ತಂದೆಯಿಂದಲೇ ಪೈಶಾಚಿಕ ಕೃತ್ಯ ; ಸ್ವತಃ ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾದ 13 ವರ್ಷದ ಬಾಲಕಿ…..!
ಸ್ವತಃ ತಂದೆಯೇ 13 ವರ್ಷದ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿದ್ದು ಬೆಳಕಿಗೆ ಬಂದಿದೆ.
ಕಲಬುರಗಿ( ಫೆ.1):
13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ತಂದೆಯಿಂದಲೇ ಅತ್ಯಾಚಾರ ನಡೆದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಬಾಲಕಿ 2 ತಿಂಗಳ ಗರ್ಭಿಣಿಯಾದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಮನೆಯಲ್ಲಿ ಹೆಂಡತಿ ಇಲ್ಲದ ಸಮಯ ನೋಡಿಕೊಂಡು ಸ್ವತಃ ತಂದೆಯೇ 13 ವರ್ಷದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇದಾದ ಕೆಲ ದಿನಗಳ ಬಳಿಕ ಬಾಲಕಿಗೆ ವಾಂತಿಯಾಗಿ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಇದರಿಂದ ಚಿಂತೆಗೀಡಾದ ಕುಟುಂಬಸ್ಥರು ನಿನ್ನೆ ಆಸ್ಪತ್ರೆಯಲ್ಲಿ ಬಾಲಕಿ ತಪಾಸಣೆ ಮಾಡಿಸಿದ ಈ ವೇಳೆ ಸತ್ಯ ತಿಳಿದುಬಂದಿದೆ. ಬಳಿಕ ತಂದೆಯಿಂದಲೇ ಬಾಲಕಿ ಅತ್ಯಾಚಾರಕ್ಕೊಳಗಾಗಿದ್ದ ವಿಷಯ ಹೇಳಿದ್ದಾಳೆ.
- JOIN OUR FACEBOOK COMMUNITY
- JOIN OUR INSTGRAM COMMUNITY
- JOIN OUR WHATSAPP COMMUNITY
- JOIN OUR TELEGRAM COMMUNITY
ಘಟನೆ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಾಲಕಿಯ ತಂದೆ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.