ಮೇ 14 ರಂದು ಸ್ವಯಂ ಪ್ರೇರಣೆಯಿಂದ ಸಾಮೂಹಿಕ ಮತಾಂತರ ಕಾರ್ಯಕ್ರಮ …..
ವಿಭೂತಿ ಹಳ್ಳಿ (ಮೇ.5) :
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ವಿಭೂತಿ ಹಳ್ಳಿ ಗ್ರಾಮದ ಕೆಲವು ಕುಟುಂಬಗಳು ಡಾ . ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವದಡಿ ನಾನು ಹಿಂದೂ ಆಗಿ ಹುಟ್ಟಿದ್ದೇನೆ ನಿಜ, ಆದರೆ ನಾನು ಹಿಂದೂ ಆಗಿ ಸಾಯಲಾರೆ ಅಂತ ಪ್ರತಿಜ್ಞೆಯನ್ನು ಮಾಡಿ ಬೋಧಿ ಸತ್ವ ಪರಮ ಪೂಜ್ಯ. ಡಾ|| ಬಾಬಾಸಾಹೇಬ ಅಂಬೇಡ್ಕರ ಅವರು 1956 ನೇ ವರ್ಷದಲ್ಲಿ ಬೌದ್ಧ ಧಮ್ಮ ದೀಕ್ಷೆಯನ್ನು ಪಡೆದುಕೊಂಡರು .

ನೀವು ಕೂಡ ಬೌದ್ಧ ಧಮ್ಮ ದೀಕ್ಷೆಯನ್ನು ಪಡೆದು ಬೌದ್ಧರಾಗಬೇಕು ಅಂತ ಬಾಬಾಸಾಹೇಬರ ಕನಸಿನಂತೆ ವಿಭೂತಿಹಳ್ಳಿಯಲ್ಲಿ ಕೆಲವು ಕುಟುಂಬಗಳು ರವಿವಾರ ದಿನಾಂಕ : 14-05-2023 ರಂದು ಬೆಳಿಗ್ಗೆ 11: 00 ಘಂಟೆಗೆ ಹಿಂದೂ ಧರ್ಮವನ್ನು ತೇಜಿಸಿ ಬೌದ್ಧ ಧಮ್ಮವನ್ನು ಸ್ವೀಕರಿಸಲಿದ್ದಾರೆ ಈ ದೀಕ್ಷೆ ಕಾರ್ಯಕ್ರಮವನ್ನು ನೆರೆವೇರಿಸಲು ಪೂಜ್ಯ. ಭದಂತ ನಾಗಘೋಷ ಮಾಹಾಥೆರೋ ಪುಣೆ ಮತ್ತು ಪೂಜ್ಯ. ಭದಂತ ಕಶಪ್ಪ ಮಾಹಾಥೆರೋ ಪುಣೆ ಇವರಿಂದ ದೀಕ್ಷೆಯನ್ನು ಪಡೆದುಕೊಳ್ಳಲಾಗುವದು ಆದ ಕಾರಣ ತಾವೆಲ್ಲರೂ ಸಹ ಕುಟುಂಬ – ಸಹಪರಿವಾರ ದೊಂದಿಗೆ ಆಗಮಿಸಿ ನಮ್ಮ ಹೊಸ ಜೀವನಕ್ಕೆ ಆಶೀರ್ವಾದ ಮಾಡಬೇಕೆಂದು ದಲಿತ ಮುಖಂಡರಾದ ಸಂತೋಷ ಸಿಂಗೆ ಅವರು ಸಾವ೯ಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.ಮೊ.9901559257.
ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್.ವಿಜಯಪುರ