ಉಪ ತಹಶೀಲ್ದಾರ್ ಸವಿತಾ ಇವರ ದಕ್ಷ ಮತ್ತು ಜನಪರ ಆಡಳಿತಕ್ಕೆ – ವ್ಯಾಪಕ ಮೆಚ್ಚುಗೆ.
ಉಡುಪಿ ಸ.08

ತಾಲ್ಲೂಕ ಕಚೇರಿಯ ಉಪ ತಹಶೀಲ್ದಾರ್ ಸವಿತಾ ಮೇಡಂ ಅವರು ತಮ್ಮ ಪ್ರಾಮಾಣಿಕ ಮತ್ತು ದಕ್ಷ ಸೇವೆಯಿಂದಾಗಿ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಆಡಳಿತದಲ್ಲಿ, ಇತ್ತೀಚಿಗೆ ನಡೆದ ಚುನಾವಣಾ ಪ್ರಕ್ರಿಯೆ ಯಾವುದೇ ಅಡೆ ತಡೆಗಳಿಲ್ಲದೆ ಸುಗಮವಾಗಿ ನಡೆಯಿತು.
ಚುನಾವಣಾ ಕಾರ್ಯಗಳಲ್ಲಿ ದಕ್ಷತೆ:-
ಚುನಾವಣೆ ಸಮಯದಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆಯುವುದು, ತಿದ್ದುಪಡಿ ಮಾಡುವುದು, ಮತ್ತು ಹೊಸ ಸೇರ್ಪಡೆಯಂತಹ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದರಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಅಲ್ಲದೆ, ಚುನಾವಣೆಗೆ ಸಂಬಂಧಿಸಿದ ಬಿಲ್‌ಗಳನ್ನು ಸಕಾಲದಲ್ಲಿ ಪಾವತಿಸುವ ಮೂಲಕ ಜಿಲ್ಲಾಡಳಿತಕ್ಕೆ ಉತ್ತಮ ಗೌರವ ತಂದು ಕೊಟ್ಟಿದ್ದಾರೆ.ಸಿಬ್ಬಂದಿಯೊಂದಿಗೆ ಉತ್ತಮ ಬಾಂಧವ್ಯ:-ಸವಿತಾ ಮೇಡಂ ಅವರು ತಮ್ಮ ಕಚೇರಿ ಸಿಬ್ಬಂದಿಗೆ ಪ್ರೀತಿಯ ವ್ಯಕ್ತಿ. ಹೊಸದಾಗಿ ನೇಮಕ ಗೊಂಡ ಸಿಬ್ಬಂದಿಗೆ ತರಬೇತಿ ನೀಡಿ, ಅವರ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ವೈಯಕ್ತಿಕವಾಗಿ ಗಮನ ಹರಿಸುತ್ತಾರೆ. ಉತ್ತಮ ಸಹಕಾರ ಮತ್ತು ಸಹಬಾಳ್ವೆಯ ಮೂಲಕ ಸಿಬ್ಬಂದಿಯಲ್ಲಿ ಉತ್ತಮ ಸೇವಾ ಮನೋಭಾವ ಬೆಳೆಸಿದ್ದಾರೆ. ಇದು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸಹಕಾರಿ ಯಾಗಿದೆ.
ಸಾರ್ವಜನಿಕ ಸ್ನೇಹಿ ಸೇವೆ:-
ಎಷ್ಟೇ ಕೆಲಸದ ಒತ್ತಡವಿದ್ದರೂ, ಸವಿತಾ ಮೇಡಂ ಅವರು ಕಚೇರಿಗೆ ಬರುವ ಸಾರ್ವಜನಿಕರ ಸಮಸ್ಯೆಗಳನ್ನು ಗೌರವ ಮತ್ತು ಸಹಾನುಭೂತಿ ಯಿಂದ ಆಲಿಸುತ್ತಾರೆ. ಹಳೆಯ ದಾಖಲೆಗಳ ಪ್ರತಿಗಳನ್ನು ನೀಡುವುದು, ಅದರಲ್ಲೂ ವಿಶೇಷವಾಗಿ ಮಾಹಿತಿ ಹಕ್ಕು ಅರ್ಜಿಯಂತಹ ವಿಷಯಗಳಲ್ಲಿ ವಿಳಂಬವಿಲ್ಲದೆ ತ್ವರಿತವಾಗಿ ವಿಲೇವಾರಿ ಮಾಡುತ್ತಾರೆ. ಅವರ ಈ ನಡೆ ಸಾರ್ವಜನಿಕರಲ್ಲಿ ಅವರ ಮೇಲೆ ನಂಬಿಕೆ ಮತ್ತು ವಿಶ್ವಾಸ ಹೆಚ್ಚಿಸಿದೆ.
.ಸಾರ್ವಜನಿಕರ ಅಭಿಪ್ರಾಯ:-
ಸವಿತಾ ಮೇಡಂ ಅವರ ಈ ದಕ್ಷ ಮತ್ತು ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತವು ಅವರಿಗೆ ಪ್ರಶಸ್ತಿ ನೀಡಿದರೆ. ಅದು ಅವರಿಗೆ ಇನ್ನಷ್ಟು ಉತ್ತಮ ಸೇವೆ ಮಾಡಲು ಪ್ರೇರಣೆ ನೀಡುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ