ಪರ ಬ್ರಹ್ಮ ಸ್ವರೂಪ ಸದ್ಗುರು – ಗೀತಾ ಪ್ರಕಾಶ್.
ಚಳ್ಳಕೆರೆ ಆ.03

ಗುರು ಮಹಿಮೆಯ ಅನಂತತೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಶ್ರೀಮತಿ ಗೀತಾ ಪ್ರಕಾಶ್ ಅವರಿಗೆ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ನಾಗರಾಜ್ ಅವರು ಸಿಹಿ ವಿತರಣೆ ಮಾಡಿದ ಕ್ಷಣಗಳು….. 🏵️
ಪರ ಬ್ರಹ್ಮ ಸ್ವರೂಪನಾದ ಸದ್ಗುರುವನ್ನು ಆಶ್ರಯಿಸಿ ನಿಜವಾದ ಅರಿವನ್ನು ಪಡೆದು ಜೀವನ ಸಾರ್ಥಕ ಮಾಡಿ ಕೊಳ್ಳಬೇಕು ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯರಾದ ಶ್ರೀಮತಿ ಗೀತಾ ಪ್ರಕಾಶ್ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ತಿಪ್ಪಮ್ಮ ಉಮಾಶಂಕರ್ ಅವರ ಸೂಜಿ ಮಲ್ಲೇಶ್ವರ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ “ಗುರು ಪೂರ್ಣಿಮೆ” ಯ ಪ್ರಯುಕ್ತ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಗುರು ಮಹಿಮೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಎಚ್ ಲಕ್ಷ್ಮೀದೇವಮ್ಮ, ಪ್ರೇಮಾ, ತಿಪ್ಪಮ್ಮ, ಸರಸ್ವತಿ, ಗೀತಾ ನಾಗರಾಜ್, ಪುಷ್ಪಲತಾ, ದ್ರಾಕ್ಷಾಯಣಿ, ಜಯಮ್ಮ, ಗೀತಾ ಸುಂದರೇಶ್ ದೀಕ್ಷಿತ್, ಯಶೋಧಾ, ವಿಜಯಲಕ್ಷ್ಮೀ, ಸುಧಾಮಣಿ, ಮೋಹಿನಿ, ಯತೀಶ್ ಎಂ ಸಿದ್ದಾಪುರ, ಪ್ರಮೀಳಾ, ಸುವರ್ಣ ನಾಗರಾಜ್ ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

