ್ಯಕ್ತಿತ್ವದ ಬಗ್ಗೆ ಸಾಮಾಜಿಕ ಹೋರಾಟಗಾರ ಎಚ್.ಎಸ್ ಸೈಯದ್, ಸಂಜೀವಿನಿ ಲ್ಯಾಬ್ ನ ಮೃತ್ಯುಂಜಯ, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ಮಾತನಾಡಿದರು.

ಜಯಂತ್ಯುತ್ಸವದಲ್ಲಿ ನೇತಾಜಿ ಸ್ನೇಹ ಬಳಗದ ಅಧ್ಯಕ್ಷ ನೇತಾಜಿ ಪ್ರಸನ್ನ, ಸಂತೋಷ್ ಕುಮಾರ್, ದೇವರಾಜ್, ರಮೇಶ್, ಚನ್ನಮಲ್ಲಪ್ಪ, ಬಿಂದುರೆಡ್ಡಿ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
