ಜಿಲ್ಲಾಧಿಕಾರಿಗಳ ನಡೆಯ ಕಡೆ ಕಾರ್ಯಕ್ರಮದಲ್ಲಿ ಸ್ಮಶಾನಕ್ಕಾಗಿ ಬಿರಾಮನಹಳ್ಳಿ ಗ್ರಾಮಸ್ಥರಿಂದ ಮನವಿ
ತರೀಕೆರೆ ಮಾರ್ಚ್ 18 — ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಎಂದು ತಹಶೀಲ್ದಾರ್ ಸಿಎಸ್ ಪೂರ್ಣಿಮಾ ಅವರು ಇಂದು ಹಾ ದಿಕೆರೆ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ತರೀಕೆರೆ, ಜಿಲ್ಲಾ ಪಂಚಾಯಿತಿ ಚಿಕ್ಕಮಗಳೂರು, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಭೇಟಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಹೇಳಿದರು.
ಈ ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಬಂದು ಉಪಸ್ಥಿತರಿದ್ದಾರೆ ಗ್ರಾಮಸ್ಥರು ತಮ್ಮ ಹವಹಾಲುಗಳನ್ನು ಕೊಟ್ಟು ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.ಈ ಈ ಸಂದರ್ಭದಲ್ಲಿ ಬಿ ರಾಮನಹಳ್ಳಿ ಗ್ರಾಮಸ್ಥರು ಸರ್ವೇ ನಂಬರ್ 13ರಲ್ಲಿ ಸ್ಮಶಾನವನ್ನು ಮಂಜೂರು ಮಾಡಿಸಿ ಕೊಡಲು ಹಲವಾರು ಬಾರಿ ಮನವಿ ಕೊಟ್ಟರು ಕಚೇರಿಗೆ ಅಲೆದಾಡಿದ್ದೇವೆ ಎಂದು ಹೇಳಿದರು.
ತಸಿಲ್ದಾರ್ ರವರು ಸರ್ವೆ ಮಾಡಿಸಿ ಜಾಗ ಗುರ್ತಿಸಿ ಮಂಜೂರು ಮಾಡಿಕೊಡುವುದಾಗಿ ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ರಾಜು ಮಾತನಾಡಿ ಹಾದಿಕೆರೆ ಗ್ರಾಮದಲ್ಲಿ ವಾಸವಾಗಿರುವವರಿಗೆ ಮನೆಗಳ ಹಕ್ಕುಪತ್ರಗಳಿಲ್ಲ ಹಾಗೂ ಮನೆ ನಿವೇಶನ ರೈತರಿಗೆ ಮನೆ ನಿವೇಶನಗಳನ್ನು ಮಂಜೂರು ಮಾಡಿಕೊಡಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೌರಮ್ಮ ಮಾತನಾಡಿ ಸರ್ಕಾರಿ ಸವಲತ್ತುಗಳನ್ನು ಜನರಿಗೆ ತಿಳಿಸಿ ತಲುಪಿಸಬೇಕು. ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ವಸಂತಕುಮಾರ್ ಹಾಗೂ ತೋಟಗಾರಿಕೆ ಇಲಾಖೆಯ ಲತಾ, ಸಮಾಜ ಕಲ್ಯಾಣ ಇಲಾಖೆಯ ಅಣ್ಣಯ್ಯ, ಪಶು ಸಂಗೋಪನ ಇಲಾಖೆಯ ಬಸವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುನಿತಾ ಟಿ ಎಂ, ಮೆಸ್ಕಾಂನ ರಘುನಂದನ್ ಆರೋಗ್ಯ ಇಲಾಖೆಯ ಶಕುಂತಲಾ, ಅರಣ್ಯ ಇಲಾಖೆಯ ದಿನೇಶ್ ರವರು ಇಲಾಖೆಗಳಿಂದ ದೊರೆಯುವ ಸೌಲತ್ತುಗಳ ಬಗ್ಗೆ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ತಹಶೀಲ್ದಾರ್ ಗ್ರೇಡ್ 2 ಗೋವಿಂದಪ್ಪ ರವರು ಮಾತನಾಡಿ ಎಲ್ಲಾ ಇಲಾಖೆಗಳಿಂದ ಮಾಹಿತಿ ಪಡೆದುಕೊಂಡಿರುವ ಎಲ್ಲರೂ ಸಂಬಂಧಪಟ್ಟ ಇಲಾಖೆಗಳಿಗೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಬೇಕೆಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಮೌಳಿ, ಅರುಣ, ರೇಣುಕಾ, ನಾಗಮ್ಮ, ಅಂಬಿಕಾ, ಉಪಾಧ್ಯಕ್ಷರಾದ ರತ್ನಮ್ಮ, ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್, ಉಪಸ್ಥಿತರಿದ್ದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಿರ್ಮಲ, ರಾಜ್ಯೋತ್ಸವ ನಿರೀಕ್ಷಕರಾದ ಕಾಂತರಾಜ್ ನಿರೂಪಿಸಿ, ಗ್ರಾಮ ಲೆಕ್ಕಾಧಿಕಾರಿ ಧನಂಜಯ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು : ಎನ್. ವೆಂಕಟೇಶ್ ತರೀಕೆರೆ