ಭಗವಂತ-ಭಗವಂತಿಯರು ಪರಸ್ಪರ ಅನ್ಯೋನ್ಯ, ಅವಿಭಾಜ್ಯ – ಯತೀಶ್ ಎಂ ಸಿದ್ದಾಪುರ.
ಚಳ್ಳಕೆರೆ ಅ.04


ಪುರಾಣಗಳ ಪ್ರಕಾರ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರು ತಮ್ಮ ತಮ್ಮ ಶಕ್ತಿ ಸ್ವರೂಪಿಣಿಯರಾದ ಪತ್ನಿಯರನ್ನು ತಮ್ಮೊಳಗೇ ಸೇರಿಸಿ ಕೊಂಡು ಪರಸ್ಪರ ಅನ್ಯೋನ್ಯ, ಅವಿಭಾಜ್ಯ ಸಂಬಂಧವನ್ನು ಹೊಂದಿದ್ದಾರೆ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯ ಹಾಗೂ ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.
ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನೆ ನಡೆಸಿ ಕೊಟ್ಟ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಶ್ರೀಮಾತೆ-ಶ್ರೀರಾಮಕೃಷ್ಣ ರೂಪವೆರಡು ಶಕ್ತಿಯೊಂದು” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.

ಬ್ರಹ್ಮನ ಶಕ್ತಿಯಾದ ಸರಸ್ವತಿ ಅವನ ನಾಲಗೆ ಮೇಲೆಯೇ ನೆಲೆಸಿದ್ದಾಳೆ, ವಿಷ್ಣುವಿನ ಶಕ್ತಿಯಾದ ಲಕ್ಷ್ಮೀ ಅವನ ವಕ್ಷಸ್ಥಲದಲ್ಲೇ ನೆಲೆಸಿದ್ದಾಳೆ, ಮಹೇಶ್ವರನ ಶಕ್ತಿಯಾದ ಪಾರ್ವತಿ ಅವನ ಅರ್ಧಶರೀರವೇ ಆಗಿದ್ದಾಳೆ,ಹಾಗೆ ಶ್ರೀಮಾತೆ ಶಾರದಾದೇವಿಯವರು ಶ್ರೀರಾಮಕೃಷ್ಣರೊಳಗೆ ಅಂತರ್ಗತರಾಗಿದ್ದಾರೆಂದು ಅವರು ಹೇಳಿದರು.
ಪಾರಾಯಣ ಕಾರ್ಯಕ್ರಮದಲ್ಲಿ ಲೇಖಕಿ ಡಿ. ಶಬ್ರಿನಾ ಮಹಮದ್ ಅಲಿ,ವಿಹಾನ್ ಅಲಿ,ಹೆಚ್ ಲಕ್ಷ್ಮೀದೇವಮ್ಮ, ರಂಗಮ್ಮ, ವನಜಾಕ್ಷಿ, ವಿಜಯಾಗುರು, ಪುಷ್ಪಲತಾ, ಗೀತಾ ಪ್ರಕಾಶ್, ಸರಸ್ವತಿ, ದಾಕ್ಷಾಯಣಿ, ಸುಧಾಮಣಿ, ಸೌಮ್ಯ,ಪ್ರೇಮಾ, ಗೀತಾ ಸುಂದರೇಶ್ ದೀಕ್ಷಿತ್,ತನುಜಾ, ಸುವರ್ಣ, ತಿಪ್ಪಮ್ಮ ಉಮಾಶಂಕರ್, ಜಯಮ್ಮ, ವಿಶಾಲಾಕ್ಷಿ,ಎಂ ಲಕ್ಷ್ಮೀದೇವಮ್ಮ, ಸವಿತಾ ತಿಪ್ಪೇರುದ್ರಪ್ಪ, ಜ್ಯೋತಿ ಪ್ರಸಾದ್ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
