ಮಾರ್ಚ್ 5. ರಂದು ಹುಚ್ಚ ಲಿಂಗೇಶ್ವರ – ಜಾತ್ರಾ ಮಹೋತ್ಸವ.

ಉಡಚಣ ಮಾ.02

ಅಫಜಲಪುರ ತಾಲುಕಿನ ಭೀಮಾ ತೀರದಲ್ಲಿರುವ ಸುಕ್ಷೇತ್ರಉಡಚಣ ಗ್ರಾಮದ ಗ್ರಾಮ ದೇವತೆ, ಮಹಾ ಮಹಿಮ, ಪವಾಡ ಪುರುಷ, ಬೇಡಿದವರಿಗೆ ಬೇಡಿದನ್ನೇ ನೀಡಿರುವ ಕಲಿಯುಗದ ಕಾಮದೇನು ಕಲ್ಪತರು ಶ್ರೀ ಹುಚ್ಚ ಲಿಂಗೇಶ್ವರ ಜಾತ್ರಾ ಮಹೋತ್ಸವ ಫೆಬ್ರುವರಿ 28 ರಿಂದ ಮಾರ್ಚ್ 5. ರ ವರೆಗೆ ಅಪಾರ ಸಂಖ್ಯೆಯ ಭಕ್ತ ಸಮೂಹದ ಮಧ್ಯೆ ಶ್ರದ್ಧಾ ಭಕ್ತಿಯಿಂದ ಜರುಗಲಿದೆ ಎಂದು ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಟ್ರಸ್ಟ್ ಕಮಿಟಿಯವರು ವಿನಂತಿಸಿದ್ದಾರೆ. ದಿನಾಂಕ 28 ರಂದು ಶುಕ್ರವಾರ ಶ್ರೀ ಹುಚ್ಚ ಲಿಂಗೇಶ್ವರ ಪಲ್ಲಕ್ಕಿ ಉತ್ಸವ ಗ್ರಾಮದಲ್ಲಿ ಜರುಗಲಿದೆ, ಮಾರ್ಚ್ 4. ರಂದು ಮಂಗಳವಾರ ರಾತ್ರಿ 10.30 ಗಂಟೆಗೆ ಬನ್ನಿ ಕೊರಡು ರಾಶಿಗೆ ಅಗ್ನಿಸ್ಪರ್ಶ, ಮಾರ್ಚ್ 5. ರಂದು ಬೆಳಿಗ್ಗೆ 10:00 ಗಂಟೆಗೆ ಶ್ರೀ ಹುಚ್ಚಲಿಂಗೇಶ್ವರ ಪಲ್ಲಕ್ಕಿ ಯೊಂದಿಗೆ ಸಕಲ ವಾದ್ಯ ವೈಭವ ಗಳೊಂದಿಗೆ ಭೀಮಾ ನದಿಗೆ ತೆರಳಿ ಗಂಗೆ ಸಿತಾಳ ಪೂಜೆ ನೆರವೇರಿಸಿ ಭವ್ಯ ಮೆರವಣಿಗೆ ಯೊಂದಿಗೆ ಭಂಡಾರಿಯವರ ಮನೆಗೆ ಆಗಮಿಸುವುದು, ನಂತರ ಭಂಡಾರಿ ಅವರಿಗೆ ತುಂಬಾ ಆಯೇರಿ ನಂತರ ಮಧ್ಯಾಹ್ನ 12:30 ಗಂಟೆಗೆ ಭಂಡಾರಿ ದಂಪತಿಗಳು ಅಗ್ನಿ ಪ್ರವೇಶ ಮಾಡುವರು, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಲಿದೆ, ನಂತರ ದೇವರಿಗೆ ನೈವೇದ್ಯ ನೀಡಿ, ತಮ್ಮ ಹರಕೆ ತೀರಿಸುವರು, ಪ್ರತಿ ವರ್ಷದಂತೆ ದನಗಳ ಜಾತ್ರೆ ಜರುಗಲಿದೆ, ಈ ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಗುವುದು, ಶ್ರೀ ಬಸವೇಶ್ವರ ದೇವಸ್ಥಾನದಲ್ಲು ಕೂಡ ಬಂದಂತ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುದು, ನಂತರ ರಾತ್ರಿ 10.30 ಗಂಟೆಗೆ ಶ್ರೀ ಹುಚ್ಚ ಲಿಂಗೇಶ್ವರ ಕೃಪಾಪೋಷಿತ ನಾಟಕ ಸಂಘದ ವತಿಯಿಂದ ಪವಾಡ ಪುರುಷ ಉಡಚಾಣ ಶ್ರೀ ಹುಚ್ಚ ಲಿಂಗೇಶ್ವರ ಮಹಾತ್ಮ ಎಂಬ ಭಕ್ತಿ ಪ್ರಧಾನ ನಾಟಕವನ್ನು ಅಭಿನಯಿಸುವರು. ಜಾತ್ರೆಗೆ ಬರುವ ಭಕ್ತಾದಿಗಳ ಸಲುವಾಗಿ ಅಪಜಲಪುರ, ಇಂಡಿ, ಅಕ್ಕಲಕೋಟ ಬಸ್ ವ್ಯವಸ್ಥೆ ಮಾಡಲಾಗಿದೆ. ಭೀಮಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿರುವುದ ರಿಂದ ಭಕ್ತಾದಿಗಳು ಸ್ನಾನ ಮಾಡುವಾಗ ಎಚ್ಚರಿಕೆ ಯಿಂದ ಇರಬೇಕು, ಬೇಸಿಗೆ ಬಿಸಿಲು ಆರಂಭವಾಗಿ ರುವುದರಿಂದ ಮಹಿಳೆಯರು ಮಕ್ಕಳು ವೃದ್ಧರು ಜಾಗೃತಿಯಿಂದ ಇರಬೇಕು ಎಂದು ಶ್ರೀ ಹುಚ್ಚ ಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಸಿದ್ದಾರ್ಥ್ ಮೈಂದರಗಿ, ಉಪಾಧ್ಯಕ್ಷ ಗಡದೆಪ್ಪ ಕಡ್ಲಾಜಿ, ಕಾರ್ಯದರ್ಶಿ ಖಾಜಪ್ಪ ನಾಲ್ಕ ಮನ್, ಖಜಾಂಚಿ ವಿಠಲ್ ಕಡ್ಲಾಜಿ ಭಕ್ತ ವೃಂದ ದವರಲ್ಲಿ ವಿನಂತಿಸಿದ್ದಾರೆ ಎಂದು ವರದಿಯಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button