ಹೃದಯದಿಂದ ಮೊಳಗಲಿ ವಂದೇ ಮಾತರಂ…
ಜನವರಿ (25/01/2024) :

ಭಾರತೀಯರ ಹೃದಯದಲಿ ಪ್ರಜಾಪ್ರಭುತ್ವದ ಸಿರಿ ಕಿರೀಟವಾಗಿದೆ ಹಿಮಾಲಯದ ಮಂಜು ಗಿರಿತಾರತಮ್ಯವಿಲ್ಲದೆ ಎಲ್ಲರೊಳೊಬ್ಬರಾಗಿ ಬೆರಿ ಇಂದು ದೇಶದೆಲ್ಲೆಡೆ ತಿರಂಗ ಹಾರಿಸಿರಿ
ಸ್ಮರಿಸಬೇಕಾಗಿದೆ ಎಂದೆಂದೂ ಸಂವಿಧಾನ ಶಿಲ್ಪಿಯನು ಪಾಲಿಸಿ ಗೌರವಿಸಿ ಅಂಬೇಡ್ಕರ್ ಅವರ ಸಂವಿಧಾನವನು ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ತ್ರಿವರ್ಣ ತಿರಂಗವನುಹಾರಿಸಿ ಪ್ರೀತಿಸಿ ಪೂಜಿಸಿ ಎತ್ತರದ ದೇಶದ ಪ್ರತೀಕವನು
ಕಣ್ಣು ಕನಸು ಕಾಣುತಿದೆ ವಿಜೃಂಭಣೆಯ ರಾಷ್ಟ್ರ ಹಬ್ಬಕ್ಕೆ ಜೈ ಹಿಂದ್ ಮೊಳಗಲಿ ಕೇಳುವ ಹಾಗೆ ಆಕಾಶಕ್ಕೆ ಗಣರಾಜ್ಯ ದಿನ ಮೀಸಲಿರದಿರಲಿ ಕೇವಲ ಕ್ಷಣಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಸ್ಮರಿಸಬೇಡಿ ಗೊಳ್ಳು ಭಾಷಣಕ್ಕೆ
ಸಿಗಲಿ ಸ್ವಾತಂತ್ರ್ಯ ರೈತ ಬೆಳೆದ ಬೆಳೆಗೆಸಿಗಲಿ ಸ್ವಾತಂತ್ರ ವರದಕ್ಷಿಣೆ ಕೊಡುವ ಹೆತ್ತವರಿಗೆಸಿಗಲಿ ಸ್ವಾತಂತ್ರ್ಯ ಭ್ರಷ್ಟಾಚಾರಕ್ಕೆ ಒಳಗಾಗುವವರೆಗೆಸಿಗಲಿ ಸ್ವಾತಂತ್ರ್ಯ ಒಂಟಿಯಾಗಿ ತಿರುಗುವ ಹೆಣ್ಣು ಮಕ್ಕಳಿಗೆ
ಶ್ರೇಷ್ಠ ಪುಣ್ಯ ಭೂಮಿ ಇದು ಭಾರತವುಪಡೆಯಿತು 1950 ಜನೆವರಿ 26 ಗಣರಾಜ್ಯವುಹೊಂದಿದೆ ಅತಿ ದೊಡ್ಡ ಲಿಖಿತ ಸಂವಿಧಾನವುಸಲ್ಲಿಸೋಣ ಭಾರತ ಮಾತೆಗೆ ನಿತ್ಯ ನಮಸ್ಕಾರವು
ಭಾರತದ ವೈಭವ ಕೇಸರಿ ಬಿಳಿ ಹಸಿರು ತಿರಂಗದಲಿನಿತ್ಯ ವಂದೇ ಮಾತರಂ ಹೃದಯದಿಂದ ಮೊಳಗಲಿ ಪ್ರತಿಯೊಬ್ಬರೂ ಕೈಜೋಡಿಸಿ ಭಾರತ ವಿಶ್ವಮಾನ್ಯ ಮಾಡುವಲಿಇಡೀ ವಿಶ್ವದಲ್ಲಿಯೇ ಭಾರತ ಶ್ರೇಷ್ಠ ಗುರುವಾಗಲಿ
ಶ್ರೀ ಮುತ್ತು.ಯ.ವಡ್ಡರ (ಶಿಕ್ಷಕರು) ಬಾಗಲಕೋಟ Mob: 9845568484