ಗೌರಸಮುದ್ರ ಮಾರಮ್ಮ ಜಾತ್ರೆಗೆ ಆಗಮಿಸಿದ – ಶಾಸಕರು.
ಮೊಳಕಾಲ್ಮುರು ಸ.03

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್.ವೈ ಗೋಪಾಲಕೃಷ್ಣ ಶಾಸಕರು ಗೋ ಸಂದ್ರ ಮಾರಮ್ಮ ಜಾತ್ರೆಯ ಸಮಾವೇಶದಲ್ಲಿ ಭಾಗವಹಿಸಿ ಲಕ್ಷಾನು ಗಟ್ಟಲೆ ಬಂದಿರತಕ್ಕಂತ ಭಕ್ತಾದಿಗಳಿಗೆ ನೀರಿನ ವ್ಯವಸ್ಥೆ ಆರೋಗ್ಯದ ವ್ಯವಸ್ಥೆ ಮತ್ತು ಶೌಚಾಲಯ ಸ್ನಾನದ ಗೃಹಗಳು ವ್ಯವಸ್ಥೆ ಸ್ವಚ್ಛತೆ ವ್ಯವಸ್ಥೆ ಪ್ರಸಾದ ವ್ಯವಸ್ಥೆ ಮತ್ತು ಪೊಲೀಸ್ ಬಂದೋಬಸ್ತ್ ಕಾನೂನು ಸುವ್ಯವಸ್ಥೆ ಭಕ್ತಾದಿಗಳಿಗೆ ಗದ್ದಲ ಗಲಾಟೆಗಳಿಗೆ ಇಸ್ಪೀಟು ಬೇರೆ ಕೆಟ್ಟ ಚಟಗಳಿಗೆ ಅವಕಾಶ ಕೊಡದಂತೆ ಪೊಲೀಸ್ ಕಾನೂನು ಸುವ್ಯವಸ್ಥೆ ಕಾಪಾಡಿದ ಶಾಸಕರು ಮಧ್ಯಾಹ್ನ ಮಾರಮ್ಮ ಎಂಬ ಜಾತ್ರೆ ಆಗುತ್ತಿದ್ದು ಈ ಮಾರಮ್ಮ ದೇವಿಯು ದೇವಸ್ಥಾನ ದಿಂದ 3 ಕಿ.ಮೀ ತುಂಬಲು ಎಂಬ ಒಂದು ಸ್ಥಳ ಇದೆ ಇದು ಆಂಧ್ರ ಗಡಿ ಭಾಗಕ್ಕೂ ಸೇರಿದೆ ಆಂಧ್ರದ ಭಕ್ತಾದಿಗಳು ಮತ್ತು ಕರ್ನಾಟಕ ರಾಜ್ಯದ ನಾನಾ ಜಿಲ್ಲೆಗಳಿಂದ ಭಕ್ತಾದಿಗಳು ಈ ತುಂಬಲಿನಲ್ಲಿ ಬಂದು ದಿನಾಂಕ 3/9/2024 ರಂದು ಶ್ರಾವಣ ಮಾಸದ ಮುಗಿದ ಮರು ದಿನವೇ ಮಂಗಳವಾರ ದಂದು ತುಂಬಲ ಮಧ್ಯಾಹ್ನ ಮಾರಮ್ಮ ಜಾತ್ರೆ ನಡೆಯುತ್ತಿದೆ ಮತ್ತು ನಾಲ್ಕನೇ ಸೋಮವಾರ ನಾಗ ದೇವತೆಗೆ ಹಾಲು ಏರೆದು ಮತ್ತೆ ಮುಂದಿನ ಮಂಗಳವಾರ ಈ ಮಾರಮ್ಮ ಜಾತ್ರೆಯ ಗೌರಸಮುದ್ರದ ಗ್ರಾಮದಲ್ಲಿ ಸಾರು ಹಾಕಿ 9 ದಿನ ಈ ಗ್ರಾಮದ ಮನೆಗಳಲ್ಲಿ ಯಾರು ಹಂಚು ಇಡದೆ ಎಣ್ಣೆ ಸುಡ್ರೂ ಮಾಡದೆ ಗ್ರಾಮದ ಸುತ್ತ ಸ್ವರ್ಗ ಚೆಲ್ಲಿ ಕಟ್ಟು ನಿಟ್ಟಿನ ಮಾರಮ್ಮ ದೇವಿಯ ಜಾತ್ರೆ ಮಾಡುತ್ತಾರೆ ಈ ಗ್ರಾಮದ ಜನಗಳು ತುಂಬಲಿನಲ್ಲಿ ಮಧ್ಯಾಹ್ನ ಹನ್ನೆರಡು ಗಂಟೆಗೆ ಮಾರಮ್ಮ ದೇವಿಯು ತುಂಬಲಿಗೆ ಬರುತ್ತಾಳೆ ಅಲ್ಲಿ ಬಂದ ನಂತರ ಭಕ್ತಾದಿಗಳಲ್ಲ ದೇವಿಗೆ ಹಣ್ಣು ಕಾಯಿ ಸಮರ್ಪಣೆ ಮಾಡಿ ಭಕ್ತಾದಿಗಳ ಮನಸ್ಸಿನಲ್ಲಿ ಅಂದು ಕೊಂಡಂತೆ ಕೆಲಸಗಳು ಕಾರ್ಯನಿರ್ವಹಿಸಿ ಕೊಡು ಎಂದು ಮಾರಮ್ಮ ದೇವಿಗೆ ಕೈಮುಗಿದು ಬೇಡುತ್ತಾರೆ ಭಕ್ತಾದಿಗಳು ಮತ್ತು ಈ ದೇವಿಗೆ ಮುಡುಪು ಕಟ್ಟಿ ಕೊಂಡಿರುತ್ತಾರೆ ಭಕ್ತಾದಿಗಳು ಬಾಯಿ ಬೀಗ ಬೇವಿನ ಸೀರೆ ಈ ದೇವಿಯ ಕಟ್ಟೆ ಇರುತ್ತದೆ ತುಂಬಲಿನಲ್ಲಿ ಕಟ್ಟೆ ಸುತ್ತ ಮೂರು ಸಾರಿ ತಿರುಗಿ ಇವರ ಸಂಕಷ್ಟಗಳು ಕಷ್ಟಗಳನ್ನು ಪಾರು ಮಾಡು ಎಂದು ಭಕ್ತಾದಿಗಳು ಬೇಡಿ ಕೊಳ್ಳುತ್ತಾರೆ ಮತ್ತು ಒಂದು ಕಿಲೋ ಮೀಟರ್ ದೂರದ ಬೇರೆ ಸ್ಥಳದಲ್ಲಿ ತೋಟಗಳ ಹತ್ತಿರ ಬೇಟೆ ಹರಿಕೆ ಮಾಡುತ್ತಾರೆ ಭಕ್ತಾದಿಗಳು ಮಾರಮ್ಮ ದೇವಿಗೆ ಬೇಟೆ ಸಮರ್ಪಣೆ ಮಾಡಿ ಊಟ ಮಾಡಿ ಭಕ್ತಾದಿಗಳು ಬರುತ್ತಾರೆ ಮತ್ತು ಸಿಡಿ ಆಡುತ್ತಾರೆ ಹಾಗೂ ಗಾವು ಜಿಗಿಯುತ್ತಾರೆ ಈ ಮಾರಮ್ಮ ದೇವಿಯ ಜಾತ್ರೆ ನಡೆದಾಗ ಲಿಂದಲೂ ಶ್ರಾವಣ ಮಾಸ ಮುಗಿದ ಒಂದು ತಿಂಗಳ ಜಾತ್ರೆ ಎಲ್ಲಾ ಜಿಲ್ಲೆಗಳಲ್ಲೂ ಮಾಡುತ್ತಾರೆ ಮತ್ತು ನಾಲ್ಕನೇ ವಾರ ತುಂಬಲಿನಲ್ಲಿ ಮರಿ ಜಾತ್ರೆ ಮಾಡುತ್ತಾರೆ ಎಂದು ಇಂದಿನಿಂದಲೂ ಈ ಸಂಪ್ರದಾಯ ನಡೆದು ಕೊಂಡು ಬಂದಿರುತ್ತದೆ ಮಾರಮ್ಮ ದೇವಿಗೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್ ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು