ಮಹಿಳೆಯರು ಯುವಕರು ಕಾಂಗ್ರೆಸ್ ಪರ ಇದ್ದಾರೆ – ಪ್ರತಾಪಾನ್
ತರೀಕೆರೆ (ಮೇ.5) :
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ದೇಶದ ಐಕ್ಯತೆ ಮತ್ತು ಸಂವಿಧಾನ ಉಳಿವಿಗೆ ಕಾಂಗ್ರೆಸ್ ಆಡಳಿತ ಬೇಕಾಗಿದೆ. ಎಂದು ಕೇರಳ ರಾಜ್ಯದ ಲೋಕಸಭಾ ಸದಸ್ಯರಾದ ಹಾಗೂ ಉಡುಪಿ ಚಿಕ್ಕಮಗಳೂರು ಕಾಂಗ್ರೆಸ್ ಉಸ್ತುವಾರಿಯಾದ ಪ್ರತಾಪ್ ಎನ್ ರವರು ಪಟ್ಟಣದ ಹೋಟೆಲ್ ಅರಮನೆ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿಯ ನರೇಂದ್ರ ಮೋದಿ ಆಡಳಿತ ದಿಂದ ಭ್ರಷ್ಟಾಚಾರ ವಿಮುಕ್ತಿಯಾಗಿಲ್ಲ ಶೇಕಡ 70 % ಭ್ರಷ್ಟಾಚಾರದಲ್ಲಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಲಿದೆ. ಈ ಬಾರಿ ಮಹಿಳೆಯರು ಯುವಕರು ಕಾಂಗ್ರೆಸ್ಸನ್ನು ಬೆಂಬಲಿಸಿದ್ದಾರೆ. ಎಂದು ಹೇಳಿದರು. ಕೆಪಿಸಿಸಿ ಸದಸ್ಯರಾದ ಎಂಎ ಗಪೂರ್ ರವರು ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ದಲಿತರ ಹತ್ಯೆಯಾಗುತ್ತಿದೆ.
ದೇಶದಲ್ಲಿ ಸೌಹಾರ್ದತೆ ಮತ್ತು ಶಾಂತಿಗಾಗಿ ಕಾಂಗ್ರೆಸ್ ಆಡಳಿತ ಜನ ಬಯಸಿದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಜನರು ಅತಿ ಹೆಚ್ಚು ಭಾಗವಹಿಸಿದ್ದರು. ಜಿಲ್ಲೆಯ 5 ಜನ ವಿಧಾನಸಭಾ ಅಭ್ಯರ್ಥಿಗಳು ಗೆಲ್ಲುವ ಅರ್ಹತೆ ಹೊಂದಿದ್ದಾರೆ ಎಂದು ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಅಂಶುಮಂತ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ ಕಾಂಗ್ರೆಸ್ ಸರ್ಕಾರ ಬಿಪಿಎಲ್ ಕಾರ್ಡುದಾರರಿಗೆ ತಲಾ 10 ಕೆಜಿ ಅಕ್ಕಿ , ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಮಾಸಿಕ 1500 ರೂ ಹಾಗೂ ಡಿಪ್ಲೋಮಾ ಪದವೀಧರ ಯುವಕರಿಗೆ 2000 ರೂ ಹಾಗೂ ಮಹಿಳೆಯರಿಗೆ ಮಾಸಿಕ 2,000 ರೂ ಮತ್ತು ಉಚಿತ ಬಸ್ ಪ್ರಯಾಣ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಬಿಸಿಯೂಟ ಕಾರ್ಯಕರ್ತರಿಗೆ ವೇತನ ಹೆಚ್ಚಳ ಮಾಡುವುದಾಗಿ ಗ್ಯಾರಂಟಿ ಕಾರ್ಡ್ ನೀಡಿದೆ. ತರೀಕೆರೆ ವಿಧಾನಸಭಾ ಅಭ್ಯರ್ಥಿ ಜಿ ಎಚ್ ಶ್ರೀನಿವಾಸ್ ಶಾಸಕರಾಗಿ ಹಿಂದೆ ಮಾಡಿದ್ದ ಅಭಿವೃದ್ಧಿ ಕೆಲಸಗಳಿಂದ ಸ್ಪಷ್ಟ ಬಹುಮತದಿಂದ ಆಯ್ಕೆಯಾಗುತ್ತಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಯುವ ಮಹಿಳಾ ಕಾರ್ಯದರ್ಶಿ ಪುಷ್ಪಲತಾ, ಕೆಪಿಸಿಸಿ ಸದಸ್ಯರಾದ ವಿಶ್ವನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಯು ಫಾರೂಕ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆನಂದ ಕುಮಾರ್, ಮಾಜಿ ಪುರಸಭಾ ಅಧ್ಯಕ್ಷರಾದ ಹೇಮಲತಾ, ಪ್ರಚಾರ ಸಮಿತಿಯ ಅಧ್ಯಕ್ಷರಾದ ಪರಶುರಾಮ್, ಮಾಜಿ ಪುರಸಭಾ ಸದಸ್ಯರಾದ ಕೃಷ್ಣ, ಅನ್ನಪೂರ್ಣ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಘಟಕದ ಅಧ್ಯಕ್ಷರಾದ ಗೌರೀಶ್, ಲಕ್ಕವಳ್ಳಿ ಹೋಬಳಿ ಅಧ್ಯಕ್ಷರಾದ ಮಂಜುನಾಥ್ ಲಾಡ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಅನ್ಬು, ಮಾಜಿ ಪುರಸಭಾ ಅಧ್ಯಕ್ಷರಾದ ಪರ್ವೀನ್ ತಾಜ್, ಮಹಿಳಾ ಘಟಕದ ತಾಲೂಕ ಅಧ್ಯಕ್ಷರಾದ ಭಾಗ್ಯಲಕ್ಷ್ಮಿ ಮುಂತಾದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ