ತೂಲಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಡಿ. ಭರಮನಗೌಡ ಆಯ್ಕೆ.
ತೂಲಹಳ್ಳಿ ಅಕ್ಟೋಬರ್.12

2023-24ನೇ ಸಾಲಿನ ಎರಡನೇ ಅವಧಿಗೆ ಚುನಾವಣೆಯಲ್ಲಿ ತೂಲಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆ ನಡೆಯಿತು ಒಂದು ಇ ಸಿ ನಿಂಗನಗೌಡ ಮತ್ತು ಡಿ ಭರನಗೌಡ ಇದರಲ್ಲಿ ನಿಂಗನಗೌಡರಿಗೆ 5 ಮತಗಳು ಭರಮನಗೌಡರಿಗೆ 7 ಮತಗಳು ಇರುವರಲ್ಲಿ ಡಿ ಭರಮನಗೌಡರು ಎರಡು ಮತಗಳ ಮೂಲಕ ಜಯಶೀಲರಾಗಿ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರ ಸ್ಥಾನಕ್ಕೆ ಶಾಖೀರಬೀ ಮತ್ತು ಕವಿತಾ ಹೆಚ್ ನಾಮಪತ್ರ ಸಲ್ಲಿಸಿರುತ್ತಾರೆ. ಇವರಲ್ಲಿ ಇಬ್ಬರು ಸಮನಾಗಿ ಆರು ಆರು ಮತಗಳನ್ನು ಪಡೆದು ಇವರಿಗೆ ಲಾಟರಿ ಮೂಲಕ ಶಾಖೀರಾಬಿ ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಗೊಂಡಿರುತ್ತಾರೆ.

2023 24 ನೇ ಸಾಲಿನ ಮೊದಲನೇ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಎರಡನೇ ಅವಧಿಗೆ ಅಧ್ಯಕ್ಷರಾಗಿದ್ದು ನನಗೆ ತುಂಬಾ ಖುಷಿಯಾಗಿದೆ ನಾನು ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದೆ ಆದರೆ ಈಗ ಒಂದು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದೀನಿ ಎಂದರೆ ಅದಕ್ಕೆ ಕಾರಣ ನನ್ನ ಸುತ್ತ ಮುತ್ತಲಿನ ಬಂಧು ಸ್ನೇಹ ಜೀವಿಗಳು ನನ್ನ ಹಿರಿಯರ ಆಶೀರ್ವಾದ ಇವರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತಾ ನಾನು ಸಾಯುವ ತನಕ ಇವರಿಗೆ ಚಿರ ನುಡಿಯಾಗಿರುತ್ತೇನೆ ಹಾಗೇನೆ ಸಾರ್ವಜನಿಕರಿಗೆ ಕುಂದು ಕೊರತೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವುದರಲ್ಲಿ ಅಧ್ಯಕ್ಷರಾಗಿ ಕಾರ್ಯ ನಡೆಸಿಕೊಂಡು ಹೋಗುತ್ತೇನೆಂದು ಡಿ ಭರಮನಗೌಡ ಹನುಮನಹಳ್ಳಿ ಅಧ್ಯಕ್ಷರು ತಮ್ಮ ಖುಷಿ ಹಂಚಿಕೊಂಡರು.ಈ ಸಂದರ್ಭದಲ್ಲಿ ಜಗದೀಶ್ ಸಮಾಜ ಕಲ್ಯಾಣ ಇಲಾಖೆ ಚುನಾವಣೆ ಅಧಿಕಾರಿಗಳು ,ಪ್ರಶಾಂತ್ ಕುಮಾರ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು , ಸಿದ್ದೇಶ್ ಲೆಕ್ಕ ಅಧಿಕಾರಿಗಳು ,ನಾಗರಾಜ್ ಎಚ್ ಡಾಟಾಎಂಟ್ರಿ ಹಾಗೂ ಕ್ಲರ್ಕ್ , ಪ್ರಕಾಶ ಬಿಲ್ ಕಲೆಕ್ಟರ್ ಹಾಗೂ ಸರ್ವ ಸದಸ್ಯರು ಮತ್ತು ಪೊಲೀಸ್ ಸಿಬ್ಬಂದಿ ವರ್ಗ ಸೇರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು