ವ್ಯವಸಾಯ ಉತ್ಪನ್ನ ಸೇವಾ ಸಹಕಾರ ಮಾರಾಟ ಸಂಘದ ನೂತನ ಅಧ್ಯಕ್ಷರನ್ನಾಗಿ ಎನ್ ಎ ತಿಮ್ಮೇಶ್ ಬಾಬುರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು…..!
ತರೀಕೆರೆ (ಫೆಬ್ರವರಿ.15). :
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ವ್ಯವಸಾಯ ಉತ್ಪನ್ನ ಸೇವಾ ಸಹಕಾರ ಮಾರಾಟ ಸಂಘ ನಿಯಮಿತ. ಅಧ್ಯಕರ ಆಯ್ಕೆ ಕಾರ್ಯಕ್ರಮದ ಅಂಗವಾಗಿ, ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರನ್ನಾಗಿ N.A ತಿಮ್ಮೇಶ್ ಬಾಬು ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಹಾಗೂ A.M ರವಿ ರವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರು ಉಪಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಸಂಘದ ನೂತನ ಅಧ್ಯಕ್ಷರಾದ N.A ತಿಮ್ಮೆಶ್ ಬಾಬುರವರು – ಅವಿರೋಧವಾಗಿ ಆಯ್ಕೆ ಮಾಡುವುದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು ಅಲ್ಲದೆ ಯವುದೇ ಸಂಸ್ಥೆ ಅಥವಾ ಸಹಕಾರ ಸಂಸ್ಥೆ ಬೆಳೆಯಬೇಕಾದರೆ , ಸಹಕಾರ ಚಳುವಳಿಗಳು ಗಟ್ಟಿಯಾಗಬೇಕಾದರೆ ಅಲ್ಲಿ ವ್ಯವಹಾರಿಕವಾಗಿ ನಡೆದುಕೊಳ್ಳಬೇಕು ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು .
ಹಾಗೇ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ K.R ಆನಂದಪ್ಪ ರವರು ಮಾತನಾಡಿದರು .
ಈ ಸಮಾರಂಭದಲ್ಲಿ ನಿರ್ದೇಶಕರಾದ S.B ಆನಂದಪ್ಪ, ವಸಂತಕುಮಾರ್, N.M ದಯಾನಂದ, M.ನರೇಂದ್ರ, K.R ಜಯಣ್ಣ, D.R ಸತೀಶ್ ಚಂದ್ರ, K.ಮಂಜುನಾಥ, H.T ಪ್ರೇಮಾ, ಪದ್ಮ, ಸುಧಾಕರ್, ಶಿವಯೋಗಿ, ಹಾಗೂ ಮಾಜಿ ಅಧ್ಯಕ್ಷರಾದ ಲವಕುಮಾರ್, ರಾಜಶೇಖರ್, ಸಹಕಾರಿ ಮುಖಂಡರಾದ ಗಿರೀಶ್ ಚವಾಣ್, ಬೇಲೇನಹಳ್ಳಿ ಸೋಮಶೇಖರ್, ಸುರೇಶ್, ಉಪಸ್ಥಿತರಿದ್ದರು. ಕಾರ್ಯದರ್ಶಿ ನಿತೀಶ್ ಸ್ವಾಗತಿಸಿ ನಿರೂಪಿಸಿದರು.