ಆರ್ಥಿಕವಾಗಿ ದುರ್ಬಲರನ್ನು ಗುರುತಿಸಿ ನೆರವು ನೀಡಿ – ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ.

ಆಲಮೇಲ ಆ.03

ಬಣಜಿಗ ಸಮಾಜದ ಸಂಘಟನೆ ಬಲಿಷ್ಠವಾಗ ಬೇಕಾದರೆ ಸಮಾಜದ ಎಲ್ಲಾ ವರ್ಗದವರನ್ನು ಒಗ್ಗೂಡಿಸಿ ಕೊಂಡು ಸಾಗಬೇಕು. ಶಿಕ್ಷಣ, ಉದ್ಯೋಗ ಹಾಗೂ ಸ್ವಾವಲಂಬನೆಯ ಮೂಲಕ ಯುವ ಜನತೆ ಮುಂದೆ ಬರಬೇಕು. ಸಮಾಜದ ಅಭಿವೃದ್ಧಿಗೆ ಹಿರಿಯರ ಅನುಭವ ಮತ್ತು ಯುವಕರ ಶಕ್ತಿಯನ್ನು ಸಮರ್ಪಕವಾಗಿ ಬಳಸಿ ಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಂಸದ ಜಗದೀಶ ಶೆಟ್ಟರ ಹೇಳಿದರು.

ಅವರು ಆಲಮೇಲ‌ ಪಟ್ಟಣದ ವಿಶ್ವೇಶ್ವರ ದೇವಸ್ಥಾನದಲ್ಲಿ ನಡೆದ ತಾಲ್ಲೂಕು‌‌ ಬಣಜಿಗ ಸಮಾವೇಶವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅವರನ್ನು ಉನ್ನತ ಸ್ಥಾನಗಳಿಗೆ ತಲುಪಿಸುವ ಜವಾಬ್ದಾರಿ ಸಮಾಜದ ಮೇಲಿದೆ. ಸಮಾಜದ ಪ್ರತಿಯೊಬ್ಬರೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಮಾಜದ ಸಂಘಟನೆ ಕೇವಲ ಚುನಾವಣೆ ಅಥವಾ ಸಮಾವೇಶಗಳಿಗೆ ಸೀಮಿತವಾಗ ಬಾರದು. ವರ್ಷ ಪೂರ್ತಿ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸದಸ್ಯರಲ್ಲಿ ಪರಸ್ಪರ ಸಹಕಾರ, ವಿಶ್ವಾಸ ಮತ್ತು ಒಗ್ಗಟ್ಟನ್ನು ಬೆಳೆಸ ಬೇಕು. ಸಮಾಜದ ಪ್ರಗತಿಗಾಗಿ ಎಲ್ಲರೂ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದೇ ಕುಟುಂಬದಂತೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಯುವಕರು ಶಿಕ್ಷಣದ ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸಿ ಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳಬೇಕು. ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಅವರು ಹೇಳಿದರು.

ಶಾಸಕ ಅಶೋಕ ಮನಗೂಳಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಣಜಿಗ ಸಮಾಜ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಮೇಶ‌ ಭೂಸನೂರ, ದೊಡ್ಡಪ್ಪಗೌಡ ಪಾಟೀಲ, ಮಾಜಿ ಪರಿಷತ್ ಸದಸ್ಯ ಅರುಣ ಶಹಾಪುರ ವೇದಿಕೆಯಲ್ಲಿದ್ದರು.

ಶ್ರೀ ರಮರೂಢ ಮಠದ ಶಂಕರಾರೂಢ ಸ್ವಾಮೀಜಿ, ಶ್ರೀ ಪ. ಬ್ರ ಚಂದ್ರಶೇಖರ ಶಿವಾಚಾರ್ಯರು ಶ್ರೀ ಗುರು ಸಂಸ್ಥಾನ ಹಿರೇಮಠ ಅಲಮೇಲ.ಶ್ರೀ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ವಿರಕ್ತಮಠದ ಆಲಮೇಲ. ಶ್ರೀ ಶ್ರೀಶೈಲಯ್ಯ ಮಹಾಸ್ವಾಮಿಗಳು ಆಳ್ಳೋಳಿಮಠ ಆಲಮೇಲ. ಶ್ರೀ ರಾಂಪೂರಮಠದ ನಿತ್ಯಾನಂದ ಶಿವಯೋಗಿಗಳು ಕಾರ್ಯಕ್ರಮದ‌ ಸಾನಿಧ್ಯ ವಹಿಸಿದ್ದರು.

ಕಾರ್ಯಕ್ರಮದ‌ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷ ಸಿದ್ಧಲಿಂಗ ಸುಬೇಧಾರ ವಹಿಸಿದ್ದರು. ಗುರುಲಿಂಗಪ್ಪ ಡಿ.ಅಂಗಡಿ ಬಿಜೆಪಿ ಜಿಲ್ಲಾಧ್ಯಕ್ಷರು. ಶ್ರೀ ರಮೇಶ ಸಾಳುಂಕಿ ರಾಜ್ಯ ಕಾರ್ಯಕಾರಣಿ ಸದಸ್ಯರು. ಕ.ರಾ.ಬ.ಕ್ಷೇ ಸಂಘ ಬೆಂಗಳೂರು. ವಿಜಯಪುರ. ಶಿವಕುಮಾರ ಜಿ ಗುಂದಗಿ ಅಧ್ಯಕ್ಷರು ಅರ್ಬನ್ ಬ್ಯಾಂಕ್ ಅಲಮೇಲ. ಬಸಣ್ಣ ಎಂ ಗುಣಾರಿ ಅಧ್ಯಕ್ಷರು ಕ.ರಾ.ಬ.ಕ್ಷೇ ಸಂಘ ಆಫಜಲಪುರ. ಮುತ್ತು ಎಂ ಮುಂಡೇವಾಡಿ. ಅಧ್ಯಕ್ಷರು ಕ.ರಾ.ಬ.ಕ್ಷೇ ಸಂಘ ಸಿಂದಗಿ. ಶ್ರೀ ಸಂಗಣ್ಣ ಜಿ. ಹೀರಾಬಟ್ಟಿ ಅಧ್ಯಕ್ಷರು ಕ.ರಾ.ಬ.ಕ್ಷೇ ಸಂಘ ಇಂಡಿ. ಬಸವರಾಜ ಧನಶ್ರೀ. ಶ್ರೀ ಡಾ, ರುದ್ರಪ್ಪ ಎಸ್. ಗೂಗವಾಡ. ನಿರ್ದೇಶಕರು ಜಯದೇವ ಹೃದ್ರೋಗ ಆಸ್ಪತ್ರೆ ಕಲಬುರಗಿ. ಶ್ರೀ ಮಲ್ಲಿಕಾರ್ಜುನ ಎಸ್ ಜೋಗೂರ. ನಿರ್ದೇಶಕರು ಕೆಪಿಆರ್ ಅಲಮೇಲ. ಶ್ರೀ ರವೀಂದ್ರ ವಾರದ ಜಿಲ್ಲಾ ಉಪಾಧ್ಯಕ್ಷರು ಕ.ರಾ.ಬ.ಕ್ಷೇ ಸಂಘ ವಿಜಯಪುರ ಹಾಗೂ ಸಮಾಜದ ಮುಖಂಡರು ಹಿರಿಯರು ಯುವಕರು ಮಹಿಳೆಯರು ಭಾಗವಹಿಸಿದರು.

ಸಾಹಿತಿ ಅಶೋಕ ಹಂಚಲಿ ಉಪನ್ಯಾಸ ನೀಡಿದರು. ಮಲ್ಲಿಕಾರ್ಜುನ ಜೋಗುರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸ್ ಎಸ್‌ಎಲ್ ಸಿ, ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಗಳಿಗೆ ತಲಾ ೨ ಸಾವಿರ ರೂ. ನಗದು, ಫಲಕ ನೀಡಿ ಗೌರವಿಸಲಾಯಿತು.

ನೂತನ ತಾಲ್ಲೂಕು ಘಟಕ, ಮಹಿಳಾ‌ಘಟಕ, ಯುವ ಘಟಕಗಳ ಪದಾಧಿಕಾರಿಗಳ ಪದಗ್ರಹಣ ನಡೆಯಿತು.

ಶಿವಶರಣ ಗುಂದಗಿ ಸ್ವಾಗತಿಸಿದರು. ಶ್ರೀಶೈಲ ಮಠಪತಿ ನಿರೂಪಿಸಿದರು. ಶಿವಾನಂದ‌ ಮಾರ್ಸನಳ್ಳಿ ವಂದಿಸಿದರು.

ಇದೇ‌ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರೂಪಕಗಳು ಜರುಗಿದವು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಪ್ಪಯ್ಯ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button