ಡಾ. ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮ ಆಚರಿಸಿದರು
ವಿಜಯನಗರ ಜಿಲ್ಲೆ, ಕೊಟ್ಟೂರು ತಾಲೂಕಿನ ಪಟ್ಟಣದಲ್ಲಿ ಶುಕ್ರವಾರದಂದು ನಡೆದ ಡಾ. ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾದ ಆರ್ .ಪ್ರಕಾಶ್.ಇವರು ಕೊಟ್ಟೂರು ಪಟ್ಟಣದ ಗಾಂಧಿ ಸರ್ಕಲ್ ನಲ್ಲಿ 17 ಕೆಜಿ ಬೃಹತ್ ಮಟ್ಟದ ಕೇಕನ್ನು ಅಭಿಮಾನಿಗಳು ಅಪ್ಪು ಅವರ ಭಾವಚಿತ್ರವನ್ನು ಇಡುವುದರೊಂದಿಗೆ ಪುಷ್ಪ ನಮನ ಸಲ್ಲಿಸಿ ಅಪ್ಪು ಹುಟ್ಟು ಹಬ್ಬವನ್ನು ಕೇಕ್ ಕಟ್ ಮಾಡುವುದರ ಮೂಲಕ ಅಭಿಮಾನಿಗಳಿಗೆ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ಲೇವುಡ್ ಪುಸ್ತಕ ಹಾಗೂ ಹಮಾಲ ಕಾರ್ಮಿಕರಿಗೆ ಹಾಗೂ ಪೌರಕಾರ್ಮಿಕರಿಗೆ ಶಾಲು ಸನ್ಮಾನ ಮಾಡುವುದರ ಮೂಲಕ ಅಪ್ಪು ಹುಟ್ಟು ದಿನವನ್ನು ಸರ್ಕಾರ ಸ್ಪೂರ್ತಿ ದಿನವನ್ನಾಗಿ ಆಚರಣೆ ಮಾಡುವುದಕ್ಕೆ ಅಪ್ಪು ಅಭಿಮಾನಿಗಳಿಗೆ ತುಂಬಾ ಸಂತೋಷದ ವಿಷಯದೊಂದಿಗೆ ಅನ್ನ ಸಂತರ್ಪಣೆ ಕಾರ್ಯವನ್ನು ಮಾಡಲಾಯಿತು .



ಈ ಕಾರ್ಯಕ್ರಮದಲ್ಲಿ ಆರ್. ಪ್ರಕಾಶ್ ರವರು ಕೊಟ್ಟೂರು ಪಟ್ಟಣದ ಅಪ್ಪು ಅಭಿಮಾನಿಗಳು ಚಿರ ಸ್ಮರಣೀಯವಾಗಿ ಅಪ್ಪು ಮಾಡಿದ ಹತ್ತಾರು ಸೇವೆಗಳ ಸ್ಪೂರ್ತಿಯಾಗಿ ಈ ನನ್ನ ಚಿಕ್ಕ ಸೇವೆ ಮಾಡುತ್ತಿದ್ದೇನೆ ಎಂದು ಹುಟ್ಟು ದಿನವನ್ನು ನಮ್ಮ ಮನೆ ಮನದಲ್ಲಿ ಶಾಶ್ವತ ವಾಗಿ ಅಪ್ಪು ನಮ್ಮ ಹೃದಯದಲ್ಲಿ ಎಂದೆಂದಿಗೂ ಹೀರೋ ಹಾಗೆ ಇರುತ್ತಾರೆ , ಎಂದು ಅಭಿಮಾನಿ ಆರ್ ಪ್ರಕಾಶ್ ತಿಳಿಸುವುದರೊಂದಿಗೆ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ದಿನವನ್ನು ಆಚರಿಸಿದರು
ವರದಿ ರಾಘವೇಂದ್ರ ಸಾಲುಮನಿ ಕೂಡ್ಲಿಗಿ