ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಿಸಿದ – ಎ.ಎಸ್.ಐ ಶಿವಲಿಂಗಪ್ಪಗೆ ಅಭ್ಯರ್ಥಿಗಳ ಕೃತಜ್ಞತೆ.
ಮಾನ್ವಿ ಆ.03

ಪಟ್ಟಣದಲ್ಲಿ ಇಂದು ನಡೆದ ಪೊಲೀಸ್ ಅರ್ಹತಾ ಪರೀಕ್ಷೆಗೆ ಆಗಮಿಸಿದ್ದ ಅಭ್ಯರ್ಥಿಗಳಿಗೆ ಮಾನ್ವಿ ಪೊಲೀಸ್ ಠಾಣೆಯ ಎ.ಎಸ್.ಐ ಶಿವಲಿಂಗಪ್ಪ ಅವರು ಮಾನವೀಯತೆ ಮೆರೆದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪೊಲೀಸ್ ಅರ್ಹತಾ ಪರೀಕ್ಷೆಗೆ ನಿಯೋಜನೆ ಗೊಂಡಿದ್ದ ಎ.ಎಸ್.ಐ ಶಿವಲಿಂಗಪ್ಪ ಅವರು ಗೊಂದಲದಲ್ಲಿದ್ದ ಪರೀಕ್ಷಾ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವುದರ ಜೊತೆಗೆ ಪಟ್ಟಣದಲ್ಲಿ ಬೇರೆ ಕಡೆ ಬದಲಾದ ಪರೀಕ್ಷಾ ಕೇಂದ್ರಗಳಿಗೆ ತಮ್ಮ ಸ್ವಂತ ವಾಹನದಲ್ಲಿ ಕರೆದೊಯ್ದರು.
ಪರೀಕ್ಷಾ ಸಮಯದೊಳಗೆ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ದೂರದ ಊರುಗಳು, ಹಳ್ಳಿಗಳಿಂದ ಬಂದಂತಹ ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಅವರ ಕೇಂದ್ರಗಳಿಗೆ ತಲುಪಿಸುವಲ್ಲಿ ನೆರವಾಗಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಎ.ಎಸ್.ಐ ಶಿವಲಿಂಗಪ್ಪ ಅವರ ಈ ಕಾರ್ಯಕ್ಕೆ ಅಭ್ಯರ್ಥಿಗಳು ಮತ್ತು ಪೋಷಕರು ಧನ್ಯವಾದಗಳನ್ನು ತಿಳಿಸಿದ್ದಾರೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

