‘ಜನರಿಂದ ನಾನು ಮೇಲೆ ಬಂದೆ’ ಚಲನ ಚಿತ್ರ – ಅ.16 ಕ್ಕೆ ಬಿಡುಗಡೆ.

ಬೆಂಗಳೂರು ಅ.04

ಶ್ರೀಮಂಜುನಾಥ ಫಿಲ್ಮ್ಸ್ ಬೆಂಗಳೂರು ಅವರ “ಜನರಿಂದ ನಾನು ಮೇಲೆ ಬಂದೆ” ಚಲನ ಚಿತ್ರ ಇದೆ ಅಕ್ಟೋಬರ್ 16 ರಿಂದ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ನವಿಲುಗರಿ ನವೀನ್ ಪಿ ಬಿ ನಿರ್ದೇಶನದ ಈ ಚಿತ್ರ ಡ್ಯಾನ್ಸ್ ಅನ್ನು ಉಸಿರಾಗಿಸಿಕೊಂಡ ಒಬ್ಬ ಹುಡುಗನ ನೈಜ ಕಥೆಯಾಗಿದೆ. ಚಿತ್ರದಲ್ಲಿ ಡ್ಯಾನ್ಸ್ ನಿಂದ ಸಾಕಷ್ಟು ಹೆಸರು ಮಾಡಿರುವ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ.

ಡ್ಯಾನ್ಸ್ ಅಂದ್ರೆ ನೆನಪು ಬರುವುದೇ ‘ಡ್ಯಾನ್ಸ್ ರಾಜಾ ಡ್ಯಾನ್ಸ್’ ಖ್ಯಾತಿಯ ವಿನೋದ್‌ರಾಜ್. ಸುಮಾರು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ವಿನೋದ್‌ರಾಜ್ ಈ ಸಿನಿಮಾದಲ್ಲಿ ಅಭಿನಯಿಸಿರುವುದು ವಿಶೇಷವಾಗಿದೆ. ಬೆಂಗಳೂರು, ಮೇಲುಕೋಟೆ ಮೊದಲಾದೆಡೆ ಚಿತ್ರೀಕರಣ ನಡೆಸಲಾಗಿದ್ದು ಚಿತ್ರದಲ್ಲಿ ಐದು ಹಾಡುಗಳಿವೆ.

ಗಂಧರ್ವರಾಜ್ ಶಂಕರ್ ನಾಯಕನಾಗಿ ಜೊತೆಗೆ ಅಭಿಜಿತ್, ವಿನೋದರಾಜ್, ನವಿಲುಗರಿ ನವೀನ್,ಪಿ.ಬಿ, ಶೈಲಜಾ ದ್ವಾರಕೀಶ್, ಚಾಮರಾಜ ಮಾಸ್ಟರ್, ಶಿವಕುಮಾರ್ ಆರಾಧ್ಯ, ಶ್ಯಾಮಲಮ್ಮ, ಜಯಪ್ರಕಾಶ್ ನಾಗತಿಹಳ್ಳಿ, ಸುನಂದಾ ಕಲಬುರಗಿ, ಪ್ರವೀಣಾ ಕುಲಕರ್ಣಿ, ಸಂದೀಪ್ ಮಲಾನಿ, ಅನಿಲ್ ಕುಮಾರ್ ಬಾಬಿ, ಮಧುಶ್ರೀವಸಂತ, ಶಿವಣ್ಣ, ಆಪ್ತಿ ಪಟವರ್ಧನ್, ಕೃತಿಕಾ ದಿವಾಕರ್, ಶಾಂತಾ ಕುಮಾರಿ, ಕಾಟೇರ ಕೇಶವ, ಅಂಬೇಡ್ಕರ್ ಮಹೇಶ್, ಡಾ, ಅಕ್ಷತಾ, ವಿಶಾಲ ಸತೀಶ್, ಲಲಿತ್ ಕೃಷ್ಣ, ಯಶು ರಾಜ್, ಶಶಿರೇಖಾ ಮೊದಲಾದವರಿದ್ದಾರೆ.

ಗೌತಮ್ ಟಿ ಆರ್ ಛಾಯಾಗ್ರಹಣ ಮತ್ತು ಸಂಕಲನ, ಪೃಥ್ವಿರಾಜ್ ಸಂಕಿ, ಭುವನ್ ಹಾಗೂ ನವೀನ್ ಪಿ ಬಿ ಸಾಹಿತ್ಯ, ಪ್ರಣವ್ ಸತೀಶ್ ಸಂಗೀತ, ಷಣ್ಮುಖ ಗೋವಿಂದ ರಾಜು, ರೇವಣ್ಣಸಿದ್ದ ಫುಲಾರಿ, ಎ ಆರ್ ತನ್ವೀರ್,ನವೀನ್ ಪಿ.ಬಿ, ಯಶಸ್ವಿನಿ ಕಾಪ್ಸೆ ಹಾಡುಗಳನ್ನು ಹಾಡಿದ್ದಾರೆ, ಪಿ.ಆರ್.ಓ ಆರ್.ಚಂದ್ರಶೇಖರ, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಶ್ರೀಮತಿ ಹೇಮಾವತಿ ಬಿ ಬಂಡವಾಳ ಹೂಡಿದ್ದಾರೆ. ಚಿತ್ರವನ್ನು ವೀಕ್ಷಿಸಿ ಚಿತ್ರತಂಡವನ್ನು ಪ್ರೋತ್ಸಾಹಿಸುವಂತೆ ನಿರ್ದೇಶಕರು ಕೋರಿದ್ದಾರೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button