ಸರ್ಕಾರಿ ಜಾಗೆಯಲ್ಲಿ ಮನೆ ಕಟ್ಟಿಕೊಂಡವರಿಗೆ 94 ಸಿ ಅಡಿ ಹಕ್ಕುಪತ್ರ ವಿತರಣೆ
ತರೀಕೆರೆ — ಬಹು ದಿನಗಳಿಂದ ಹಕ್ಕುಪತ್ರಗಳಿಲ್ಲದೆ ಇರುವವರು ಇಂದಿನಿಂದ ನೆಮ್ಮದಿಯ ಜೀವನ ಮಾಡಬಹುದು ಎಂದು ಇಂದು ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ತರೀಕೆರೆ. ಹಾಗೂ ತಾಲೂಕು ಪಂಚಾಯಿತಿ ಏರ್ಪಡಿಸಿದ್ದ ಹಕ್ಕುಪತ್ರ ವಿತರಣಾ ಸಮಾರಂಭವನ್ನು ಉದ್ಘಾಟನೆ ಮಾಡಿದ ಶಾಸಕ ಡಿಎಸ್ ಸುರೇಶ್ ರವರು ಹೇಳಿದರು.

ತರೀಕೆರೆ ತಾಲೂಕು ಲಕ್ಕವಳ್ಳಿ ಹೋಬಳಿ ವಡ್ಡರದಿಬ್ಬ ಮೂಲ ಗ್ರಾಮದಿಂದ ಇಂದಿರಾ ನಗರದ ಉಪ ಗ್ರಾಮದ ನಿವಾಸಿಗಳಿಗೆ 184 ಮನೆ ನಿವೇಶನ ಹಕ್ಕು ಪತ್ರ ವಿತರಿಸಿದರು.

ಅಜ್ಜಂಪುರ ತಾಲೂಕು ಹೊಸ ಕಂದಾಯ ಗ್ರಾಮ ರಚನೆ ಮಾಡಲಾಯಿತು. ತ್ಯಾಗದಕಟ್ಟೆ ಮೂಲ ಗ್ರಾಮದಿಂದ ಗಾಂಧಿನಗರ ಉಪಾ ಗ್ರಾಮದ ನಿವಾಸಿಗಳಾದ 24 ಜನರಿಗೆ 94 ಡಿ ಅಡಿ ಹಾಗೂ ದೊಡ್ಡಬೋಕಿಕೆರೆ ಗ್ರಾಮದ 8 ಜನರಿಗೆ 94 ಸಿ ಅಡಿಯಲ್ಲಿ ಮನೆ ನಿವೇಶನ ಹಕ್ಕುಪತ್ರ ವಿತರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತರೀಕೆರೆ ತಹಸಿಲ್ದಾರ್ ಶ್ರೀಮತಿ ಪೂರ್ಣಿಮಾ ಸಿ ಎಸ್ ರವರು ಮಾತನಾಡಿ ಸಂವಿಧಾನದಂತೆ ಕೆಎಸ್ಆರ್ ಕಾಯ್ದೆ ಅನ್ವಯ ಸರ್ಕಾರಿ ಜಾಗದಲ್ಲಿ ಯಾರೇ ಮನೆ ಕಟ್ಟಿಕೊಂಡು ವಾಸವಿದ್ದಾರೋ ಅವರಿಗೆ ಮನೆ ನಿವೇಶನದ ಹಕ್ಕು ಪತ್ರ ಕೊಡಲು ಸರ್ಕಾರ ಮಾರ್ಗದರ್ಶನ ಮಾಡಿದೆ,ಅದರಂತೆ 94c ಅಡಿಯಲ್ಲಿ ಹಕ್ಕುಪತ್ರಗಳನ್ನು ವಿತರಿಸುತಿದ್ದೇವೆ ಎಂದು ಹೇಳಿದರು. ಅಜ್ಜಂಪುರ ತಹಶೀಲ್ದಾರ್ ಸುಮಾ ಜೋಷಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗೀತಾ ಶಂಕರ್, ತಹಸಿಲ್ದಾರ್ ಗ್ರೇಟ್ 2 ಗೋವಿಂದಪ್ಪ, ಮುಡುಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವನಿತಾ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್ ತರೀಕೆರೆ