ಕೂಡ್ಲಿಗಿ ಪಟ್ಟಣದ 14ನೇ ವಾರ್ಡಿನ ಮಾಜಿ ದೇವದಾಸಿ ಮಹಿಳೆಯರನ್ನು ಸರ್ಕಾರದ ಸರ್ವೇ ಪಟ್ಟಿಯಲ್ಲಿ ಸೇರಿಸುವಂತೆ ಮನವಿ.
ಕೂಡ್ಲಿಗಿ ಆಗಷ್ಟ.11

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ 14ನೇ ವಾರ್ಡ್ ಡಾ. ಬಿಆರ್ ಅಂಬೇಡ್ಕರ್ ನಗರದ ಮಾಜಿ ದೇವದಾಸಿ ಮಹಿಳೆಯರು ಈ ಹಿಂದೆ 2007 ಮತ್ತು 8ನೇ ಸಾಲಿನ ಸಂದರ್ಭದಲ್ಲಿ ಸರ್ಕಾರವು ರಾಜ್ಯಾದ್ಯಂತ ಸರ್ವೇ ಸಮೀಕ್ಷೆಯನ್ನು ಮಾಡಲು ಆದೇಶಿಸಿದ್ದು ಆ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣದ 14ನೇ ವಾರ್ಡಿನ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿರುವ ಮಾಜಿ ದೇವದಾಸಿ ಮಹಿಳೆಯರುನ್ನು ಮಾತ್ರ ಸರ್ವೇ ಸಮೀಕ್ಷೆ ಮಾಡದೆ ಕೈ ಬಿಟ್ಟು ಹೋಗಿರುತ್ತಾರೆ.

ಆದರೆ ಇಂದಿಗೂ ಕಾರಣ ತಿಳಿದು ಬಂದಿಲ್ಲ ಮಾನ್ಯ ಜಿಲ್ಲಾಧಿಕಾರಿಗಳಾದ ತಾವುಗಳು ಸರ್ಕಾರದ ಸಮೀಕ್ಷೆ ಪಟ್ಟಿಯಲ್ಲಿ 14ನೇ ವಾರ್ಡಿನ ಮಾಜಿ ದೇವದಾಸಿಯ. ಮಹಿಳೆಯರು 35ಕ್ಕೂ ಹೆಚ್ಚು ಜನರಿದ್ದು ಅವರ ಹೆಸರುಗಳನ್ನು ಸರ್ಕಾರದ ಪಟ್ಟಿಯಲ್ಲಿ ಸೇರಿಸಿ ನಮಗೆ ನ್ಯಾಯಯುತವಾಗಿ ಸುಮಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳ ವಂಚನೆಗೆ ಒಳಗಾಗಿರುವ ನಾವು, ನಮ್ಮ ಹೆಸರುಗಳನ್ನು ಸರ್ವೇ ಪಟ್ಟಿಯಲ್ಲಿ ಸೇರಿಸಿ ಸಂಬಂಧಪಟ್ಟಂತಹ ಇಲಾಖೆಗೆ ಕಳಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳಾದ ಎಸ್ ದಿವಾಕರ್ ರವರಿಗೆ ಮನವಿ ಪತ್ರವನ್ನು ನೀಡಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿಯ ಮುಖ್ಯ ಅಧಿಕಾರಿಗಳಾದ ಫಿರೋಜ್ ಖಾನ್ ಅವರನ್ನು ಕರೆಯಿಸಿ ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವಂತಹ 14ನೇ ವಾರ್ಡಿನ ಸರ್ವೇ ಕುರಿತು ಮಾಹಿತಿ ಪಡೆಯಿರಿ ಎಂದು ತಿಳಿಸಿ ದೇವದಾಸಿ ಮಹಿಳೆಯರಿಗೆ ಈ ಬಾರಿ ಸರ್ಕಾರದ ಅನ್ವಯ ಸರ್ವೇ ಪಟ್ಟಿಯಲ್ಲಿ ಸೇರಿಸುವ ಅವಕಾಶವಿದ್ದರೆ ಸೇರಿಸುವಂತೆ ಭರವಸೆ ನೀಡಿದರು.
ಸಂದರ್ಭದಲ್ಲಿ ಮಾಜಿ ದೇವದಾಸಿ ಮಹಿಳೆಯರಾದ ಪೂಜಾರಿ ಗಂಗಮ್ಮ, ಸಮಾದೇಮ್ಮ,ಲೋಕಮ್ಮ, ಮರಿಯಮ್ಮ,ರತ್ನಮ್ಮ, ಗೌರಮ್ಮ,ಶಾರದಮ್ಮ, ರೇಣುಕಮ್ಮ,ತಾಳಿಕಾಯಿ ಹಾಲಮ್ಮ,ಸೊಲ್ಲಾಪುರ ಹುಲಿಗೆಮ್ಮ,ದಂಡೆಮ್ಮ, ಪೂಜಾರಿ ಗೌರಮ್ಮ, ಪೂಜಾರಿ ರೇಣುಕಮ್ಮ ಈಗೆ ಹತ್ತಾರು ಮಹಿಳೆಯರು ಮನವಿ ಸಲ್ಲಿಸಿದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ