ಸಿಂದಗಿ ಆಲಮೇಲ ಅತಿಥಿ ಶಿಕ್ಷಕರ ಸಂಘದಿಂದ ಶಾಸಕ ಮನಗೂಳಿ ಅವರಿಗೆ ಮನವಿ.
ಸಿಂದಗಿ ಜೂನ್.2

ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘ (ರಿ), ಸಿಂದಗಿ ಘಟಕದ ವತಿಯಿಂದ ಅತಿಥಿ ಶಿಕ್ಷಕರ ಹಲವಾರು ಬೇಡಿಕೆಗಳನ್ನು ಇಡೇರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರದ ಗಮನಕ್ಕೆ ತರುವುವಂತೆ ವಿಧಾನ ಸಭಾ ಕಲಾಪದಲ್ಲಿ ಪ್ರಸ್ತಾಪಿಸುವಂತೆ ಸ್ಥಳೀಯ ಶಾಸಕರಾದ ಅಶೋಕ ಮನಗೂಳಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಅತಿಥಿ ಶಿಕ್ಷಕರ ಸಂಘದ ರಾಜ್ಯ ಸಂಚಾಲಕರಾದ ಎಸ್ ಆರ್ ಪಾಟೀಲ.ಜಿಲ್ಲಾ ಅಧ್ಯಕ್ಷರಾದ ದಾನೇಶ ಕಲಕೇರಿ, ತಾಲ್ಲೂಕು ಅಧ್ಯಕ್ಷರಾದ ಮಡಿವಾಳ ನಾಯ್ಕೋಡಿ, ಆಲಮೇಲ ತಾಲ್ಲೂಕು ಅಧ್ಯಕ್ಷರಾದ ಶರಣು ಬಿರಾದಾರ, ಅಜೇಯ ಯಲಗಟ್ಟಿ. ಸಿಂದಗಿ.ಆಲಮೇಲ. ದೇವರ ಹಿಪ್ಪರಗಿ ಸೇರಿದಂತೆ ಅತಿಥಿ ಶಿಕ್ಷಕರ ಸಂಘದ ಎಲ್ಲಾ ಪಧಾದಿಕಾರಿಗಳು ಶಿಕ್ಷಕರು ಶಿಕ್ಷಕಿಯರು ಪಾಲ್ಗೊಂಡಿದ್ದರು.