ಮೊಳಕಾಲ್ಮೂರು ನಾಗರಿಕರಿಗೆ ರಂಗಯ್ಯನದುರ್ಗ ಜಲಾಶಯದಿಂದ ಒಳ್ಳೆ ಕುಡಿಯುವ ನೀರು ಹರಿಸುವೆ ಎಂದ ಶಾಸಕರು.
ಮೊಳಕಾಲ್ಮೂರು ಜೂನ್.10

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಹಾನಗಲ್ ಗ್ರಾಮ ಪಂಚಾಯತಿ ಹಾನಗಲ್ ಗ್ರಾಮದಿಂದ ಐದು ಕಿಲೋ ಮೀಟರ್ ಇರುವ ರಂಗಯ್ಯನದುರ್ಗ ಜಲಾಶಯ ಈ ರಂಗಯ್ಯನದುರ್ಗ ಜಲಾಶಯವನ್ನು ಕಟ್ಟಿಸಿದಂತ ಶಾಸಕರು ಎಂದರೆ ಅದು ಎನ್. ವೈ. ಗೋಪಾಲಕೃಷ್ಣ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಶಾಸಕರಾಗಿದ್ದಾಗ ಈ ರಂಗಯ್ಯನದುರ್ಗ ಜಲಾಶಯವನ್ನು ಮೊಳಕಾಲ್ಮುರು ಪಟ್ಟಣದ ಜನಗಳಿಗೆ ಮತ್ತು ಸುತ್ತಮುತ್ತಲಿನ ಎಲ್ಲಾ ಗ್ರಾಮದ ರೈತರಿಗೆ ನೀರಿನ ಕೊರತೆ ಇರಬಾರದೆಂದು ಈ ರಂಗಯ್ಯನದುರ್ಗ ಜಲಾಶಯವನ್ನು ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ಕಟ್ಟಿಸಿದರು ಜಲಾಶಯದಿಂದ ಮೊಳಕಾಲ್ಮೂರು ಪಟ್ಟಣಕ್ಕೆ ನೀರು ಹರಿಸಬೇಕೆಂದು ಜನಗಳಿಗೆ ಕುಡಿಯಲಿಕ್ಕೆ ಮತ್ತು ಇನ್ನಿತರ ಕೆಲಸಗಳಿಗೆ ಬೇಕಾಗುತ್ತದೆ ಎಂದು ರಂಗನದುರ್ಗ ಜಲಾಶಯದಿಂದ ಸುಮಾರು ಹತ್ತು ಕಿಲೋ ಮೀಟರ್ ಪೈಪ್ ಲೈನ್ ಮುಖಾಂತರ ನೀರು ಹರಿಸುವ ಯೋಜನೆಯನ್ನು ಹಿಂದೆ ಯಡಿಯೂರಪ್ಪರ ಸರ್ಕಾರ ಇದ್ದಾಗ ಅನುದಾನ ಬಿಡುಗಡೆ ಮಾಡಿಸಿ ಮತ್ತು ಹಾನಗಲ್ ಹತ್ತಿರ ಅದೇ ನೀರು ಫಿಲ್ಟರ್ ಆಗಿ ನೀರು ಹರಿಸಲು ಜನಗಳಿಗೆ ಕುಡಿಯಲಿಕ್ಕೆ ಮೊಳಕಾಲ್ಮುರು ಪಟ್ಟಣದ ಎಲ್ಲಾ ನಾಗರಿಕರಿಗೆ ಅನುಕೂಲವಾಗುತ್ತದೆ ಎಂದು ಹಿಂದೆ ಮಾಡಿಸಿದ್ದು ಮತ್ತು ಮೊಳಕಾಲ್ಮೂರು ಪಟ್ಟಣ ಜನಗಳಿಗೆ ಆರು ವರ್ಷದ ಹಿಂದೆ ನೀರಿನ ಅಭಾವ ಬಂದಾಗ ಮೊಳಕಾಲ್ಮುರು ಪಟ್ಟಣದ ಜನಗಳು ಈ ಜಲಾಶಯದ ನೀರು ಕುಡಿದು ಬದುಕಿದ್ದಾರೆ.

ಆ ಟೈಮಲ್ಲಿ ಸಾವಿರ ಅಡಿವರೆಗೂ ಬೋರು ಹಾಕಿಸಿದರು ಎಲ್ಲಿ ನೀರು ಬರುತ್ತಿರಲಿಲ್ಲ ನೀರಿನ ದಾಹ ತೀರಿಸಿದಂತ ಪುಣ್ಯಾತ್ಮ ಎಂದರೆ ಅದು ಎನ್. ವೈ. ಗೋಪಾಲಕೃಷ್ಣ ಶಾಸಕರು ಮಾತ್ರ ಎಂದು ತಿಳಿದು ಬರುತ್ತದೆ ಈಗ ಅದೇ ನೀರನ್ನು ಮೊಳಕಾಲ್ಮೂರು ಪಟ್ಟಣದ ನಾಗರಿಕರಿಗೆ ಸರಿಯಾದ ರೀತಿಯಿಂದ ನೀರು ಹರಿಸಬೇಕೆಂದು ರಂಗಯ್ಯನದುರ್ಗ ಜಲಾಶಯ ಆ ಜಾಗಕ್ಕೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಎಲ್ಲೆಲ್ಲಿ ಪೈಪ್ ಲೈನ್ ಗಳು ಒಡೆದು ಹೋಗಿವೆ ಅವನ್ನೆಲ್ಲಾ ಸರಿ ಮಾಡಿಹೊಸ ಪಂಪು ಮೋಟಾರ್ ಗಳು ಹಾಕಿ ನೀರು ಹರಿಸಬೇಕೆಂದು ಎನ್. ವೈ. ಗೋಪಾಲಕೃಷ್ಣ ಶಾಸಕರು ತಿಳಿಸಿದರು. ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು