ಮಾದಿಗ ಸಮುದಾಯದ ಸಮಾನ ಮನಸ್ಕರ ವೇದಿಕೆಯಿಂದ ಗದ್ದರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಕೂಡ್ಲಿಗಿ ಆಗಷ್ಟ.11

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರರಂದು ಬೆಳಿಗ್ಗೆ 11:00ಗೆ ತೆಲಂಗಾಣದ ದಲಿತ ಕ್ರಾಂತಿ ಗೀತೆಗಳಿಂದ ಹೆಸರಾದಂತಹ ಗಾಯಕ ಗದ್ದರ್ ವರು ಹೈದರಾಬಾದಿನ ಹಾಸ್ಪಿಟಲ್ ನಲ್ಲಿ ಅನಾರೋಗ್ಯದಿಂದ ಅಕಾಲಿಕ ನಿಧಾನ ಆಗಿದ್ದರಿಂದ ಅವರ ಭಾವಚಿತ್ರವನ್ನು ಡಾಕ್ಟರ್ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಇಟ್ಟು ನೆರೆದಂತ ಎಲ್ಲಾರು ಶ್ರದ್ಧಾಂಜಲಿ ಕೋರಿ ಪುಷ್ಪ ನಮನ ಅರ್ಪಿಸಿದರು.

ಕೂಡ್ಲಿಗಿಯ ಮಾದಿಗ ಸಮುದಾಯದ ಸಮಾನ ಮನಸ್ಕರ ವೇದಿಕೆಯಿಂದ ಹಮ್ಮಿಕೊಂಡಿದ್ದ ಭಾವಪೂರ್ಣ ಶ್ರದ್ಧಾಂಜಲಿಯನ್ನು ದಲಿತ ಹಾಗೂ ಇತರ ಸಮುದಾಯದವರು ಸಹ ಭಾಗವಹಿಸಿ ಎಲ್ಲಾ ಮುಖಂಡರುಗಳು ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಎನ್ ಟಿ ಶ್ರೀನಿವಾಸ್ ಅವರು ಸಹ ಭಾಗವಹಿಸಿ ಪುಷ್ಪ ನಮನ ಸಲ್ಲಿಸಿದರು. ನಂತರ ಕೂಡ್ಲಿಗಿಗೆ ಪ್ರಥಮ ಬಾರಿಗೆ ಪ್ರಗತಿ ಪರಿಶೀಲನಾ ಕಾರ್ಯಕ್ರಮಕ್ಕೆ ಆಗಮಿಸಿದಂತ ವಿಜಯನಗರ ಜಿಲ್ಲೆಯ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಸತಿ ಮತ್ತು ವಕ್ಪ್ ಅಲ್ಪಸಂಖ್ಯಾತರ ಇಲಾಖೆಯ ಸಚಿವರಾದಂತ ಬಿ. ಝಾಡ್. ಜಮೀರ್ ಅಹಮದ್ ಖಾನ್ ರವರು ಸಹ ಅಂಬೇಡ್ಕರ್ ಭಾವಚಿತ್ರಕ್ಕೆ ಹಾಗೂ ಗದ್ದರ್ ಅವರ ಭಾವಚಿತ್ರಕ್ಕೆ ಪುಷ್ಪನವನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ತಾಲೂಕ್ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ವಿಶಾಲಕ್ಷಮ್ಮ ರಾಜಣ್ಣ ರವರು ಗದ್ದರ್ ರವರ ಕುರಿತು ಮಾತನಾಡಿದರು ಈ ಸಂದರ್ಭದಲ್ಲಿ ಹತ್ತಾರು ಮುಖಂಡರುಗಳು ಹಾಗೂ ಮಹಿಳೆಯರು ಭಾಗವಹಿಸಿ ಭಾವಪೂರ್ವ ಶ್ರದ್ಧಾಂಜಲಿ ನಮನ ಸಲ್ಲಿಸಿದರು
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ. ಕೂಡ್ಲಿಗಿ