ಕೃಷಿ ಆಧಾರಿತ ಆಹಾರ ಉದ್ದಿಮೆಗಳಿಂದ ಲಾಭ – ಡಾ. ಶಿವಶಂಕರ ಮೂರ್ತಿ.
ಇಂಡಿ ಮಾರ್ಚ್.14

ಕೃಷಿ ಉತ್ಪನ್ನ ವಸ್ತುಗಳನ್ನು ಮೌಲ್ಯವರ್ಧನ ಮಾಡಿ ಮಾರುವದರಿಂದ ಹೆಚ್ಚು ಲಾಭ ಗಳಿಸಬಹುದು ಅದಕ್ಕಾಗಿ ಸಣ್ಣ ಸಣ್ಣ ಆಹಾರ ಉದ್ದಿಮೆಯತ್ತ ರೈತರು ಆಸಕ್ತಿ ವಹಿಸಿ ರೈತರು ಲಾಭಗಳಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಶಂಕರ ಮೂರ್ತಿ ಹೇಳಿದರು. ಪಟ್ಟಣದ ತಹಸೀಲ್ದಾರ ಸಭಾ ಭವನದಲ್ಲಿ ಖಾದಿ ಗ್ರಾಮೋದ್ಯೋಗ ಆಯೋಗ ಹುಬ್ಬಳ್ಳಿ, ಜಿಲ್ಲಾ ಕೈಗಾರಿಕೆ ಕೇಂದ್ರ ವಿಜಯಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ ಅಡಿ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿರಿ ಧಾನ್ಯ , ನಿಂಬೆ ಮೌಲ್ಯವರ್ಧನ ಮಾಡುವದು,ಜೇನು ಸಾಕಾಣಿಕೆ,ರೇಷ್ಮೆ ಕೃಷಿ, ಎರೆಹುಳು ಸಾಕಾಣಿಕೆ, ಅಣಬೆ ಮಾಡಿ ರೈತರು ಅಧಿಕ ಲಾಭ ಪಡೆಯಬಹುದು. ಖನಿಜಾಧಾರಿತ, ಅರಣ್ಯಾಧಾರಿತ, ಕೃಷಿ ಆಧಾರಿತ, ಪಾಲಿಮರ ಮತ್ತು ರಸಾಯನಿಕ ಆಧಾರಿತ, ಎಂಜಿನಿಯರಿಂಗ್ ಹಾಗೂ ಅಸಾಂಪ್ರದಾಯಕ ಶಕ್ತಿ, ಸೇವಾ ಉದ್ದಿಮೆಗಳು ಸೇರಿದಂತೆ ರೈತರು ಪಿಎಮ್ ಈಜಿಪಿ ಯೋಜನೆ ಅಡಿ ಬ್ಯಾಂಕಿನಿಂದ ಸಾಲ ಮತ್ತು ಸಬ್ಸಿಡಿ ಪಡೆದು ರೈತರು ಲಾಭ ಗಳಿಸಬಹುದು ಎಂದರು.ರೈತರು ಹೊಸತನವುಳ್ಳ,ಅವಿಷ್ಕಾರವುಳ್ಳ , ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಉದ್ದಿಮೆಗಳನ್ನು ತೆಗೆಯಬೇಕು. ರೈತರು ಮಾಹಿತಿಯ ಕೊರತೆ ಅನುಭವಿಸುತ್ತಿದ್ದು ಇಲಾಖೆ ಅವರಿಗೆ ಮಾಹಿತಿ ನೀಡುವ ಮೂಲಕ ರೈತರ ಮನಸ್ಸು ಬದಲಾವಣೆ ಮಾಡಬೇಕು ಎಂದರು.ಜಿಲ್ಲಾ ಅಭಿವೃದ್ದಿ ಅಧಿಕಾರಿ ಸುಮಿತ್ರಾ ದಳವಾಯಿ,ಇಂಡಿಯ ಕೆನೆರಾ ಬ್ಯಾಂಕಿನ ಅಧಿಕಾರಿ ಮುರಗೇಶ ಗುರುಬೆಟ್ಟ, ರೈತ ಮುಖಂಡರಾದ ಮಲ್ಲಿಕಾರ್ಜುನ ಮಡ್ಡಿಮನಿ,ರವಿಕಿರಣ ಚವಡಿಹಾಳ,ಚಂದ್ರು ಕಾಂಬಳೆ ಮಾತನಾಡಿದರು.ಇದೇ ವೇಳೆ ಸಣ್ಣ ಕೈಗಾರಿಕೆ ಸ್ಥಾಪಿಸಿ ಯಶಸ್ವಿಯಾದ ಲತಾ ಕುಲಕರ್ಣಿ, ಅನ್ನಪೂರ್ಣಾರೆಬಿನಾಳ,ಪರಶುರಾಮ ಚಾಬುಕಸವಾರ,ಮಲ್ಲಿಕಾರ್ಜುನ ಹಾವಿನಾಳ,ವಿಜಯಕುಮಾರ ದಳವಾಯಿ, ಪರಮೇಶ್ವರ ಬಜಂತ್ರಿ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಭೆಯಲ್ಲಿ ಸುಭಾಸ ಬಳಮಕರ, ಚಂದ್ರಶೇಖರ ಹಳಗುಣಕಿ ಮಾವಿನಹಳ್ಳಿ, ಮಂಗಲಾ ಪಾಟೀಲ, ಸರಸ್ವತಿ ದೇಶಪಾಂಡೆ, ಮಹಾದೇವಿ ಕುಂಬಾರ ಮತ್ತಿತರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ