ಅಹಿಂಸೆ ಮಾರ್ಗದಲ್ಲಿ ಸಾಗೋಣ – ಹಂಪಯ್ಯ ನಾಯಕ ಕರೆ ನೀಡಿದರು.

ಮಾನ್ವಿ ಅ.02

ನಗರದಲ್ಲಿ ಈ ದಿನ ಪಂಪ ಉದ್ಯಾನವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀ ಜೀ ಜಯಂತಿಯ ಅಂಗವಾಗಿ ಮಾಲಾರ್ಪಣೆ ಮಾಡುವ ಮುಖಾಂತರ ಶಾಸಕರಾದ ಜಿ.ಹಂಪಯ್ಯ ನಾಯಕ ಗಾಂಧಿ ಜಯಂತಿಗೆ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಅವರು ಗಾಂಧೀಜಿಯವರ ಸ್ಮರಣೆಯನ್ನು ಮಾಡುತ್ತ ಅಹಿಂಸೆಯ ಎದುರು ಬಂದೂಕಿನ ನಳಿಕೆಗಳೂ ಮೌನವಾಗಿ ಶರಣಾಗುತ್ತವೆ ಎಂಬುದನ್ನು ಜಗತ್ತಿಗೆ ಸಾಧಿಸಿ ತೋರಿಸಿದವರು ಮಹಾತ್ಮ ಗಾಂಧಿಜಿ ಅವರು ತಾನು ಉರಿದು ಜಗತ್ತಿಗೆ ಬೆಳಕು ನೀಡಿದ ದೀಪದಂತೆ, ಸತ್ಯ, ಧರ್ಮ ಮತ್ತು ಅಹಿಂಸೆಯ ಮಾರ್ಗದಲ್ಲಿ ಬದುಕಿ, ಕೋಟ್ಯಂತರ ಜನರ ಬದುಕಿಗೆ ದಾರಿ ದೀಪವಾದ ಮಹಾ ಚೇತನವಾಗಿದ್ದಾರೆ.

ಸತ್ಯಾಗ್ರಹ ಮತ್ತು ಅಹಿಂಸೆಯ ಅಸ್ತ್ರಗಳ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿ, ಕೋಟ್ಯಂತರ ಭಾರತೀಯರ ಬಂಧಮುಕ್ತ ಬದುಕಿನ ಕನಸನ್ನು ನನಸಾಗಿಸಿದ ಮಹಾತ್ಮರ ಜನ್ಮದಿನವಿಂದು, ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟದ ನಾಯಕರಾಗಿರಲಿಲ್ಲ.

ಸಮಾಜದ ಕಷ್ಟ-ನಷ್ಟಗಳಿಗೆ ಸ್ಪಂದಿಸಿದ, ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಿದ, ಕೋಮುವಾದ, ಜಾತಿವಾದ ಮತ್ತು ಮೂಢ ನಂಬಿಕೆಗಳಿಂದ ನರಳುತ್ತಿದ್ದ ಸಮಾಜದಲ್ಲಿ ಸಹೋದರತ್ವ, ಸಮಾನತೆ ಹಾಗೂ ವೈಚಾರಿಕತೆಯ ಬೆಳಕು ಹರಿಸಲು ನಿರಂತರವಾಗಿ ಶ್ರಮಿಸಿದ ಮಹಾನ್ ಮಾನವತಾವಾದಿ ಆಗಿದ್ದಾರೆ.

ಅವರ ಚಿಂತನೆಗಳು ಒಂದು ಕಾಲಘಟ್ಟಕ್ಕೆ ಸೀಮಿತವಲ್ಲ. ಶತಮಾನಗಳು ಉರುಳಿದರೂ, ತಲೆಮಾರುಗಳು ಬದಲಾದರೂ ಸತ್ಯ, ಅಹಿಂಸೆ, ಸಮಾನತೆ ಮತ್ತು ಮಾನವೀಯತೆಯ ಗಾಂಧಿ ಮಾರ್ಗ ಸದಾ ಪ್ರಸ್ತುತ.

ಇದೇ ಮೌಲ್ಯಗಳು ನಮ್ಮ ದೇಶದ ಪ್ರಜಾಸತ್ತಾತ್ಮಕ ಅಸ್ಮಿತೆಯನ್ನು ಬಲ ಪಡಿಸುವ ಶಕ್ತಿಯಾಗಿವೆ. ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿ ಕೊಂಡು, ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ಮುನ್ನಡೆಯುವ ಸಂಕಲ್ಪ ಮಾಡೋಣ ಎಂದು ಸಮಸ್ತ ಭಾರತೀಯರಿಗೂ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯ ತಿಳಿಸಿದರು.

ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿಗಳ ಅಧ್ಯಕ್ಷರಾದ ಬಿ.ಕೆ ಅಮರೇಶಪ್ಪ ವಕೀಲರು, ಹಳ್ಳಿ ಹೊಸೂರ್ ಶಿವಪ್ಪಗೌಡ, ಜಾವೀದ್ ಹುಸೇನ್,ಸತ್ತಾರ್ ಬಂಗ್ಲೆವಲೇ, ರಾಯಪ್ಪ ವಕೀಲರು, ಕುಮಾರ್ ಸ್ವಾಮಿ, ಸಂಗಮೇಶ್ ಮುಧೋಳ್, ತಾಲೂಕ ದಂಡಾಧಿಕಾರಿಗಳು, ಪುರಸಭೆ ಮುಖ್ಯ ಅಧಿಕಾರಿಗಳು ತಾಲೂಕ ಶಿಕ್ಷಣಾಧಿಕಾರಿಗಳು ಶಿಕ್ಷಕರು ಮಕ್ಕಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button