ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿಯ ವಿಜಯ ಸಂಕಲ್ಪ ಯಾತ್ರೆ
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿಯ ವಿಜಯ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಅರಗ ಜ್ಞಾನೇಂದ್ರ ರವರು ಮಾತನಾಡುತ್ತ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಸರಕುಗಳಿಗೆ ಬಹಳ ದೊಡ್ಡ ಮಾರುಕಟ್ಟೆ ಇದೆ ಎಂದು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಜಗತ್ತು ಭಾರತದ ಕಡೆ ನೋಡುವಂತೆ ಮಾಡಿದ್ದಾರೆ.
ನಮ್ಮ ದೇಶವನ್ನು ಬ್ರಿಟಿಷರು ಆಳ್ವಿಕೆ ಮಾಡಿದ್ದರು. ಇಂದು ನಮ್ಮ ದೇಶದ ಭಾರತೀಯರೊಬ್ಬರು ಬ್ರಿಟಿಷರ ದೇಶದಲ್ಲಿ ಅಧ್ಯಕ್ಷರಾಗಿ ಆಳ್ವಿಕೆ ಮಾಡುತ್ತಿದ್ದಾರೆ ಎಂದು ಹೇಳಿದರು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ಅಡಿ ಬಡವರಿಗೆ ಚಿಕಿತ್ಸೆಗೆ 5 ಲಕ್ಷ ಹಣದ ವಿಮೆ ಮಾಡಿದೆ ಸ್ವತಂತ್ರ ಬಂದಾಗಿನಿಂದ ಕಾಂಗ್ರೆಸ್ ಪಕ್ಷವು ಜನರಿಗೆ ಸುಳ್ಳು ಹೇಳಿ ಮೋಸ ಮಾಡಿಕೊಂಡೆ ಬಂದಿದೆ, ಅವಧಿ ಮುಗಿದ ಗ್ಯಾರಂಟಿ ಕಾರ್ಡನ್ನು ಕೊಡುತ್ತಿದ್ದಾರೆ ಕಾಂಗ್ರೆಸನವರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸನವರು ಮೂರು ತಲೆಮಾರಿನವರೆಗೂ ಕುಳಿತು ತಿನ್ನುವಷ್ಟು ಹಣ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇಡೀ ದೇಶದಲ್ಲಿಯೇ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡುತ್ತಿದ್ದಾರೆ ಎಂದು ಹೇಳಿದರು. ಶಾಸಕರಾದ ಡಿ ಎಸ್ ಸುರೇಶ್ ರವರು ಮಾತನಾಡಿ ತರೀಕೆರೆ,ಅಜ್ಜಂಪುರ ಎರಡು ತಾಲೂಕುಗಳಿಗೂ ಸಾವಿರಾರು ಕೋಟಿ ರೂ ಅನುದಾನದಲ್ಲಿ ಅಭಿವೃದ್ಧಿ ಮಾಡಿದ್ದೇವೆ, ವಿಜಯ ಸಂಕಲ್ಪ ಯಾತ್ರೆಯ ಮುಖಾಂತರ ಭಾರತೀಯ ಜನತಾ ಪಾರ್ಟಿಯನ್ನು ಗೆಲ್ಲಿಸೋಣ ಎಂದು ಸಂಕಲ್ಪ ಮಾಡೋಣ, ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರಗಳಿಂದ ಮನೆಮನೆಗೂ ಶುದ್ಧ ಕುಡಿಯುವ ನೀರಿನ ಯೋಜನೆಗೆ 625 ಕೋಟಿ ಅನುದಾನ ಆಗಿದೆ, ಸ್ವಚ್ಛ ಭಾರತ ಯೋಜನೆಯಿಂದ ಎಲ್ಲಾ ಗ್ರಾಮಗಳನ್ನು ಸ್ವಚ್ಛವಾಗಿರಲು ಕೆಲಸ ಮಾಡಿದೆ.
ಭದ್ರಾ ಜಲಾಶಯದಿಂದ 79 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೇವೆ ನಮ್ಮ ದೇಶಕ್ಕೆ ಸಂವಿಧಾನ ಕೊಟ್ಟಂತಹ ಡಾ. ಬಿಆರ್ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಹಸ್ತದಿಂದ ಅನಾವರಣ ಮಾಡಿದ್ದಾರೆ ಎಂದು ಹೇಳಿದರು.
ಜಿಲ್ಲಾ ವರದಿಗಾರರು: ಎನ್.ವೆಂಕಟೇಶ್ ತರೀಕೆರೆ