ಅರ್ಹರಿಗೆ ಭದ್ರತಾ ಯೋಜನೆ ತಲುಪಿಸಿ.
ಇಂಡಿ ಜೂನ್.2

ಸರಕಾರಗಳು ಬ್ಯಾಂಕುಗಳ ಮೂಲಕ ಜಾರಿಗೆ ತಂದಿರುವ ಜೀವನ ಭದ್ರತೆ ಕಾರ್ಯಕ್ರಮ ಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಬ್ಯಾಂಕ ಅಧಿಕಾರಿಗಳು ಕೆಲಸ ಮಾಡಬೇಕು. ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಅರ್ಹರಿಗೆ ತಿಳಿಸಬೇಕು ಎಂದು ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ ಇಂಢಿ ಶಾಖೆಯ ಮುಖ್ಯ ವ್ಯವಸ್ಥಾಪಕ ಬಿ.ಜಿ.ರಾಮಸ್ವಾಮಿ ಹೇಳಿದರು.ತಾಲೂಕಿನ ಚವಡಿಹಾಳ ಗ್ರಾ.ಪಂ ಸಭಾಭವನದಲ್ಲಿ ಎಸ್.ಬಿ.ಐ ಇಂಡಿ ಮತ್ತು ಗ್ರಾ.ಪಂ ಚವಡಿಹಾಳ ಸಹಯೋಗದಲ್ಲಿ ನಡೆದ ಸಾಮಾಜಿಕ ಭದ್ರತಾ ಯೋಜನೆ ದಾಖಲಾತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಬ್ಯಾಂಕಿನ ಕೃಷಿ ಅಭಿವೃದ್ಧಿ ಅಧಿಕಾರಿ ಪರಶುರಾಮ ತೆನೆಹಳ್ಳಿ ಮಾತನಾಡಿ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಅಡಿ ವರ್ಷಕ್ಕೆ ಕೇವಲ 436 ರೂ ದರದಲ್ಲಿ 2 ಲಕ್ಷದ ಜೀವವಿಮೆ, ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ವರ್ಷಕ್ಕೆ ಕೇವಲ 20 ರೂ ದರದಲ್ಲಿ 2 ಲಕ್ಷ ರೂ ಮೌಲ್ಯದ ಅಪಘಾತ ವಿಮಾ ಯೋಜನೆ ಅಡಿಯಲ್ಲಿ ಅತಿ ಹೆಚ್ಚು ನೊಂದಣಿ ಇಂಡಿ ಎಸ್.ಬಿ.ಐ ಗುರಿ ಹೊಂದಿದೆ ಎಂದರು.ಪಿಡಿಓ ಸಿ.ಜಿ.ಪಾರೆ, ಗ್ರಾ.ಪಂ ಉಪಾಧ್ಯಕ್ಷ ಕಾಮಣ್ಣ ದಶವಂತ ಮಾತನಾಡಿದರು.ರಮೇಶ ಬಿರಾದಾರ,ಪ್ರಕಾಶ ಹಲಸಂಗಿ,ಅಶೋಕ ದಶವಂತ, ಕಾರ್ಯದರ್ಶಿ ಚನಶೆಟ್ಟಿ ಮತ್ತಿತರಿದ್ದರು.